ಹರಕೆಯ ಕುರಿಯಾದ ಟೋಬಿ: ಅಪ್ಪು ಕೇಳಿದ್ದ ಕತೆ ಟೋಬಿಯಾಗೋಕೆ ಹಿಂದೇಟು ಹಾಕಿದ್ದು ಯಾಕೆ?
ಕನ್ನಡ ಚಿತ್ರರಂಗದ ಖಡಕ್ ಪ್ರತಿಭೆಗಳಿಗೆ ಇದೀಗ ಸುವರ್ಣ ಕಾಲ. ಕೌಸಲ್ಯಾ ಸುಪ್ರಜಾ, ನಮೋಭೂತಾತ್ಮ ಸಕ್ಸಸ್ ಸದ್ದು ಕೇಳುತ್ತಿದ್ದಂತೆ ಇದೀಗ ಅದೇ ಸಕ್ಸಸ್ ಹಾದಿಯಲ್ಲಿ ನಡಿಯೋಕೆ ಸದ್ದು ಮಾಡೋಕೆ ಬರ್ತಿದೆ ಟೋಬಿ.
ಕನ್ನಡ ಚಿತ್ರರಂಗದ ಖಡಕ್ ಪ್ರತಿಭೆಗಳಿಗೆ ಇದೀಗ ಸುವರ್ಣ ಕಾಲ. ಕೌಸಲ್ಯಾ ಸುಪ್ರಜಾ, ನಮೋಭೂತಾತ್ಮ ಸಕ್ಸಸ್ ಸದ್ದು ಕೇಳುತ್ತಿದ್ದಂತೆ ಇದೀಗ ಅದೇ ಸಕ್ಸಸ್ ಹಾದಿಯಲ್ಲಿ ನಡಿಯೋಕೆ ಸದ್ದು ಮಾಡೋಕೆ ಬರ್ತಿದೆ ಟೋಬಿ. ನಿನ್ನೆಯಷ್ಟೆ ಟೋಬಿ ಟ್ರೈಲರ್ ರಿಲೀಸ್ ಆಗಿದ್ದು ಜನ ಒಂದು ಕ್ಷಣ ಬೆಚ್ಚಿಬಿದ್ದು ಆಲೋಚನೆಗೆ ಒಳಗಾಗಿದ್ದಾರೆ. ಮಾರಿಯಾಗಿ ಬಂದ ಟೋಬಿಗೆ ರಕ್ಷಿತ್ -ರಿಷಬ್ ಸಾಥ್ ನೀಡಿದ್ದಾರೆ. ಟ್ರೈಲರ್ ಲಾಂಚ್ ಈವೆಂಟ್ ಅದ್ದೂರಿಯಾಗಿ ನಡೆದಿದೆ. ನನ್ ಹರಕೆ ಕುರಿ ತಪ್ಪಿಸಿಕೊಂಡಿದೆ. ಅನ್ನೋ ಡೈಲಾಗ್ನಿಂದ ಶುರುವಾಗುತ್ತೆ ಟ್ರೈಲರ್.. ಮುಗ್ಧ ಕುರಿಯ ಮನಸ್ಸಿನಂತಿರೋ ವ್ಯಕ್ತಿ ತಿರುಗಿ ಬಿದ್ದರೆ ಹೇಗೆ ಮಾರಿಯಾಗುತ್ತಾನೆ ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಸಿನಿಮಾ ಹೀರೊ ಎಷ್ಟು ಡೇಂಜರ್ ಅನ್ನೋದಕ್ಕೆ ಮಾರ್ಮಿಕವಾದ ವಿವರಣೆ ಕೊಡುತ್ತೆ. ಈ ಡೈಲಾಗ್ ಮುಗಿಯುತ್ತಿದ್ದಂತೆ 'ಟೋಬಿ'ಗಾಗಿ ಹುಡುಕಾಟ ಆರಂಭ. ಈ ಟ್ರೈಲರ್ನಲ್ಲಿ ಹರಕೆ ಕುರಿ ತಪ್ಪಿಸಿಕೊಂಡಿದೆ ಅನ್ನೋದೇ ಹೈಲೈಟ್. ಕುರಿ ತಪ್ಪಿಸಿಕೊಳ್ಳುವಂತಹ ಕೆಲಸ ಏನು ಮಾಡ್ತು..? ಕುರಿಯ ಸೇಡು ಎಂತಹದ್ದು? ಇಂತಹ ಒಂದಿಷ್ಟು ಅನುಮಾನಗಳಿಗೆ ಟ್ರೈಲರ್ ಮುಂದೆ ಉತ್ತರ ಸಿಗುತ್ತೆ.ಒಂದು ಮೊಟ್ಟೆಯ ಕತೆಯ ಹಾಸ್ಯ ನಟ ಗರುಡಗಮನದಲ್ಲಿ ರೌದ್ರಾವತಾರ ತಾಳಿದ್ದ. ಇದೀಗ ಅದನ್ನೂ ಮೀರಿದ ನೆಕ್ಸ್ಟ್ ಲೆವೆಲ್ ಕ್ಯಾರೆಕ್ಟರ್ನಲ್ಲಿ ವಿಜೃಂಭಿಸಿದ್ದಾರೆ ನಟ ರಾಜ್ ಬಿ ಶೆಟ್ಟಿ ,'ಟೋಬಿ' ಯಾರ ಊಹೆಗೂ ನಿಲುಕದವನು. ಹೀಗಾಗಿ ಈ ಮಾಸ್ ಅವತಾರ ಇಂಟ್ರೆಸ್ಟಿಂಗ್ ಅಂತ ಅನಿಸುತ್ತಿದೆ.
ಬೆಸಿಲ್ ನಿರ್ದೇಶಿಸಿರುವ 'ಟೋಬಿ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮೂರು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲನೆಯದು ಯುವಕನ ಪಾತ್ರ. ಈ ಪಾತ್ರದ ವಿಶೇಷ ಅಂದ್ರೆ, ರಾಜ್ ಬಿ ಶೆಟ್ಟಿ ತಲೆಯಲ್ಲಿ ಕೂದಲಿದೆ. ಎರಡನೇ ಮಧ್ಯ ವಯಸ್ಸಿನದು. ಇನ್ನೇ ಟೋಬಿ ಮಾರಿಯಾಗುವುದೇ ಮೂರನೇ ಗೆಟಪ್. ಈ ಮೂರು ಗೆಟಪ್ಗಳೂ ಟೋಬಿಯ ಒಂದು ಕಾಲ ಘಟ್ಟದ ಕಥೆಯನ್ನು ಹೇಳುತ್ತಿದೆ. 'ಟೋಬಿ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಚೈತ್ರಾ ಜೆ ಆಚಾರ್, ಸಂಯುಕ್ತ ಹೊರನಾಡು, ಗೋಪಾಲ ಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಥುನ್ ಮುಕುಂದನ್ ಮ್ಯೂಸಿಕ್ ಹಾಗೂ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಟ್ರೈಲರ್ನ ಹೈಲೈಟ್. ಈ ಸಿನಿಮಾ ಇದೇ ಆಗಸ್ಟ್ 25ರಂದು ರಿಲೀಸ್ ಆಗುತ್ತಿದ್ದು, ಸಿನಿಮಾವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.