Asianet Suvarna News Asianet Suvarna News

ವೇತನವಿಲ್ಲದೇ ಪರದಾಟ; ಅತಿಥಿ ಉಪನ್ಯಾಸಕ ಈಗ ದಿನಗೂಲಿ ಕುರಿಗಾಹಿ

ಕೋವಿಡ್‌ನಿಂದ ಅತಿಥಿ ಉಪನ್ಯಾಸಕರು ವೇತನ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಕಳೆದ 9 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿದ್ದ ದೇವದುರ್ಗ ತಾಲೂಕಿನ ಹುಲಿಗುಡ್ಡ ಗ್ರಾಮದ ವೀರನಗೌಡ  ನಿತ್ಯ 200 ರೂ. ಕೂಲಿಗೆ ಕುರಿಗಾಹಿಯಾಗಿ ಕೆಲಸ ಮಾಡುತ್ತಿದ್ದಾರೆ. 
 

ರಾಯಚೂರು  (ನ. 09):  ಕೋವಿಡ್‌ನಿಂದ ಅತಿಥಿ ಉಪನ್ಯಾಸಕರು ವೇತನ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಕಳೆದ 9 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿದ್ದ ದೇವದುರ್ಗ ತಾಲೂಕಿನ ಹುಲಿಗುಡ್ಡ ಗ್ರಾಮದ ವೀರನಗೌಡ  ನಿತ್ಯ 200 ರೂ. ಕೂಲಿಗೆ ಕುರಿಗಾಹಿಯಾಗಿ ಕೆಲಸ ಮಾಡುತ್ತಿದ್ದಾರೆ. 

ಸಿಬಿಐ ವಿಚಾರಣೆಗೆ ಹಾಜರಾದ ಯೋಗೇಶ್ ಗೌಡ ಪತ್ನಿ, ಯಾವ ಕಾರಣ ?

ಎಂ.ಎ ಬಿ.ಎಡ್ ಮುಗಿಸಿ ಮಸ್ಕಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ವೀರನಗೌಡ ಕಾರ್ಯ ನಿರ್ವಹಿಸುತ್ತಿದ್ದರು.  ಕಳೆದ ಆರೇಳು ತಿಂಗಳಿಂದ ಕಾಲೇಜು ಬಂದ್ ಆದ ಹಿನ್ನಲೆ ವೇತನವೂ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅತಿಥಿ ಉಪನ್ಯಾಸಕರ ಸೇವೆ ಮುಂದುವರೆಸುವಂತೆ, ಕೂಡಲೇ ವೇತನ ಬಿಡುಗಡೆ ಮಾಡುವಂತೆ  ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

Video Top Stories