Asianet Suvarna News Asianet Suvarna News

Anekal ವೈದ್ಯರ ನಿರ್ಲಕ್ಷ್ಯ: ಯುವಕನ ಕಾಲು ಕತ್ತರಿಸುವ ಹಂತಕ್ಕೆ ಸೋಂಕು

ವೈದ್ಯೋ ನಾರಾಯಣೋ ಹರಿ ಅಂತಾರೆ. ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯನ ಎಡವಟ್ಟಿನಿಂದ ಯುವಕನ ಕಾಲಿಗೆ ಸೋಂಕು ತಗುಲಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರ ಮೊರೆಹೋಗಿದ್ದಾರೆ. 

ಆನೇಕಲ್ (ಜ.29): ವೈದ್ಯೋ ನಾರಾಯಣೋ ಹರಿ ಅಂತಾರೆ. ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯನ (Doctor) ಎಡವಟ್ಟಿನಿಂದ ಯುವಕನ ಕಾಲಿಗೆ ಸೋಂಕು ತಗುಲಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರ (Police) ಮೊರೆಹೋಗಿದ್ದಾರೆ. ಹೌದು! ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ 18 ವರ್ಷದ ಅಭಿ (Abhi) ಎಂಬ ಯುವಕ ಜನವರಿ 6ರಂದು ಬೇಗೂರಿನ ಮೈಲಸಂದ್ರದಲ್ಲಿರುವ ಸಾನ್ಸಿಯಾ ಕ್ಲಿನಿಕ್‌ಗೆ ಹೋಗಿದ್ದರು. ಈ ವೇಳೆ ಶೀತ ಕೆಮ್ಮು ಜ್ವರ ಇದ್ದ ಕಾರಣ ಡಾ.ಅಶೋಕ್ (Dr.Ashok) ಎಂಬುವವರು ಅಭಿಗೆ ಇಂಜೆಕ್ಷನ್ ನೀಡಿದ್ದರು. ಡಾ.ಅಶೋಕ್ ಇಂಜೆಕ್ಷನ್ ನೀಡಿದ ಬಳಿಕ ಅಭಿಗೆ ಕಾಲಿನಲ್ಲಿ ಊತ ಕಾಣಿಸಿಕೊಂಡಿದೆ. ಇಂಜೆಕ್ಷನ್ ನೀಡಿದ ಜಾಗದಿಂದ ಇಡೀ ಕಾಲಿಗೆ ಸೋಂಕು ಹರಡಿದೆ. 

Suvarna Exclusive: ಪರಪ್ಪನ ಅಗ್ರಹಾರದಲ್ಲಿ ರೌಡಿ ಬಚ್ಚನ್‌ನಿಂದ ಲಂಚ ಪಡೆದ ಪೊಲೀಸರು!

ಸದ್ಯ ಈಗ ಕಾಲು ಕತ್ತರಿಸುವ ಹಂತಕ್ಕೆ ಸೋಂಕು ಹರಡಿಕೊಂಡಿದೆ. ಇತ್ತ ವೈದ್ಯರ ಎಡವಟ್ಟಿನಿಂದ ಯುವಕ ತನ್ನ ಕಾಲನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಅಭಿ ಕುಟುಂಬಸ್ಥರು ನ್ಯಾಯಕ್ಕಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಎಫ್‌ಐಆರ್‌ (FIR) ದಾಖಲಾಗುತ್ತಿದ್ದಂತೆ ವೈದ್ಯ ಡಾ.ಅಶೋಕ್ ಪರಾರಿಯಾಗಿದ್ದಾರೆ. ತಮ್ಮ ಎಡವಟ್ಟಿನ ಅರಿವಾಗಿ 40 ಸಾವಿರ‌ ರೂಪಾಯಿ‌ ಪರಿಹಾರವನ್ನು ಅಭಿ ಕುಟುಂಬಸ್ಥರಿಗೆ ನೀಡಿದರು. ಅಲ್ಲದೆ ಮುಂದೆ ಚಿಕಿತ್ಸೆ ನೀಡಲು ಸಹ ನಿರಾಕರಿಸಿದ್ದರು. ಹೀಗಾಗಿ ವೈದ್ಯನ ವಿರುದ್ಧ ಎಫ್​ಐಆರ್ ದಾಖಲಿಸಲಾಗಿತ್ತು. ಎಫ್​ಐಆರ್ ದಾಖಲಾಗುತ್ತಿದ್ದಂತೆ ವೈದ್ಯ ಅಶೋಕ್ ನಾಪತ್ತೆಯಾಗಿದ್ದಾರೆ.