Asianet Suvarna News Asianet Suvarna News

ಸುವರ್ಣ ನ್ಯೂಸ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ಗಾಂಜಾ ಡಾನ್; ಎಕ್ಸ್‌ಕ್ಲೂಸಿವ್ ಅಂದ್ರೆ ಇದು!

ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ಕೊಡುವುದರಲ್ಲಿ ಸದಾ ಮುಂದಿರುವ ನಿಮ್ಮ ಸುವರ್ಣ ನ್ಯೂಸ್ ಇದೀಗ ಹೊಸ ಎಕ್ಸ್‌ಕ್ಲೂಸಿವ್ ಸುದ್ದಿಯೊಂದನ್ನು ಹೊತ್ತು ತಂದಿದೆ. ಡ್ರಗ್ ಮಾಫಿಯಾ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇನ್ನೊಂದು ಮಾದಕ ವಸ್ತು ಗಾಂಜಾ ಸಪ್ಲೈ ಮಾಡುತ್ತಿದ್ದ ಗ್ಯಾಂಗ್‌ವೊಂದು ಸಿಕ್ಕಿ ಹಾಕಿಕೊಂಡು ಬಿದ್ದಿದೆ. 

ಬೆಂಗಳೂರು (ಸೆ. 20): ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ಕೊಡುವುದರಲ್ಲಿ ಸದಾ ಮುಂದಿರುವ ನಿಮ್ಮ ಸುವರ್ಣ ನ್ಯೂಸ್ ಇದೀಗ ಹೊಸ ಎಕ್ಸ್‌ಕ್ಲೂಸಿವ್ ಸುದ್ದಿಯೊಂದನ್ನು ಹೊತ್ತು ತಂದಿದೆ. ಡ್ರಗ್ ಮಾಫಿಯಾ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇನ್ನೊಂದು ಮಾದಕ ವಸ್ತು ಗಾಂಜಾ ಸಪ್ಲೈ ಮಾಡುತ್ತಿದ್ದ ಗ್ಯಾಂಗ್‌ವೊಂದು ಸಿಕ್ಕಿ ಹಾಕಿಕೊಂಡು ಬಿದ್ದಿದೆ. 

ಡ್ರಗ್ ಮಾಫಿಯಾಗೆ 'ಕೈ' ನಾಯಕನಂತೆ ಪೋಸ್ ಕೊಡುವ ಆ ರೌಡಿಶೀಟರ್‌ನ ಶ್ರೀರಕ್ಷೆ!

ಕಲ್ಬುರ್ಗಿ ಸೇರಿ ಬೇರೆ ಬೇರೆ ಜಿಲ್ಲೆಗಳಿಗೆ ಗಾಂಜಾ ಪೂರೈಕೆ ಮಾಡುತ್ತಿತ್ತು. ಈ ಗ್ಯಾಂಗ್‌ ಬಗ್ಗೆ ಮಾಹಿತಿ ತಿಳಿದ ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಗಿಳಿಯಿತು. ಗ್ಯಾಂಗ್‌ಗೆ ಸಂಬಂಧಪಟ್ಟ ವ್ಯಕ್ತಿಯೊಬ್ಬನನ್ನು ಸಂಪರ್ಕಿಸಿ ಒಂದಷ್ಟು ಮಾಹಿತಿಯನ್ನು ತೆಗೆಯುವ ಪ್ರಯತ್ನ ಮಾಡಿತು. ನಮ್ಮ ನಿರೀಕ್ಷೆ ಸುಳ್ಳಾಗಲಿಲ್ಲ. ನಾವು ಗಾಂಜಾ ತೆಗೆದುಕೊಳ್ಳಲು ಬಂದವರು ಎಂದು ಆ ವ್ಯಕ್ತಿಯೂ ಕೂಡಾ ಮಾತನಾಡಿದ್ದಾನೆ. ಮಾದಕ ವಸ್ತುಗಳ ಮಾರಾಟ ಮಾಡುವ ಗ್ಯಾಂಗನ್ನು ಮಟ್ಟ ಹಾಕಲು ನಾವು ಮಾಡಿದ ಪ್ರಯತ್ನ ಸಫಲವಾಗಿದೆ. ಹಾಗಾದರೆ ನಮ್ಮ ಕಾರ್ಯಾಚರಣೆ ಹೇಗಿತ್ತು? ಯಾವ ರೀತಿ ಕಳ್ಳರು ಸಿಕ್ಕಿ ಬಿದ್ದರು? ನೋಡೋಣ ಬನ್ನಿ..!

Video Top Stories