Asianet Suvarna News Asianet Suvarna News

ಅಷ್ಟಕ್ಕೂ ರಾಜು ತಾಳೀಕೋಟೆ ತಲೆಗೆ ಬಂದೂಕು ಇಟ್ಟಿದ್ದು ಯಾರು?

Sep 16, 2021, 3:56 PM IST

ವಿಜಯಪುರ(ಸೆ. 16) ಗನ್ ಪಾಯಿಂಟ್ ನಲ್ಲಿ ಸ್ಯಾಂಡಲ್ ವುಡ್ ಹಾಸ್ಯ ನಟನಿಗೆ ಬೆದರಿಕೆ ಹಾಕುತ್ತಾರೆ. ನಟ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಇದೇ ಘಟನೆಗೆ ನಂತರ ಮತ್ತೊಂದು ಟ್ವಿಸ್ಟ್ ಸಿಗುತ್ತದೆ. ಇನ್ನೊಂದು ಕಡೆ ಹಾಸ್ಯನಟ ರಾಜು ತಾಳಿಕೋಟೆ  ತಮ್ಮ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ಕನ ಮಗನ ಪತ್ನಿ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ  ಬಂದಿದೆ. 

ಮಹಿಳೆಯನ್ನು ಬೆತ್ತಲಾಗಿ ಹಿಂಸಿಸಿದ  ಯಾದಗಿರಿಯ ಭಯಾನಕ ಕೃತ್ಯದ ಹಿಂದಿನ ಕಿರಾತಕರು

ಸನಾ ಕರಜಗಿ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿದ್ರಾ? ಎಂಬ ಪ್ರಶ್ನೆ ಎದ್ದಿದೆ. ಇನ್ನೊಂದು ಕಡೆ ರಾಜು ತಾಳಿಕೋಟೆ ಸಹ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ತಮಗೂ ಜೀವ ಬೆದರಿಕೆ ಇದೆ ಎಂದಿದ್ದಾರೆ. ಯಾವುದು ಸುಳ್ಳು? ಯಾವುದು ಸತ್ಯ? ಪ್ರಕರಣವನ್ನು ಪೊಲೀಸರು ಎರಡು ದೃಷ್ಟಿಕೋನದಿಂದ ತನಿಖೆ ಮಾಡಲಾಗುತ್ತಿದೆ.

ಕಣ್ಣೀರಿಡುತ್ತಲೇ ಇಡೀ ಪ್ರಕರಣ ಸ್ಪೋಟಕ ಸತ್ಯ ಹೇಳಿದ್ದಾರೆ ನಟ. ಅಳಿಯನ ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯನ್ನ ಪ್ರಶ್ನಿಸಿದ್ದಕ್ಕೆ ರಾಜು ತಾಳಿಕೋಟೆ  ಹಣೆಗೆ ಪಿಸ್ತೂಲ್ ಇಟ್ಟಿದ್ದಾರೆ ಎನ್ನಲಾಗಿದೆ. ಸಂಬಂಧಿಕ ಶೇಖ್ ಮೋದಿ ಎಂಬವರೇ ಹಣೆಗೆ ಪಿಸ್ತೂಲು ಇಟ್ಟಿದ್ದಾರೆ.

 

Video Top Stories