Asianet Suvarna News Asianet Suvarna News

ಯಾದಗಿರಿ ಮಹಿಳೆ ನಗ್ನಗೊಳಿಸಿ ಹಲ್ಲೆ: ಕಬ್ಬಿನ ಜಲ್ಲೆಯಿಂದ ಥಳಿತ, ಅಂಗಾಂಗ ಮುಟ್ಟಿ ವಿಕೃತಿ!

* ಯಾದಗಿರಿ ಮಹಿಳೆಯ ನಗ್ನಗೊಳಿಸಿ ಪೈಶಾಚಿಕ ಹಲ್ಲೆ, ಹೇಯ ಕೃತ್ಯ

* ರಾತ್ರಿ ವೇಳೆ ಸ್ತ್ರೀಯೊಬ್ಬಳ ಮೇಲೆ ನಡೆಸಿದ ಅಮಾನುಷ ದೌರ್ಜನ್ಯದ ವಿಡಿಯೋ ಯಾದಗಿರಿ ಜಿಲ್ಲೆಯಲ್ಲಿ ವೈರಲ್‌

* ಕಬ್ಬಿನ ಜಲ್ಲೆಯಿಂದ ಥಳಿತ, ಅಂಗಾಂಗ ಮುಟ್ಟಿವಿಕೃತ ವರ್ತನೆ

* ನಾಲ್ಕೈದು ಜನರ ಗುಂಪಿನಿಂದ ಕೃತ್ಯ

Woman Tortured Assaluted By a Group Of people in Yadgir video goes viral pod
Author
Bangalore, First Published Sep 13, 2021, 7:36 AM IST
  • Facebook
  • Twitter
  • Whatsapp

ಆನಂದ್‌ ಎಂ. ಸೌದಿ

ಯಾದಗಿರಿ(ಸೆ.13): ಮಹಿಳೆಯೊಬ್ಬಳನ್ನು ಸಂಪೂರ್ಣ ಬೆತ್ತಲಾಗಿಸಿದ ಗುಂಪೊಂದು ಆಕೆಯ ಮೇಲೆ ಕಬ್ಬಿನ ಜಲ್ಲೆಗಳಿಂದ ತೀವ್ರವಾಗಿ ಹಲ್ಲೆ ನಡೆಸುವುದರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಂಗಾಂಗಗಳನ್ನು ಮುಟ್ಟಿಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಯಾದಗಿರಿ ಸಮೀಪದಲ್ಲಿ ನಡೆದಿದೆ ಎನ್ನಲಾದ ಈ ಪೈಶಾಚಿಕ ಕೃತ್ಯ ನಿರ್ದಿಷ್ಟವಾಗಿ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ.

ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಮಹಿಳೆಯರ ಮೇಲೆ ಇಂತಹ ಮೃಗೀಯ ವರ್ತನೆಗಳು ನಡೆಯುವುದು ಕೆಲವೊಮ್ಮೆ ವರದಿಯಾಗುತ್ತಿದ್ದವು. ಆದರೆ, ಈ ಹೇಯ ಕೃತ್ಯವೀಗ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಆದರೆ, ಇಂತಹ ಘಟನೆ ನಡೆದ ಬಗ್ಗೆ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ಯಾರೂ ದೂರು ನೀಡಿದ ಬಗ್ಗೆ ತಿಳಿದುಬಂದಿಲ್ಲ.

"

ವೀಡಿಯೋದಲ್ಲಿ ಏನಿದೆ?:

ಯಾದಗಿರಿ-ಶಹಾಪುರ ಮಾರ್ಗ ಮಧ್ಯೆ ಜಮೀನೊಂದರಲ್ಲಿ ಕಗ್ಗತ್ತಲಲ್ಲಿ ನಡೆದಿದೆ ಎನ್ನಲಾಗಿರುವ ಈ ಘಟನೆಯನ್ನು ಹಲ್ಲೆಕೋರರ ಗುಂಪೇ ಮೊಬೈಲ್‌ನಲ್ಲಿ ಚಿತ್ರೀಕರಿಸಿದಂತಿದೆ. ತೀವ್ರ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತ ಆಕೆಗೆ ಥಳಿಸಲು ಶುರು ಮಾಡುವ ನಾಲ್ಕೈದು ಜನರ ಗುಂಪು, ಆ ಮಹಿಳೆಯ ಮೈಮೇಲೆ ತುಂಡು ಬಟ್ಟೆಯನ್ನೂ ಬಿಡದೆ ಬೆತ್ತಲಾಗಿಸಿ ಥಳಿಸಿದ, ಲೈಂಗಿಕ ಹಿಂಸೆ ನೀಡಿದ ದೃಶ್ಯಗಳು ವಿಡಿಯೋದಲ್ಲಿವೆ. ಹಲ್ಲೆಕೋರರಲ್ಲೊಬ್ಬ ಮೊಬೈಲ್‌ನಲ್ಲಿ ಫೋಟೋ ತೋರಿಸಿ, ‘ಈಕೆ ನೀನೇ ಅಲ್ಲವೇ?’ ಎಂದು ಅವಾಚ್ಯವಾಗಿ ನಿಂದಿಸುತ್ತ ಥಳಿಸುತ್ತಾನೆ. ಆಗ ಆಕೆ ‘ನಾನಲ್ಲ, ನಂಗೇನೂ ಗೊತ್ತಿಲ್ಲ’ ಎಂದು ಪರಿಪರಿಯಾಗಿ ಹೇಳುತ್ತಾರೆ. ಆದರೂ ಬಿಡದ ಉಳಿದವರು ಮನಸೋ ಇಚ್ಛೆ ಥಳಿಸುತ್ತಾರೆ. ತನ್ನನ್ನು ಸಂಪೂರ್ಣ ಬೆತ್ತಲಾಗಿಸಿ, ಸುತ್ತುವರಿದು ಕೇಕೆ ಹಾಕುತ್ತಿದ್ದ ಗುಂಪಿಗೆ ಕೈಮುಗಿದು ಕಣ್ಣೀರು ಹಾಕಿದ ಆ ಮಹಿಳೆ, ತನ್ನನ್ನು ಬಿಡಿ ಎಂದು ಗೋಗರೆಯುತ್ತಾಳೆ.

ಆಗ ಗುಂಪಲ್ಲಿದ್ದ ಒಬ್ಬ ಹೊಡೆಯುವ ನೆಪದಲ್ಲಿ ಆಕೆಯ ಅಂಗಾಂಗಗಳನ್ನು ಮುಟ್ಟಿವಿಕೃತವಾಗಿ ವರ್ತಿಸುತ್ತಾನೆ. ಹಲ್ಲೆಯ ನೋವು ತಾಳಲಾಗದ ಆಕೆ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳಾದರೂ, ಸುತ್ತುವರೆದ ಗುಂಪು ಆಕೆಯನ್ನು ಅಟ್ಟಾಡಿಸಿ ಹೊಡೆಯುತ್ತದೆ. ವಾಹನವೊಂದರ ಹೆಡ್‌ ಲೈಟ್‌ ಬೆಳಕು ಹಾಗೂ ಮೊಬೈಲ್‌ ಟಾಚ್‌ರ್‍ ಅನ್ನು ಆಕೆಯ ಮುಖಕ್ಕೆ ಹಿಡಿದು, ಹಿಂಸಿಸುವ ದೃಶ್ಯಗಳು ಕಂಡುಬರುತ್ತವೆ. ನೋವು ತಾಳಲಾಗದೆ ಆಕೆ ಚೀರಾಡುತ್ತಿರುತ್ತಾಳೆ.

ಸಹಾಯಕ್ಕೆ ಮಹಿಳೆ ಕೂಗಿದಾಗ ‘ಇಲ್ಲಿ ಯಾರೂ ಇಲ್ಲ, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುತ್ತೇವೆ’ ಎಂದು ಬೆದರಿಸಿದ ಮಾತುಗಳು ವೀಡಿಯೋದಲ್ಲಿವೆ. ‘ಪೊಲೀಸ್‌ ಠಾಣೆಯಲ್ಲೇ ಈ ಮಹಿಳೆ ನನ್ನಿಂದ 13-14 ಸಾವಿರ ಹಣ ಪಡೆದಿದ್ದಾಳೆ’ ಎಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಥಳಿಸುತ್ತಾನೆ. ಯಾದಗಿರಿ ಸಮೀಪದ ಚಟ್ನಳ್ಳಿ ಹಾಗೂ ಶಹಾಪುರದ ಹಳಿಸಗರ ಪ್ರದೇಶದ ಹೆಸರುಗಳು ಅವರ ಬಾಯಲ್ಲಿ ಕೇಳಿಬರುತ್ತವೆ. ‘ಬೆಳಿಗ್ಗೆ ಹಣ ವಾಪಸ್‌ ನೀಡಬೇಕು’ ಎಂದು ತಾಕೀತು ಮಾಡುತ್ತಾರೆ.

ಹನಿಟ್ರ್ಯಾಪ್‌ ಶಂಕೆ!

ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹನಿ ಟ್ರ್ಯಾಪ್‌ ಪ್ರಕರಣಗಳ ಬಗ್ಗೆ ‘ಕನ್ನಡಪ್ರಭ’ ಇತ್ತೀಚೆಗೆ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ಈ ಪ್ರಕರಣದಲ್ಲೂ, ತಮ್ಮನ್ನು ಮೋಸದ ಜಾಲದಲ್ಲಿ (ಹನಿ ಟ್ರ್ಯಾಪ್‌) ಈಕೆ ಸಿಲುಕಿಸಿದ್ದಾಳೆ ಎಂಬ ಶಂಕೆಯ ಮೇಲೆ ಮಹಿಳೆಯನ್ನು ಥಳಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಹಿಳೆ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ ಬಳಿಯ ಗ್ರಾಮವೊಂದರ ನಿವಾಸಿ ಎಂದು ಹೇಳಲಾಗಿದೆ. ಈಕೆಯ ಪತಿ ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸಕ್ಕಿದ್ದಾನೆ ಎನ್ನಲಾಗಿದೆ.

Follow Us:
Download App:
  • android
  • ios