ಸಂಜನಾ ಮುಸ್ಲಿಂ ಧರ್ಮಕ್ಕೆ; ಮತಾಂತರದ ಹಿಂದಿದೆ ಇಂಟರೆಸ್ಟಿಂಗ್ ಕತೆ!
ನಟಿ ಸಂಜನಾ ಗರ್ಲಾನಿ 2018 ರಲ್ಲಿ ಡಾ. ಅಜೀಜ್ ರನ್ನು ವಿವಾಹವಾಗಿದ್ದಾರೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ. ಹಾಗಾದರೆ ಬಲವಂತವಾಗಿ ಮತಾಂತರವಾಗಿದ್ದರಾ? ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ.
ಬೆಂಗಳೂರು (ಸೆ. 19): ನಟಿ ಸಂಜನಾ ಗರ್ಲಾನಿ 2018 ರಲ್ಲಿ ಡಾ. ಅಜೀಜ್ ರನ್ನು ವಿವಾಹವಾಗಿದ್ದಾರೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ. ಹಾಗಾದರೆ ಬಲವಂತವಾಗಿ ಮತಾಂತರವಾಗಿದ್ದರಾ? ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ.
ಸಂಜನಾ ಮುಸ್ಲಿಂಗೆ ಮತಾಂತರ, ಮದುವೆ ಬಳಿಕ ಹೆಸರೂ ಚೇಂಜ್, ಈಗ ಈಕೆ ಸಂಜನಾ ಅಲ್ಲ!
'ಯಾರು ಬಲವಂತ ಮಾಡಿಲ್ಲ. ಸ್ವಇಚ್ಚೆಯಿಂದಲೇ ಮತಾಂತರವಾಗಿದ್ದಾರೆ' ಎಂದು ಮೌಲ್ವಿ ಮಹಮ್ಮದ್ ರಷಾದಿ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ.
'ಇಸ್ಲಾಂ ಧರ್ಮದ ಬಗ್ಗೆ ನಾವು ಸಂಜನಾಗೆ ತಿಳಿ ಹೇಳಿದ್ದೆವು. ಮದ್ಯಪಾನ, ಜೂಜು, ಡ್ಯಾನ್ಸ್ ಮಾಡುವುದು ನಮ್ಮಲ್ಲಿ ನಿಷೇಧ ಎಂದು ನಾವು ತಿಳಿ ಹೇಳಿದ್ದೆವು. ಅದಕ್ಕೆ ಅವರೂ ಕೂಡಾ ಒಪ್ಪಿದ್ದರು. ಇಸ್ಲಾಂ ಧರ್ಮದ ವಿರುದ್ಧ ಸಂಜನಾ ಆಚರಣೆ ಮಾಡಿದರೆ ನಮ್ಮ ವಿರೋಧ ಇದೆ' ಎಂದು ಮೌಲ್ವಿ ರಷಾದಿ ಸ್ಪಷ್ಟಪಡಿಸಿದ್ದಾರೆ.