ಸಿಸಿಬಿ ದಾಳಿಗೆ ಗರ್ಲಾನಿ ಗಾಬರಿ; ಅಧಿಕಾರಿಗಳ ಮೇಲೆ ಕಿರುಚಾಟ
ನಟಿ ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 2 ಮೊಬೈಲ್, 1 ಲ್ಯಾಪ್‌ಟ್ಯಾಪ್, ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್‌ನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ದಾಳಿ ಬಹುತೇಕ ಅಂತ್ಯಗೊಂಡಿದ್ದು, ಕೆಲವೇ ಹೊತ್ತಿನಲ್ಲಿ ಸಿಸಿಬಿ ಕಚೇರಿಗೆ ಕರೆದೊಯ್ಯಲಿದ್ದಾರೆ.
ಬೆಂಗಳೂರು (ಸೆ. 08): ನಟಿ ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 2 ಮೊಬೈಲ್, 1 ಲ್ಯಾಪ್‌ಟ್ಯಾಪ್, ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್‌ನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ದಾಳಿ ಬಹುತೇಕ ಅಂತ್ಯಗೊಂಡಿದ್ದು, ಕೆಲವೇ ಹೊತ್ತಿನಲ್ಲಿ ಸಿಸಿಬಿ ಕಚೇರಿಗೆ ಕರೆದೊಯ್ಯಲಿದ್ದಾರೆ.
ಸಿಸಿಬಿ ಆಧಿಕಾರಿಗಳ ಮೇಲೆ ಸಂಜನಾ ರೇಗಾಡಿದ್ದಾರೆ. 'ನನ್ನ ವಿರುದ್ಧ ಏನ್ ಸಾಕ್ಷಿಯಿದೆ ಅಂತ ರೇಡ್ ಮಾಡಲು ಬಂದಿದ್ದೀರಿ? ನೊಟೀಸ್ ಕೊಟ್ಟಿದ್ದರೆ ನಾನೇ ವಿಚಾರಣೆಗೆ ಬರುತ್ತಿದ್ದೆ. ನನ್ನ ತಾಯಿಗೆ ಅನಾರೋಗ್ಯವಾಗಿದೆ. ಅವರಿಗೆ ಹೆಚ್ಚು ಕಡಿಮೆಯಾದರೆ ಏನು ಮಾಡೋದು? ನೀವು ಹೊರಡಿ, ನಾನು ವಿಚಾರಣೆಗೆ ಬರುತ್ತೇನೆ' ಎಂದು ಕಿರುಚಾಡಿದ್ದಾರೆ. ಆದರೆ ಅಧಿಕಾರಿಗಳು ಅದಕ್ಕೆಲ್ಲಾ ಸೊಪ್ಪು ಹಾಕಿಲ್ಲ. ದಾಳಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಗರ್ಲಾನಿಯನ್ನು ಸಿಸಿಬಿ ಕಚೇರಿಗೆ ಕರೆದೊಯ್ಯಲಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!
ಸಂಜನಾಗೆ 'ಡ್ರಗ್ಸ್' ಸಂಕಷ್ಟ, ಮನೆ ಮೇಲೆ ದಾಳಿ, ನಟಿ ಸಿಸಿಬಿ ವಶಕ್ಕೆ...!