ಡ್ರಗ್ಸ್ ಸುಳಿಯಲ್ಲಿ ರಾಗಿಣಿ, ಪೊಲೀಸರೆದುರು ಬಾಯ್ಬಿಟ್ಟ ಭಯಾನಕ ಸತ್ಯ!
ಮಾದಕ ವಸ್ತು ಖರೀದಿ ಸಲುವಾಗಿ ತನ್ನ ಸ್ನೇಹಿತನೂ ಆಗಿರುವ ಸಾರಿಗೆ ನೌಕರ ರವಿಶಂಕರ್ ಹಾಗೂ ನೈಜೀರಿಯಾ ಮೂಲದ ಪೆಡ್ಲರ್‌ಗಳಿಗೆ ನಟಿ ರಾಗಿಣಿ ದ್ವಿವೇದಿ 49ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು ಎಂಬುದು ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ.
ಬೆಂಗಳೂರು(ಆ.25) ಮಾದಕ ವಸ್ತು ಖರೀದಿ ಸಲುವಾಗಿ ತನ್ನ ಸ್ನೇಹಿತನೂ ಆಗಿರುವ ಸಾರಿಗೆ ನೌಕರ ರವಿಶಂಕರ್ ಹಾಗೂ ನೈಜೀರಿಯಾ ಮೂಲದ ಪೆಡ್ಲರ್‌ಗಳಿಗೆ ನಟಿ ರಾಗಿಣಿ ದ್ವಿವೇದಿ 49ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು ಎಂಬುದು ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ.
ರವಿಶಂಕರ್‌ಗೆ 16 ಬಾರಿ ಕರೆ ಮಾಡಿ ಡ್ರಗ್ಸ್ ಸೇವನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ರಾಗಿಣಿ, ಇದೇ ವಿಚಾರವಾಗಿ ಖ್ಯಾತ ನೃತ್ಯಗಾರ್ತಿ ನಂದಿನಿ ಆಳ್ವಾ ಪುತ್ರ ಆದಿತ್ಯ ಆಳ್ವಾ, ನೈಜೀರಿಯಾ ಪ್ರಜೆ ಲೂಮ್ ಪೆಪ್ಪರ್ ಸಾಂಬಾ ಹಾಗೂ ಇಮ್ರಾನ್ ಗೆ ಕರೆ ಮಾಡಿ ಡ್ರಗ್ಸ್ ಕಳುಹಿಸುವಂತೆ ಕೋರಿದ್ದರು. ತನಗೆ ಕೊಕೇನ್, ಎಲ್‌ಎಸ್‌ಡಿ, ಎಕ್ಸ್‌ಟೆಸಿ ತಂದು ಕೊಡುವಂತೆ ರಾಗಿಣಿ ವಿನಂತಿಸಿದ್ದರು. ಕೆಲವು ಬಾರಿ ನಟಿಯ ಸ್ನೇಹಿತರೇ ಅವರ ಮನೆ ಬಳಿಗೆ ಹೋಗಿ ಡ್ರಗ್ಸ್ ತಲುಪಿಸಿದ್ದರು ಎಂದು ತಿಳಿದು ಬಂದಿದೆ.