ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಶಂಕಿತ ಉಗ್ರನ ಬಂಧನ

ಬೆಂಗಳೂರಿನಲ್ಲಿ NIAಯಿಂದ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ಬೆಚ್ಚಿ ಬೀಳಿಸುತ್ತಿದೆ ಶಂಕಿತ ಉಗ್ರ ತೌಫಿಲ್‌ ರಕ್ತಚರಿತ್ರೆ.

First Published Mar 8, 2023, 11:03 AM IST | Last Updated Mar 8, 2023, 11:03 AM IST

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಬಂಧಿಸಿದ್ದಾರೆ.ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧಿಸಲಾಗಿದ್ದು,  ತೌಫೀಲ್​ ಬಂಧಿತ ಆರೋಪಿ ಯಾಗಿದ್ದಾನೆ .10 ವರ್ಷಗಳಿಂದ ಕ್ರೈಂ ಚಟುವಟಿಕೆಯಲ್ಲಿ ಈತ ಭಾಗಿಯಾಗಿದ್ದ. ಕೊಲೆ, ಧರ್ಮ ದಂಗಲ್‌, ಕಿಚ್ಚು ಹಬ್ಬಿಸೋದೆ ತೌಫಿಲ್‌  ಕೆಲಸ. ಇನ್ನು ಈತ  ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ಹಿಸ್ಟರಿ ಹೊಂದಿದ್ದು, ಭಯಾನಕ ಹಿಂದೂ ಮುಖಂಡರ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.  ತೌಫಿಲ್ ಕೊಡಗಿನ ಪಿಎಫ್‌ಐ ಸೇವಾ ತಂಡದ ಮುಖ್ಯಸ್ಥನಾಗಿದ್ದು, 2012ರಿಂದಲೂ ಹಲವು ಕೃತ್ಯಗಳಲ್ಲಿ ಗುರುತಿಸಿಕೊಂಡಿದ್ದಾನೆ.  ತೌಫಿಲ್‌ VHP ಮುಖಂಡ ಗಣೇಶ್‌ ಕೊಲೆಯಲ್ಲಿ ಭಾಗಿಯಾಗಿದ್ದ ಅಲ್ಲದೆ  2016 ರಲ್ಲಿ ಪ್ರಶಾಂತ್‌ ಪೂಜಾರಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿದ್ದ.

Video Top Stories