ಗಣಿಗಾರಿಕೆ ತಡೆದಿದ್ದಕ್ಕೇ ಕತ್ತು ಸೀಳಿದ್ನಾ..? ಪರ್ಸ್‌ನಲ್ಲಿದ್ದ ಹಣ ದೋಚಿ ಆರೋಪಿ ಮಾಡಿದ್ದೇನು ?

ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಅಧಿಕಾರಿ
ಪ್ರತಿಮಾ ಹತ್ಯೆ ಹಿಂದೆ ಮಾಫಿಯಾ ಕೈವಾಡವಿದ್ಯಾ ? 
ಮನೆಗೇ ನುಗ್ಗಿ ಗಣಿ ಇಲಾಖೆ ಉಪ ನಿರ್ದೇಶಕಿ ಹತ್ಯೆ

First Published Nov 6, 2023, 3:32 PM IST | Last Updated Nov 6, 2023, 3:46 PM IST

ಆಕೆ ಸರ್ಕಾರಿ ಅಧಿಕಾರಿ.. ಗಣಿ ಭೂ ವಿಜ್ಞಾನ ಇಲಾಖೆಯಲ್ಲಿ ಖಡಕ್ ಆಫೀಸರ್ ಅಂತಲೇ ಹೆಸರು ಮಾಡಿದ್ದರು. ಎಲ್ಲೆ ಅಕ್ರಮ ಗಣಿಗಾರಿಕೆ ನಡೆದ್ರೂ ಈಕೆ ಅಲ್ಲಿಗೆ ಹಾಜರ್. ಆದ್ರೆ ಇಂಥಹ ಖಡಕ್ ಲೇಡಿ ಶನಿವಾರ ತನ್ನ ಮನೆಯಲ್ಲೇ ಬರ್ಬರವಾಗಿ ಕೊಲೆಯಾಗಿ (Murder) ಹೋಗಿದ್ದಾರೆ. ಕೆಲ ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದ ಮಹಿಳೆಯನ್ನ ತನ್ನದೇ ಮನೆಯಲ್ಲಿ ಕತ್ತು ಸೀಳಿ ಕೊಂದು ಹಾಕಿದ್ದಾರೆ. ಆದ್ರೆ ಇದೊಂದು ಕೊಲೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅಕ್ರಮ ಗಣಿಗಾರಿಕೆಯ ವಿರುದ್ಧ ನಿಂತಿದಕ್ಕೇ ಕೊಲೆಯಾದ್ರಾ ಅಥವಾ ಈ ಆ ಅಧಿಕಾರಿಯನ್ನ ಪರಿಚಯಸ್ಥರೇ ಕೊಂದ್ರಾ ಅನ್ನೋ ಅನುಮಾನ ಶುರುವಾಗಿದೆ.  ಬೆಳಗ್ಗೆ 9 ಗಂಟೆ ಸಮಯ ಎಲ್ಲಾ ಬೆಂಗಳೂರಿಗರು(Bengaluru) ವೀಕೆಂಡ್ ಪಾರ್ಟಿ ಮುಗಿಸಿಕೊಂಡು ಬಂದು ಮಲಗಿದವರು ಇನ್ನೂ ಎಚ್ಚರವಾಗಿರಲಿಲ್ಲ. ಕೆಲವರಂತೂ ಬೇಗನೇ ಎದ್ದು ಪಿಕ್ನಿಕ್‌ಗೆ ಹೊರಟು ನಿಂತಿದ್ರು.. ಈ ವೇಳೆಯಲ್ಲೇ ಇಡೀ ಬೆಂಗಳೂರು ಜನಕ್ಕೆ ಒಂದು ಶಾಕಿಂಗ್ ನ್ಯೂಸ್ ಸಿಕ್ಕಿಬಿಟ್ಟಿತ್ತು. ಆ ಸುದ್ದಿ ಕೇಳಿ ಬೆಂಗಳೂರು ಅಕ್ಷರಶಹ ಬೆಚ್ಚಿಬಿದ್ದಿತ್ತು. 

ಇದನ್ನೂ ವೀಕ್ಷಿಸಿ:  ಸಿಎಂ ಬ್ರೇಕ್‌ಫಾಸ್ಟ್‌ ಮೀಟಿಂಗ್.. ಸಚಿವರಿಗೆ 6 ಖಡಕ್ ವಾರ್ನಿಂಗ್..!