Asianet Suvarna News Asianet Suvarna News

ಅತ್ತಿಗೆ ಮೇಲೆ ಕಣ್ಣು ಹಾಕಿದವನ ಮರ್ಡರ್,ತನಿಖೆಯಲ್ಲಿ ಬಯಲಾಗಿತ್ತು ಕೊಲೆಯ ಅಸಲಿಯತ್ತು!

ಪ್ರೀತಿ, ಪ್ರೇಮ, ಮೋಹದ ಬಲೆಗೆ ಸಿಕ್ಕ ದುರಂತವೋ ಏನೋ.. ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಅತ್ತಿಗೆಯ ತಂಟೆಗೆ ಬಂದ ಅನ್ನೋ ಕಾರಣಕ್ಕೆ ಕೊಲೆ ನಡೆದು ಹೋಗಿದೆ. ಕೊಲೆಯ ರಹಸ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ.
 

ಸುಂದರ ಕುಟುಂಬ. ಅಮ್ಮ ಮತ್ತು ಮೂವರು ಮಕ್ಕಳು.ಇಬ್ಬರಿಗೆ ಮದುವೆ ಮಾಡಿ ಆ ತಾಯಿ ನಿರಾಳಳಾಗಿದ್ದಳು. ತೀರ್ಥ ಯಾತ್ರೆ ಅಂತ ಆರಾಮಾಗಿ ಇದ್ದು ಬಿಟ್ಟಿದ್ದರು. ಆದ್ರೆ ಆವತ್ತೊಂದು ದಿನ ತೀರ್ಥ ಯಾತ್ರೆ ಮುಗಿಸಿ ಮನಗೆ ಬಂದ ತಾಯಿಗೆ ಬಿಗ್​ ಶಾಕ್​ ಕಾದಿತ್ತು. ಕಾರಣ ತನ್ನದೇ ಮನೆಯಲ್ಲಿ ಒಂದು ಹೆಣ ಬಿದ್ದಿತ್ತು.. ಆದ್ರೆ ಆ ಹೆಣ ಮೂರನೇ ವ್ಯಕ್ತಿಯದ್ದಾಗಿತ್ತು.. ಕೊಲೆಗಾರ ತಾಯಿಯ ಮಗನೇ ಆಗಿದ್ದ. ಹಾಗಾದ್ರೆ ಆ ಮನೆಯಲ್ಲಿ ಬಿದ್ದ ಹೆಣ ಯಾರದ್ದು..? ಆ ಮನೆಯ ಮಗ ಕೊಲೆ ಮಾಡಿದ್ದೇಕೆ..? ನಿಗೂಡವಾಗಿದ್ದ ಕೊಲೆ ಕೇಸ್  ರಹಸ್ಯವನ್ನ ಪೊಲೀಸರು ಬೇದಿಸಿದ್ದೇಗೆ..?