ಸಿನಿಮೀಯ ಶೈಲಿಯಲ್ಲಿ ಲೋಕಾಯುಕ್ತ ಬಲೆಗೆ ಫುಡ್ ಇನ್‌ಸ್ಪೆಕ್ಟರ್: ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಯತ್ನ..!
ಸಿನಿಮಾ ಶೈಲಿಯಲ್ಲಿ ಕಾರ್ಯಚರಣೆ ನಡೆಸಿ ಲೋಕಾಯುಕ್ತ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ಫುಡ್ ಇನ್‌ಸ್ಪೆಕ್ಟರ್ ಹಿಡಿದಿದ್ದಾರೆ.
ಬೆಂಗಳೂರು: ವ್ಯಾಪಾರದ ಪರವಾನಗಿ ಪರಿಶೀಲನೆ ವೇಳೆ ಲಂಚ ಪಡೆಯುತ್ತಿದ್ದಾಗ ಫುಡ್ ಇನ್‌ಸ್ಪೆಕ್ಟರ್ (Food Inspector) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಫುಡ್ ಇನ್‌ಸ್ಪೆಕ್ಟರ್ ಮಹಾಂತೇಗೌಡ ಬಿ ಕಡಬಾಳು(Mahantesh B Kadabaalu) ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದಿದ್ದಾರೆ. ರಂಗದಾಮಯ್ಯ ಎಂಬುವರ ಬಳಿ ಟ್ರೇಡ್ ಲೈಸೆನ್ಸ್ ಚೆಕ್ ಮಾಡಲು ಮಹಾಂತೇಗೌಡ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡ ಹಣ 43 ಸಾವಿರ ನಗದನ್ನ ತೆಗೆದುಕೊಳ್ಳುವಾಗ ಲೋಕಾಯುಕ್ತ(Lokayukta) ಬಲೆಗೆ ಬಿದ್ದಿದ್ದಾರೆ. ನೆಲಮಂಗಲದವರೆ ಎಸ್ಕೇಪ್ ಆಗಿದ್ದ ಅವರನ್ನು 15 ಕಿ.ಮೀ ಬೆನ್ನಟ್ಟಿ ಲೋಯುಕ್ತ ಅಧಿಕಾರಿಗಳು ಅವರನ್ನು ಹಿಡಿದಿದ್ದಾರೆ. ನೆಲಮಂಗಲದ ಸೊಂಡೆಕೊಪ್ಪ ರಸ್ತೆ ಬಳಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ. ಈ ವೇಳೆ ಅಧಿಕಾರಿಗಳ ಮೇಲೆ ವಾಹನವನ್ನು ಚಲಾಯಿಸಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ವೀಕ್ಷಿಸಿ: ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕುಮಾರಸ್ವಾಮಿ ಎಕ್ಸ್‌ಕ್ಲೂಸಿವ್ ಮಾಹಿತಿ, ಎನ್‌ಡಿಎ ಸಭೆ ಬಳಿಕ ಅಂತಿಮ ಶರಾ?