Asianet Suvarna News Asianet Suvarna News

FIR On Zameer Ahmed : ಸೈಟ್ ಖರೀದಿಯಲ್ಲಿ ವಂಚನೆ, ಕೋರ್ಟಿನಲ್ಲಿ ಖಾಸಗಿ ದೂರು ದಾಖಲು

ಸೈಟ್ ಖರೀದಿಯ ವೇಳೆ ವಂಚನೆ ಮಾಡಿದ ಆರೋಪ
ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್
ಕೋರ್ಟ್ ನಲ್ಲಿ ದಾಖಲಾಗಿದ್ದ ಖಾಸಗಿ ದೂರು

ಬೆಂಗಳೂರು (ಫೆ. 20): ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ (Zameer Ahmed Khan ) ಹಾಗೂ ಅವರ ಸಹೋದರ ಜಮೀಲ್ ಅಹ್ಮದ್ ಖಾನ್ ಗೆ ಸಂಕಷ್ಟ ಎದುರಾಗಿದೆ. ಸೈಟ್ ಖರೀದಿಯಲ್ಲಿ ವಂಚನೆ ಮಾಡಿರುವ ಆರೋಪದಲ್ಲಿ ಜಮೀರ್ ಅಹ್ಮದ್ ಖಾನ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ನ ಬಿಗ್ ಇಂಪ್ಯಾಕ್ಟ್ ಇದಾಗಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಜಮೀರ್ ಅಹ್ಮದ್ ಹಾಗೂ ಸಹೋದರರ ವಿರುದ್ಧ ಎಫ್​ಐಆರ್ (FIR) ದಾಖಲು ಮಾಡಲಾಗಿದೆ. ಜಮೀರ್ ಅಹ್ಮದ್ ಖಾನ್ ಕುಟುಂಬದ ವಿರುದ್ಧ ಶಾಹೀತಾ ನಾಸೀನ್, ತಸ್ನೀಮ್ ಫಾತೀಮಾರಿಂದ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಕೆಯಾಗಿತ್ತು. ಎಫ್ಐಆರ್ ದಾಖಲಿಸಸಿರುವ ಬಗ್ಗೆಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಶಾಸಕ ಜಮೀರ್‌ ವಿರುದ್ಧ ಗಂಭೀರ ಆರೋಪ, ಎಫ್‌ಐಆರ್‌ ದಾಖಲು
ಸುವರ್ಣ ನ್ಯೂಸ್ ನಲ್ಲಿ ವರದಿ ಬಿತ್ತರವಾದ ಎರಡು ಗಂಟೆಯ ಒಳಗಾಗಿ ಎಫ್ ಐಆರ್ ದಾಖಲಾಗಿದೆ. ಕೋರ್ಟ್ ಆದೇಶದಂತೆ ಜಮೀಲ್ ಅಹ್ಮದ್ (Zameel Ahmed) ಜಮೀರ್ ಅಹ್ಮದ್, ಅತೀಕ್ ಕಾವರ್, ನ್ಯಾಷನಲ್ ಟ್ರಾವೆಲ್ಸ್ (National Travels) ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ಜಮೀರ್ ಕುಟುಂಬದ ವಿರುದ್ಧ ಕಳೆದ ವರ್ಷ ಸೈಟ್ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು. ಖಾಸಗಿ ದೂರನ್ನು ಆಲಿಸಿದ್ದ ಕೋರ್ಟ್ ತನಿಖೆ ನಡೆಸುವಂತೆ ಹೇಳಿದ್ದಲ್ಲದೆ, ಪ್ರಕರಣದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಹೇಳಿತ್ತು. ಆದರೆ, ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರೂ ಸೈಟ್ ಬಿಟ್ಟುಕೊಡದೇ ಇರುವ ಮೂಲಕ ಜಮೀರ್ ಅಹ್ಮದ್ ನ್ಯಾಯಾಂಗ ನಿಂದನೆ ಮಾಡಿದ್ದರು.

Video Top Stories