Asianet Suvarna News Asianet Suvarna News

ಶೂಟಿಂಗ್ ವೇಳೆ ಅವಘಡ, ನಿರ್ಮಾಪಕ ಗುರು ದೇಶಪಾಂಡೆಗೆ ಹುಡುಕಾಟ

*ಶೂಟಿಂಗ್ ವೇಳೆ ಫೈಟರ್ ಸಾವು
* ನಾಲ್ವರನ್ನು ಬಂಧಿಸಿದ ಪೊಲೀಸರು
* ಜಮೀನು ಮಾಲೀಕನ ವಶಕ್ಕೆ ಪಡೆದು ವಿಚಾರಣೆ
* ನಾಪತ್ತೆಯಾಗಿರುವ ನಿರ್ಮಾಪಕ ಗುರು ದೇಶಪಾಂಡೆಗೆ ಹುಡುಕಾಟ

ರಾಮನಗರ(ಆ. 09)  ಲವ್ ಯು ರಚ್ಚು ಸಿನಿಮಾ ಶೂಟಿಂಗ್ ವೇಳೆ ದುರಂತ ಸಂಭವಿಸಿದೆ. ವಿದ್ಯುತ್ ಶಾಕ್ ನಿಂದ ಫೈಟರ್ ವಿವೇಕ್ ಸಾವನ್ನಪ್ಪಿದ್ದು ನಾಪತ್ತೆಯಾಗಿರುವ ನಿರ್ಮಾಪಕ ಗುರು ದೇಶಪಾಂಡೆ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.

ಫೈಟರ್ ಸತ್ತರೂ ತಿಳಿಸದೆ ಕಾಲು ಕಿತ್ತ ಚಿತ್ರತಂಡ

ಪೊಲೀಸರು ಸಿನಿಮಾದ ಸಹ ನಿರ್ದೇಶಕ  ಶಂಕರ್ ರಾಜ್, ಸ್ಟೆಂಟ್ ಮಾಸ್ಟರ್ ವಿನೋದ್ ಮತ್ತು ಜೆಸಿಬಿ ಚಾಲಕರನ್ನು ಬಂಧಿಸಿದ್ದಾರೆ. ಶೂಟಿಂಗ್ ಗೆ ಪರವಾನಗಿ ಪಡೆಯದಿರುವ ಕಾರಣ  ಜಮೀನು ಮಾಲೀಕ ಪುಟ್ಟರಾಜು ಕೂಡಾ ವಶಕ್ಕೆ ಪಡೆಯಲಾಗಿದೆ.

 

 

Video Top Stories