Asianet Suvarna News Asianet Suvarna News

Vijayapura| ಭೀಮಾತೀರದ ಹಂತಕರ ಭಯಾನಕ ಟಾರ್ಚರ್‌ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!

*  ಹಂತಕರ ವಿಕೃತಿ ಬಗ್ಗೆ ವಿವರ ಕೊಟ್ಟ ರವಿ ರಾಥೋಡ್‌
*  ಕಿಡ್ನ್ಯಾಪರ್ಸ್‌ ಬಳಿ ಡೆಡ್ಲಿ ಇವೆಯಂತೆ ಕಂಟ್ರಿಮೇಡ್‌ ಪಿಸ್ತೂಲ್‌
*  ಹಂತಕರ ಟಾರ್ಚರ್‌ ಕಥೆ ಕೇಳಿ ಶಾಕ್‌ ಆದ ಪೊಲೀಸರು 

Nov 22, 2021, 11:11 AM IST

ವಿಜಯಪುರ(ನ.22): ಭೀಮಾತೀರದ ಹಂತಕರ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನಿರಂತರವಾಗಿ ವರದಿ ಮಾಡುತ್ತಿದೆ. ಸತತ ಮೂರು ದಿನಗಳಿಂದ ಭೀಮಾತೀರದ ಹಂತಕರ ಮುಖವಾಡವನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಯಲು ಮಾಡುತ್ತಿದೆ. ಹಂತಕರ ವಿಕೃತಿ ಬಗ್ಗೆ ರವಿ ರಾಥೋಡ್‌ ವಿವರ ಕೊಟ್ಟಿದ್ದಾನೆ. ರವಿ ಬಾಯ್ಬಿಟ್ಟ ಸಂಗತಿ ಕೇಳಿದ್ರೆ ಎಂಥವರನ್ನೂ ದಂಗಾಗಿಸುತ್ತದೆ. ಹೌದು, ಕಿಡ್ನ್ಯಾಪರ್ಸ್‌ ಬಳಿ ಡೆಡ್ಲಿ ಕಂಟ್ರಿಮೇಡ್‌ ಪಿಸ್ತೂಲ್‌ ಇವೆಯಂತೆ. ಕಿಡ್ನ್ಯಾಪ್‌ ವೇಳೆ ಎರಡು ಸುತ್ತು ಫೈರಿಂಗ್‌ ಮಾಡಿ ಬೆದರಿಸಿದ್ದರು ಈ ಕ್ರಿಮಿನಲ್ಸ್‌. 

Mangaluru : ಸಂಜೆ ಬಾಲಕಿ ನಾಪತ್ತೆ, ರಾತ್ರಿ ಚರಂಡಿಯಲ್ಲಿ ಶವವಾಗಿ ಪತ್ತೆ, ಕೊಲೆ ಶಂಕೆ

ಫೈರಿಂಗ್‌ ಮಾಡಿ ತಲವಾರ್‌ನಿಂದ ಬೆದರಿಸಿ ರವಿ ಅಪಹರಣ ಮಾಡಲಾಗಿತ್ತು. ಅಪಹರಣದ ನಂತರ ರವಿಗೆ ತರಹೇವಾರಿ ಟಾರ್ಚರ್‌ ಕೊಟ್ಟಿದ್ದಾರೆ ಕಿಡಿಗೇಡಿಗಳು. ಚಾಕು, ಬ್ಲೇಡ್‌ನಿಂದ ರವಿ ನಾಲಿಗೆಯನ್ನ ಸೀಳಿದ್ದಾರೆ ಕಿರಾತಕರು. ಪ್ರತಿನಿತ್ಯ ಎರಡೆರಡು ಇಂಜೆಕ್ಷನ್‌ ನೀಡುತ್ತಿದ್ದರಂತೆ, ರವಿ ಹೇಳಿದ ಟಾರ್ಚರ್‌ ಕಥೆ ಕೇಳಿದ ಪೊಲೀಸರೇ ಶಾಕ್‌ ಆಗಿದ್ದಾರೆ. ರವಿ ಹೇಳಿಕೆಯ ಮೇಲೆ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.