Asianet Suvarna News Asianet Suvarna News

ಎಟಿಎಂಗಳಲ್ಲಿ ಮೈಮರೆಯಬೇಡಿ : ಕ್ಷಣಮಾತ್ರದಲ್ಲೇ ನಿಮ್ಮ ಕಾರ್ಡ್‌ ಎಗರಿಸಿ ಬಿಡುತ್ತೆ ಈ ಗ್ಯಾಂಗ್‌

ಮೋದಿ ಸರ್ಕಾರ ಡಿಜಿಟಲ್ ಇಂಡಿಯಾಕ್ಕಾಗಿ ನಗದು ರಹಿತ ವ್ಯವಹಾರ ಮಾಡಿ ಎನ್ನುತ್ತೆ. ಅದಕ್ಕಾಗಿ ದಾಖಲೆ ಮಟ್ಟದಲ್ಲಿ ಬ್ಯಾಂಕ್ ಅಕೌಂಟ್‌ಗಳನ್ನು ತೆಗೆಯುವಂತೆ ನೋಡಿಕೊಂಡಿದೆ. ಆದರೂ ಎಷ್ಟೋ ಮಂದಿಗೆ ಆನ್‌ಲೈನ್ ಪೇಮೆಂಟ್‌ಗಳಲ್ಲಿ ನಂಬಿಕೆ ಇಲ್ಲ. 

First Published Apr 9, 2022, 4:21 PM IST | Last Updated Apr 9, 2022, 5:16 PM IST

ಮೋದಿ ಸರ್ಕಾರ ಡಿಜಿಟಲ್ ಇಂಡಿಯಾಕ್ಕಾಗಿ ನಗದು ರಹಿತ ವ್ಯವಹಾರ ಮಾಡಿ ಎನ್ನುತ್ತೆ. ಅದಕ್ಕಾಗಿ ದಾಖಲೆ ಮಟ್ಟದಲ್ಲಿ ಬ್ಯಾಂಕ್ ಅಕೌಂಟ್‌ಗಳನ್ನು ತೆಗೆಯುವಂತೆ ನೋಡಿಕೊಂಡಿದೆ. ಆದರೂ ಎಷ್ಟೋ ಮಂದಿಗೆ ಆನ್‌ಲೈನ್ ಪೇಮೆಂಟ್‌ಗಳಲ್ಲಿ ನಂಬಿಕೆ ಇಲ್ಲ. ಇವರೂ ಹೆಚ್ಚಾಗಿ ಕ್ಯಾಶ್‌ಗಳನ್ನೇ ಬಳಸುತ್ತಾರೆ.

ಮಿಡ್‌ನೈಟ್ ಆಪರೇಷನ್‌: ಬೆಂಗಳೂರಿನ ಈ ಗ್ಯಾಂಗ್ ಕೈಗೆ ಸಿಕ್ರೆ ನಿಮ್ಮ ಕಥೆ ಅಷ್ಟೇ!

ಎಟಿಎಂ ಬಳಸಿ, ಹಣ ಪಡೆದುಕೊಳ್ಳುತ್ತಾರೆ. ಇಂತವರನ್ನೇ ಟಾರ್ಗೆಟ್ ಮಾಡುವ ಗ್ಯಾಂಗೊಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಕ್ರಿಯವಾಗಿದೆ. ನೀವು ಎಟಿಎಂ ಒಳಗೆ ಹೋದಾಗ ನಿಮ್ಮ ಕಾರ್ಡ್ ಯಾವುದು ಎಂದು ಗಮನಿಸಿ, ಸಹಾಯದ ನೆಪದಲ್ಲಿ ಅದೇ ಕಾರ್ಡಿನ ನಕಲನ್ನು ನಿಮಗೆ ಕೊಡ್ತಾರೆ. ಹೀಗೆ ನಂಬಿ ಹಣ ಕಳೆದುಕೊಂಡವರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಈ ಗ್ಯಾಂಗ್‌ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಕವರ್ ಸ್ಟೋರಿಯ ಕಾರ್ಯಾಚರಣೆ ನಡೆಸಿದೆ.