ಇಬ್ಬರು ಡೆಲ್ಲಿ ಕ್ರಿಕೆಟಿಗರ ವೃತ್ತಿ ಬದುಕಿಗೆ ಫುಲ್ ಸ್ಟಾಪ್ ಇಟ್ಟರಾ ಕ್ಯಾಪ್ಟನ್ ಕೊಹ್ಲಿ..?
ಕಿವೀಸ್ ಪ್ರವಾಸದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇದರ ಜತೆಗೆ ವಿಕೆಟ್ ಕೀಪಿಂಗ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದು ಇಬ್ಬರು ಡೆಲ್ಲಿ ಕ್ರಿಕೆಟಿಗರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಆಕ್ಲೆಂಡ್(ಜ.26): ಟೀಂ ಇಂಡಿಯಾ ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ತಾನಾಡಿದ ಮೊದಲೆರಡು ಪಂದ್ಯಗಳಲ್ಲೂ ಕೊಹ್ಲಿ ಪಡೆ ಗೆಲುವಿನ ಕೇಕೆ ಹಾಕಿದೆ. ಇನ್ನು ಇದೇ ಸರಣಿ ಡೆಲ್ಲಿ ಕ್ರಿಕೆಟಿಗರ ಪಾಲಿಗೆ ಕಂಠಕವಾಗುವ ಸಾಧ್ಯತೆಯಿದೆ.
ಐಪಿಎಲ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡ್ತಾರಾ ಡಿವಿಲಿಯರ್ಸ್?
ಹೌದು, ಕಿವೀಸ್ ಪ್ರವಾಸದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇದರ ಜತೆಗೆ ವಿಕೆಟ್ ಕೀಪಿಂಗ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದು ಇಬ್ಬರು ಡೆಲ್ಲಿ ಕ್ರಿಕೆಟಿಗರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಗಣರಾಜ್ಯೋತ್ಸವಕ್ಕೆ ಗೆಲುವಿನ ಉಡುಗೊರೆ ನೀಡಿದ ಟೀಂ ಇಂಡಿಯಾ
ಡೆಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಕೊಹ್ಲಿ ಸಾಕಷ್ಟು ಅವಕಾಶ ನೀಡಿದರೂ ತಮ್ಮ ಬೇಜವಾಬ್ದಾರಿ ಆಟದಿಂದಾಗಿ ತಂಡದಿಂದ ಕಿಕೌಟ್ ಆಗಿದ್ದಾರೆ. ಇನ್ನು ಶಿಖರ್ ಧವನ್ ಸಹಾ ಪದೇ ಪದೇ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಬೀಳುತ್ತಿದ್ದಾರೆ. ಹೀಗಾಗಿ ನಾಯಕ ರಾಹುಲ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಿದ್ದಾರೆ, ಜತೆಗೆ ಆರಂಭಿಕನಾಗಿಯೂ ಬಡ್ತಿ ನೀಡಿದ್ದಾರೆ. ಈ ಎರಡು ಅವಕಾಶಗಳನ್ನು ರಾಹುಲ್ ಬಾಚಿಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...