Asianet Suvarna News Asianet Suvarna News

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸೌರವ್ ಗಂಗೂಲಿ

Jul 8, 2021, 7:22 PM IST

ಕೋಲ್ಕತ(ಜು.08): ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು(ಜು.08, 2021)ದಂದು 49ನೇ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡಿದ್ದಾರೆ. ಇಡೀ ದೇಶವೇ ಕೊರೋನಾ ಸಂಕಷ್ಟದಲ್ಲಿರುವುದರಿಂದ ಅದ್ದೂರಿ ಸಂಭ್ರಮಾಚರಣೆಗೆ ದಾದಾ ಬ್ರೇಕ್ ಹಾಕಿದ್ದಾರೆ.

ಕೋವಿಡ್‌ನಿಂದ ಬಚಾವಾಗಲು ಎಲ್ಲರೂ ಮನೆಯಲ್ಲಿಯೇ ಆದಷ್ಟು ಸುರಕ್ಷಿತವಾಗಿರಿ ಎಂದು ಅಭಿಮಾನಿಗಳಿಗೆ ದಾದಾ ಕಿವಿ ಮಾತು ಹೇಳಿದ್ದಾರೆ. ಕ್ರಿಕೆಟಿಗನಾಗಿದ್ದರೂ ಅಪ್ಪಟ ಫುಟ್ಬಾಲ್ ಅಭಿಮಾನಿಯಾಗಿರುವ ಸೌರವ್ ಯುರೋ ಕಪ್ ಫುಟ್ಬಾಲ್‌ ಫೈನಲ್ ಪ್ರವೇಶಿಸಿರುವ ಇಟಲಿ ಹಾಗೂ ಇಂಗ್ಲೆಂಡ್ ತಂಡಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸಿಂಪಲ್‌ ಬರ್ತ್‌ ಡೇ ಆಚರಿಸಿಕೊಂಡ ಸೌರವ್ ಗಂಗೂಲಿ

ಮುಂಬರುವ ದಿನಗಳಲ್ಲಿ ಸುರಕ್ಷಿತವಾಗಿ ಕ್ರಿಕೆಟ್‌ ನಡೆಯುತ್ತೆ, ನಿಲ್ಲುವುದಿಲ್ಲ. ಒಂದು ವೇಳೆ ಟಿ20 ವಿಶ್ವಕಪ್ ಮತ್ತೊಮ್ಮೆ ರದ್ದಾದರೆ ಸಾಕಷ್ಟು ಆರ್ಥಿಕ ನಷ್ಟವಾಗಲಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.