Asianet Suvarna News Asianet Suvarna News

ವಿಶ್ವದಾದ್ಯಂತ ಸೌತ್ ಡೈರೆಕ್ಟರ್ ಹವಾ: ಪುಷ್ಪ ನಿರ್ದೇಶಕರ ಮೇಲೆ ಭಾರತೀಯ ಸಿನಿಮಾರಂಗದ ಕಣ್ಣು

ಸೌತ್ ಸಿನಿಮಾಗಳು ಈಗ ವಿಶ್ವದಾಧ್ಯಂತ ಹೆಸರು ಮಾಡ್ತಿದೆ. ವಿಭಿನ್ನ ರೀತಿಯ ಕಥೆ ಹಾಗೂ ಮೇಕಿಂಗ್‌ನಿಂದಾಗಿ ಸೌತ್ ನಿರ್ದೇಶಕರು ಸುದ್ದಿಯಲ್ಲಿದ್ದಾರೆ. ಬೆಸ್ಟ್ ನಿರ್ದೇಶಕರ ಪಟ್ಟಿಯಲ್ಲಿರುವ ಸ್ಟಾರ್ ಡೈರೆಕ್ಟರ್‌ಗಳು ಯಾರು? ಯಾರು ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನೋದೆ ಇಂಟ್ರೆಸ್ಟಿಂಗ್.

ಸೌತ್ ಸಿನಿಮಾಗಳು ಈಗ ವಿಶ್ವದಾಧ್ಯಂತ ಹೆಸರು ಮಾಡ್ತಿದೆ. ವಿಭಿನ್ನ ರೀತಿಯ ಕಥೆ ಹಾಗೂ ಮೇಕಿಂಗ್‌ನಿಂದಾಗಿ ಸೌತ್ ನಿರ್ದೇಶಕರು ಸುದ್ದಿಯಲ್ಲಿದ್ದಾರೆ. ಬೆಸ್ಟ್ ನಿರ್ದೇಶಕರ ಪಟ್ಟಿಯಲ್ಲಿರುವ ಸ್ಟಾರ್ ಡೈರೆಕ್ಟರ್‌ಗಳು ಯಾರು? ಯಾರು ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನೋದೆ ಇಂಟ್ರೆಸ್ಟಿಂಗ್. ಅಲ್ಲು ಅರ್ಜುನ್ ಸಿನಿಮಾ ಜರ್ನಿಯಲ್ಲಿಯೇ ಡಿಫ್ರೆಂಟ್ ಎನ್ನಿಸೋ ಕಥೆಯನ್ನ  ಮಾಡಿ ಸಕ್ಸಸ್ ಕೊಟ್ಟ ಚಿತ್ರ. ಈ ಚಿತ್ರದ ರೂವಾರಿ ಸುಕುಮಾರ್. ಸುಕುಮಾರ್ ಈ ರೀತಿ ಸಿನಿಮಾ ಮಾಡಿ ಗೆದ್ದಿದ್ದು ಇದೇ ಮೊದಲಲ್ಲ. ಬನ್ನಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನ ಕೊಟ್ಟಿರೋ ಸುಕುಮಾರ್ ಪುಷ್ಪ ಚಿತ್ರಕ್ಕಾಗಿ 20 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಸುಕುಮಾರ್ ಟಾಲಿವುಡ್ ಇಂಡಸ್ಟ್ರಿಗೆ ಪುಷ್ಪ, ಆರ್ಯಾ, ರಂಗಸ್ಥಳಂ, ಉಪ್ಪೇನಾ, ನಾನಕು ಪ್ರೇಮತೋ ಹೀಗೆ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದಾರೆ. 

ಇನ್ನು ಭಾರತೀಯ ಸಿನಿಮಾರಂಗದ ನಂಬರ್ 1 ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ. ಬಾಹುಬಲಿ ಚಿತ್ರಕ್ಕೆ ರಾಜಮೌಳಿ 75 ಕೋಟಿ ಸಂಭಾವನೆ ಪಡೆದಿದ್ದಾರಂತೆ. ವಿಶೇಷ ಅಂದ್ರೆ ಮೌಳಿ ಆಕ್ಷನ್ ಕಟ್ ಹೇಳಿದ ಸಿನಿಮಾಗಳೆಲ್ಲವೂ ಬಾಕ್ಸ್‌ಆಫೀಸ್‌ನಲ್ಲಿ ಸೂಪರ್ ಹಿಟ್. ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಒಂದು ಸಿನಿಮಾಗೆ 20 ಕೋಟಿ ಸಂಭಾವನೆ ಪಡೆಯುತ್ತಾರಂತೆ. ಅದು ಕೆಜಿಎಫ್ ಚಿತ್ರದಲ್ಲಿ ಪ್ರಶಾಂತ್ ಸಂಭಾವನೆ ಹೆಚ್ಚಾಗಿದೆ. ಕೆಜಿಎಫ್ 2 ಗೆ 20 ಕೋಟಿ ಸಂಭಾವನೆ ಪಡೆದಿದ್ದಾರೆ. ಸಲಾರ್ ಚಿತ್ರಕ್ಕೆ 40 ಕೋಟಿ ತೆಗೆದುಕೊಂಡಿದ್ದಾರೆ. ಇನ್ನು ಮೈತ್ರಿ ಮೂವಿಸ್‌ನಲ್ಲಿ ಮಾಡ್ತಿರೋ ಚಿತ್ರಕ್ಕೆ ಸಂಭಾವನೆ ಜೊತೆಗೆ ಲಾಭದಲ್ಲಿ ಮೂವತ್ತು ಪರ್ಸೆಂಟ್ ಶೇರ್ ಕೂಡ ಪಡೆಯುತ್ತಾರೆ ನೀಲ್. ಕಾಲಿವುಡ್‌ನ ಸ್ಟಾರ್ ಡೈರೆಕ್ಟರ್ ಲಿಸ್ಟ್ ಸೇರಿರೋ ನಿರ್ದೇಶಕ ಅಟ್ಲಿ. 

ಜ್ಯೂ. ಎನ್‌ಟಿಆರ್ ಜತೆ ಸೇರಿ ಮತ್ತೊಂದು ಕಮಾಲ್ ಮಾಡಲು ಪ್ರಶಾಂತ್ ನೀಲ್ ರೆಡಿ.!

ಅಟ್ಲಿ ಈಗಾಗಲೇ ರಾಜರಾಣಿ, ತೇರಿ, ಮರ್ಸೆಲ್ , ಬಿಗಿಲ್ ಸಿನಿಮಾ ಮೂಲಕ ಸಕ್ಸಸ್ ಫುಲ್ ನಿರ್ದೇಶಕ ಅಂತ ಹೆಸರು ಮಾಡಿದ್ದಾರೆ. ಸದ್ಯ ಅಟ್ಲಿ ಒಂದು ಸಿನಿಮಾಗೆ 25 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಭಾರತೀಯ ಸಿನಿಮಾರಂಗದ ಟಾಪ್ ಅಂಡ್ ಸಕ್ಸಸ್ ಡೈರೆಕ್ಟರ್ ಶಂಕರ್. ಎಂದಿರನ್, ಜೆಂಟಲ್ ಮನ್, ಕಾದಲನ್, ಅನ್ನಿಯನ್, ಇಂಡಿಯನ್  ರೀತಿಯ ಭಾರೀ ಬಜೆಟ್ ಸಿನಿಮಾ ನಿರ್ದೇಶನ ಮಾಡಿದ್ದು ಅವೆಲ್ಲವೂ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿದೆ. ಇಂತಹ ಚಿತ್ರಗಳನ್ನು ನೀಡಿರುವ ಶಂಕರ್ ಅವರ ಸಂಭಾವನೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುತ್ತೆ. 2017 ರಲ್ಲಿ ಶಂಕರ್ 18 ಕೋಟಿ ಸಂಭಾವನೆ ತೆಗೆದುಕೊಳ್ತಿದ್ರು. 2.0 ಚಿತ್ರಕ್ಕೆ 32 ಕೋಟಿ ಸಂಭಾವನೆ ಪಡೆದಿದ್ರು ಸದ್ಯ ರಾಮ್ ಚರಣ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಅದಕ್ಕೆ 50 ಕೋಟಿಗೂ ಹೆಚ್ಚು ಪಡೆದಿದ್ದಾರೆ ಅನ್ನೋ ಮಾತಿದೆ. ಒಟ್ಟಾರೆ ಸಿನಿಮಾ ಬಜೆಟ್ ಹೆಚ್ಚಾದಂತೆ ಸಿನಿಮಾ ನಿರ್ದೇಶಕರ ಸಂಭಾವನೆ ಕೂಡ ಏರುತ್ತಿದೆ. ಸಂಭಾವನೆ ಹೆಚ್ಚು ಪಡೆದಂತೆ ನಿರ್ದೇಶಕರ ಮೇಲಿನ ಜವಾಬ್ದಾರಿ ಕೂಡ ಜಾಸ್ತಿ ಆಗುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories