Asianet Suvarna News Asianet Suvarna News

ಏರ್ ಪೋರ್ಟ್‌ನಲ್ಲಿ ನಟಿ ಶ್ರಿಯಾಗೆ ಚುಂಬಿಸಿದ ಪತಿ: ವಿಡಿಯೋ ವೈರಲ್

ನಟಿ ಶ್ರಿಯಾ ಶರಣ್'ಗೆ ಅವರ ಪತಿ ಆಂಡ್ರೆ ಕೊಶ್ಚೆವ್ ರೋಮ್ಯಾಂಟಿಕ್ ಕಿಸ್ ಮಾಡಿದ ವಿಡಿಯೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ಶ್ರಿಯಾ ಶರಣ್ ಹಾಗೂ ಪತಿ ಆಂಡ್ರೆ ಗೋವಾಕ್ಕೆ ಹಾರಿದ್ದು, ಇದಕ್ಕೂ ಮುನ್ನ ಏರ್ ಪೋರ್ಟ್'ನಲ್ಲಿ ಕ್ಯಾಮೆರಾಗಳಿಗೆ ಈ ಜೋಡಿ ಪೋಸ್ ನೀಡಿದೆ. ಈ ವೇಳೆ ಪತ್ನಿ ಶ್ರೀಯಾಗೆ ಚುಂಬಿಸಿದ್ದಾರೆ ಪತಿ. ಕ್ಯಾಮೆರಾ ಮ್ಯಾನ್ಸ್ ಮತ್ತೊಮ್ಮೆ ಇದೇ ರೀತಿ ಪೋಸ್ ನೀಡಿ ಎಂದು ವಿನಂತಿಸಿಕೊಂಡಾಗ, ಶ್ರೀಯಾಗೆ ಮತ್ತೊಮ್ಮೆ ಸಿಹಿ ಮುತ್ತು ನೀಡಿದ್ದಾರೆ ಆಂಡ್ರೆ. ಇನ್ನು ಉಪೇಂದ್ರ ನಟನೆಯ 'ಕಬ್ಜ' ಚಿತ್ರದಲ್ಲೂ ಶ್ರಿಯಾ ನಟಿಸುತ್ತಿದ್ದು, ಈ ಹಿಂದೆ ಪ್ರೇಮ್‌ ಜೊತೆಗೆ 'ಚಂದ್ರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದ ಶ್ರಿಯಾ, ಈಗ ಉಪ್ಪಿಗೆ ಜೋಡಿಯಾಗಿದ್ದಾರೆ. ದೃಶ್ಯಂ 2 ಸಿನಿಮಾದಲ್ಲಿ ಅಜಯ್ ಅಜಯ್ ದೇವಗನ್ ಜೊತೆ ಕೂಡ ನಟಿಸಿದ್ದಾರೆ. ಅದೇನೆ ಇದ್ದರೂ ನಟಿಯ ಬೋಲ್ಡ್ ಆಟಿಟ್ಯೂಡ್'ಗೆ ಕೆಲವರು ವಾವ್ ಎಂದರೆ,‌ ಇನ್ನು ಕೆಲವರು ಭಾರತೀಯ ಸಂಸ್ಕೃತಿ ಮರೆತು ಬಿಟ್ರಾ ಎಂದು ಕೇಳುತ್ತಿದ್ದಾರೆ.

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆಯದ್ರಾ? ಇಂಟರ್‌ನೆಟ್‌ನಲ್ಲಿ ಫೋಟೋ ವೈರಲ್