Asianet Suvarna News Asianet Suvarna News

'ಯೆಂಟಮ್ಮಾ' ಹಾಡಿಗೆ ಲುಂಗಿ ಡ್ಯಾನ್ಸ್ ಮಾಡಿದ ಸಲ್ಮಾನ್ ಖಾನ್‌, ರಾಮ್‌ಚರಣ್, ವೆಂಕಟೇಶ್!

ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದ ‘ಯೆಂಟಮ್ಮಾ’ ಸಾಂಗ್ ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಹೈಪ್ ಕ್ರಿಯೆಟ್ ಮಾಡುತ್ತಿದೆ. ಸಲ್ಮಾನ್ ಖಾನ್ ಜೊತೆ ರಾಮ್ ಚರಣ್, ವೆಂಕಟೇಶ್ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. 

First Published Apr 6, 2023, 11:45 AM IST | Last Updated Apr 6, 2023, 11:45 AM IST

ಕಾಲ ಬದಲಾಗಿದೆ. ಸೌಥ್ ಸಿನಿಮಾ ನಾರ್ತ್ ಸಿನಿಮಾ ಕಾನ್ಸೆಪ್ಟ್ ಬದಲಾಗಿದೆ.. ಈಗೇನಿದ್ರೂ ನಾವೆಲ್ಲಾ ಭಾರತೀಯರು. ನಮ್ಮದೆಲ್ಲಾ ಒಂದೇ ಇಂಡಸ್ಟ್ರಿ ಎಂಬ ಭಾವನೆ ಮೂಡಿದೆ. ಸೌತ್ ಸಿನಿಮಾಗಳ ತಾಕತ್ತು ವಿಶ್ವದೆಲ್ಲೆಡೆ ಸಾಬೀತಾದ ಮೇಲೆ ಈ ನಿಲುವು ಮೂಡಿದೆ. ಬಾಹುಬಲಿ ಕೆಜಿಎಫ್ ಆರ್‌ಆರ್‌ಆರ್‌ ಕಾಂತಾರ ನಂತರ ಇದೀಗ ಬಾಲಿವುಡ್ ಮಂದಿ ಸೌತ್ ಸಿನಿಮಾಗಳತ್ತ ತಿರುಗಿನೋಡುವಂತಾಗಿದೆ. ಪ್ರತಿ ಬಾಲಿವುಡ್ ಸ್ಟಾರ್ ಸಿನಿಮಾ ಗೆಲುವಿಗೂ ಇದೀಗ ಸೌತ್ ಸ್ಟಾರ್ಗಳು ನಟಿಸಬೇಕಾಗಿದೆ.  ಈ ಮಾತು ಹೇಳೋಕೆ ಕಾರಣ ಸಲ್ಮಾನ್ ಖಾನ್ ಹೊಸ ಚಿತ್ರದ ಹಾಡಿನಲ್ಲಿ ಸಲ್ಲೂ ಜೊತೆ ಸೌತ್ ಸ್ಟಾರ್ಗಳಾದ ರಾಮ್ಚರಣ್ ವೆಂಕಟೇಶ್ ಲುಂಗಿ ಡಾನ್ಸ್ ಮಾಡಿರೋದು. 

ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದ ‘ಯೆಂಟಮ್ಮಾ’ ಸಾಂಗ್ ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಹೈಪ್ ಕ್ರಿಯೆಟ್ ಮಾಡುತ್ತಿದೆ. ಸಲ್ಮಾನ್ ಖಾನ್ ಜೊತೆ ರಾಮ್ ಚರಣ್, ವೆಂಕಟೇಶ್ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಮೂವರು ಸ್ಟಾರ್ಗಳ ಲುಂಗಿಡಾನ್ಸ್ ಮಸ್ತ್ ಮಸ್ತ್. ಸಲ್ಮಾನ್ ಖಾನ್ ನಟನೆ ಮತ್ತು ನಿರ್ಮಾಣದ ಜವಬ್ದಾರಿ ಹೊತ್ತಿರುವ Kisi Ka Bhai Kisi Ka Jaan ಸಿನಿಮಾ ಸಾಂಗ್ ರಿಲೀಸ್ ಆಗಿದೆ. ಸಲ್ಮಾನ್ ಚಿತ್ರಕ್ಕೆ ಗೆಸ್ಟ್ ಅಪಿಯರೆನ್ಸ್ ಕೊಟ್ಟಿರುವ ರಾಮ್ ಚರಣ್ – ವೆಂಕಟೇಶ್ ಮಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಪೂಜಾ ಹೆಗ್ಡೆ ಕೂಡ ನಾನೇನು ಕಮ್ಮಿ ಅಂತಾ ಭರ್ಜರಿಯಾಗಿ ಯೆಂಟಮ್ಮಾ ಸಾಂಗ್ಗೆ ಸ್ಟೆಪ್ ಹಾಕಿದ್ದಾರೆ. 

ಸಲ್ಮಾನ್ ಖಾನ್ ಪಕ್ಕಾ ಸೌತ್ ಇಂಡಿಯನ್ ಶೈಲಿಯ ಕಾಸ್ಟ್ಯೂಮ್ ಧರಿಸಿ ಮಿಂಚಿದ್ದಾರೆ. ಪಂಚೆಯಲ್ಲಿ ಅವರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ‘ಯೆಂಟಮ್ಮಾ..’ ಹಾಡಿಗೆ ಪಾಯಲ್ ದೇವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಗೀತೆಯಲ್ಲಿ ಹಿಂದಿ ಮತ್ತು ತೆಲುಗು ಮಿಶ್ರಿತ ಸಾಹಿತ್ಯ ಇದೆ. ಇದು ಅಭಿಮಾನಿಗಳಿಗೆ ಹೊಸ ಕಿಕ್ ನೀಡುತ್ತಿದೆ. ಅಂದಹಾಗೆ, ರಾಮ್ ಚರಣ್ ಅವರು ಈ ಚಿತ್ರದಲ್ಲಿ ನಟಿಸಿಲ್ಲ. ಅವರು ಈ ಹಾಡಿನಲ್ಲಿ ಗೆಸ್ಟ್ ಅಪಿಯರೆನ್ಸ್ ನೀಡಿದ್ದಾರೆ ಅಷ್ಟೇಇನ್ನೂ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರ ಏ. 21ಕ್ಕೆ ತೆರೆಗೆ ಬರುತ್ತಿದೆ.ಬೇರೆ ನಟರ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಪರದೆಯಲ್ಲಿ ದರ್ಶನ ನೀಡಿದ್ದು ಬಿಟ್ಟರೆ 2022ರಲ್ಲಿ ಸಲ್ಮಾನ್ ಖಾನ್ ಅವರು ಯಾವುದೇ ಸಿನಿಮಾ ರಿಲೀಸ್ ಆಗಲಿಲ್ಲ. ಹಾಗಾಗಿ ಬಹುದಿನಗಳ ಬಳಿಕ ಅವರ ಸಿನಿಮಾ ತೆರೆ ಕಾಣುತ್ತಿರುವುದರಿಂದ ಅಭಿಮಾನಿಗಳ ಮನದಲ್ಲಿ ನಿರೀಕ್ಷೆಯ ಮಟ್ಟ ಹೆಚ್ಚಿದೆ.