Asianet Suvarna News Asianet Suvarna News

Drishya 2 ರವಿಚಂದ್ರನ್-ನವ್ಯಾ ಅಭಿನಯದ ದೃಶ್ಯ-2 ರಿಲೀಸ್ ಡೇಟ್ ಫಿಕ್ಸ್

Dec 8, 2021, 3:22 PM IST
  • facebook-logo
  • twitter-logo
  • whatsapp-logo

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಫ್ಯಾಮಿಲಿ ಥ್ರಿಲ್ಲರ್ ‘ದೃಶ್ಯ 2’ಸಿನಿಮಾ ಡಿ.10ಕ್ಕೆ ರಾಜ್ಯಾ ದ್ಯಂತ ಬಿಡುಗಡೆ ಯಾಗಲಿದೆ. 2014ರಲ್ಲಿ ಈ ಸಿನಿಮಾದ ಮೊದಲ ಭಾಗ ‘ದೃಶ್ಯ’(Drishya) ಶೀರ್ಷಿಕೆಯಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ರವಿಚಂದ್ರನ್ ರಾಜೇಂದ್ರ ಪೊನ್ನಪ್ಪನಾಗಿ ಮಿಂಚಿದ್ದರು. ಇದೀಗ ಈ ಸಿನಿಮಾದ ಸೀಕ್ವಲ್ ‘ದೃಶ್ಯ 2’ ತೆರೆಗೆ ಬರಲು ಕ್ಷಣಗಣನೆ ಆರಂಭವಾಗಿದೆ. ಪಿ ವಾಸು ನಿರ್ದೇಶನದ ಚಿತ್ರದಲ್ಲಿ ರಾಜೇಂದ್ರ ಪೊನ್ನಪ್ಪ ಕುಟುಂಬದ ಕಥೆಯೇ ಮುಖ್ಯವಾಗಿದ್ದು, ರವಿಚಂದ್ರನ್ ಕುಟುಂಬವಾಗಿ ನವ್ಯಾ ನಾಯರ್, ಆರೋಹಿ ನಾರಾಯಣ್, ಉನ್ನತಿ ಕಾಣಿಸಿಕೊಂಡಿದ್ದಾರೆ.

Chaka Chak goes Viral: ಚೆನ್ನಾಗಿ ಡ್ಯಾನ್ಸ್ ಮಾಡಿದ್ರೂ ಆಂಟಿ ಅಂತ ಕರೆಸ್ಕೊಂಡ ನಟಿ

ಅನಂತ್‌ನಾಗ್ ಮುಖ್ಯಪಾತ್ರದಲ್ಲಿದ್ದಾರೆ. ಪ್ರಭು ಶಿವಾಜಿ, ಲಾಸ್ಯ ನಾಗರಾಜ್, ಸಾಧು ಕೋಕಿಲ ಮತ್ತಿತರರ ತಾರಾಗಣವಿದೆ. ಈ4 ಎಂಟರ್ ಟೈನ್‌ಮೆಂಟ್ ನಿರ್ಮಿಸುತ್ತಿರುವ ಚಿತ್ರಕ್ಕೆ ಸಿ ವಿ ಸಾರಥಿ ಕಾರ್ಯಕಾರಿ ನಿರ್ಮಾಪಕರು. ಮಲಯಾಳಂನ ‘ದೃಶ್ಯಂ 2’ ಚಿತ್ರದ ರೀಮೇಕ್ ಇದು.