Asianet Suvarna News Asianet Suvarna News

ಡೇಟಿಂಗೂ ಮಾಡ್ತಾರೆ, ಡಿನ್ನರೂ ಮಾಡ್ತಾರೆ ಆದರೆ..: ದೇವರಕೊಂಡ ಜೊತೆ ಬ್ರೇಕಪ್ ಮಾಡಿಕೊಂಡ್ರಾ ರಶ್ಮಿಕಾ?

ರಶ್ಮಿಕಾ ಮಂದಣ್ಣ ಮಾತ್ರ ವಿಜಯ್‌ ದೇವರಕೊಂಡ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಲಿಲ್ಲ. ಗೀತ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಒಟ್ಟಿಗೆ ನಟಿಸಿದ್ದರು.

ವಿಜಯ್ ದೇವರಕೊಂಡ ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಮಾತ್ರ ವಿಜಯ್‌ ದೇವರಕೊಂಡ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಲಿಲ್ಲ. ಗೀತ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಪ್ರೇಕ್ಷಕರು ಈ ಜೋಡಿಯನ್ನು ಇಷ್ಟಪಟ್ಟಿದ್ದಾರೆ. ಆ ನಂತರ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಇದೀಗ ವಿಜಯ್ ಹುಟ್ಟುಹಬ್ಬಕ್ಕೆ ರಶ್ಮಿಕಾ ಮಂದಣ್ಣ ವಿಶ್ ಮಾಡದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಳೆದ ವರ್ಷ ರಶ್ಮಿಕಾ ಇನ್‌ಸ್ಟಾಗ್ರಾಮ್ ಸ್ಟೇಟಸ್ ಮೂಲಕ ವಿಜಯ್ ದೇವರಕೊಂಡ ಅವರಿಗೆ ಶುಭ ಕೋರಿದ್ದರು. ಆದರೆ ಈ ಬಾರಿ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ ಹಾಕಿಲ್ಲ. ಡೇಟಿಂಗೂ ಮಾಡ್ತಾರೆ, ಡಿನ್ನರೂ ಮಾಡ್ತಾರೆ, ಆದ್ರೆ ವಿಶ್‌ ಯಾಕೆ ಮಾಡಿಲ್ಲ ಎಂದು ಫ್ಯಾನ್ಸ್‌ ತಲೆಕೆಡಿಸಿಕೊಂಡಿದ್ದಾರೆ.

Video Top Stories