Asianet Suvarna News Asianet Suvarna News

ರಾಮ್ ಚರಣ್-ಉಪಾಸನ ಮಗಳಿಗಾಗಿ ಬಂದ ದುಬಾರಿ ದಾದಿ ಸಾವಿತ್ರಿ: ತಿಂಗಳ ಸಂಬಳ ಕೇಳಿದ್ರೆ ಶಾಕ್ ಆಗ್ತೀರಿ!

ಬಾಲಿವುಡ್ ಸೆಲೆಬ್ರೆಟಿ ಕಿಡ್ಸ್ ಕೇರ್ ಟೇಕರ್ ಎಂದೇ ಖ್ಯಾತಿ ಗಳಿಸಿರೋ ಫೇಮಸ್ಸಾಗಿರೊ ನರ್ಸ್ ಸಾವಿತ್ರಿ ಇದೀಗ ಮೆಗಾಸ್ಟಾರ್ ಮೊಮ್ಮಗಳ ಆರೈಕೆಗಾಗಿ ಬಂದಿದ್ಧಾರೆ. ಕರೀನಾ ಕಪೂರ್ ಸೈಫ್ ಅಲಿಖಾನ್ ಪುತ್ರರ ಆರೈಕೆ ಮಾಡಿದ್ದ ದಾದಿಯೇ ಈಗ ರಾಮ್ಚರಣ್ ಉಪಾಸನಾ ಮಗಳನ್ನು ನೋಡಿಕೊಳ್ಳಲು ಬಂದಿದ್ಧಾರೆ. 

ಬಾಲಿವುಡ್ ಸೆಲೆಬ್ರೆಟಿ ಕಿಡ್ಸ್ ಕೇರ್ ಟೇಕರ್ ಎಂದೇ ಖ್ಯಾತಿ ಗಳಿಸಿರೋ ಫೇಮಸ್ಸಾಗಿರೊ ನರ್ಸ್ ಸಾವಿತ್ರಿ ಇದೀಗ ಮೆಗಾಸ್ಟಾರ್ ಮೊಮ್ಮಗಳ ಆರೈಕೆಗಾಗಿ ಬಂದಿದ್ಧಾರೆ. ಕರೀನಾ ಕಪೂರ್ ಸೈಫ್ ಅಲಿಖಾನ್ ಪುತ್ರರ ಆರೈಕೆ ಮಾಡಿದ್ದ ದಾದಿಯೇ ಈಗ ರಾಮ್ಚರಣ್ ಉಪಾಸನಾ ಮಗಳನ್ನು ನೋಡಿಕೊಳ್ಳಲು ಬಂದಿದ್ಧಾರೆ. ರಾಮ್ ಚರಣ್ ಪುತ್ರಿ ಕ್ಲಿಂಕಾರಾಳ ಆರೈಕೆ ಮಾಡುತ್ತಿರೋ ಸಾವಿತ್ರಿಯವರ ತಿಂಗಳ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಮದುವೆಯಾಗಿ 11 ವರ್ಷಗಳ ಬಳಿಕ ರಾಮ್ ಚರಣ್ ತಂದೆಯಾಗಿದ್ದಾರೆ. ಮೆಗಾ ಮನೆಮಗ ರಾಮ್ ಚರಣ್ ಅವರು ಪತ್ನಿ ಉಪಾಸನಾ ಜೊತೆ ಮೊದಲ ಮಗುವಿಗೆ ಪೋಷಕರಾದರು. 

ಮೊದಲು ಮಗು ಹೆಣ್ಣು. ಕ್ಲೀಂಕಾರ ಕೊನಿಡೆಲಾ ಎಂದು ಮಗುವಿಗೆ ನಾಮಕರಣ ಕೂಡಾ ಮಾಡಿದ್ದಾರೆ. ಈಗ ಮೆಗಾ ದಂಪತಿ ಮಗಳ ಲಾಲನೆ ಪಾಲನೆಗೆ ಬಾಲಿವುಡ್ ಸೆಲೆಬ್ರಿಟಿಗಳ ಸ್ಟೈಲ್ ಫಾಲೋ ಮಾಡಿದ್ದಾರೆ.. ಉಪಾಸನಾ ಹಾಗೂ ರಾಮ್ ಚರಣ್ ತಮ್ಮ ಮಗಳಿಗಾಗಿ ವಿಶೇಷವಾಗಿ ರೂಮ್ ಡಿಸೈನ್ ಮಾಡಿದ್ದು ಸುದ್ದಿಯಾಗಿತ್ತು. ಈಗ ಮಗಳ ಆರೈಕೆಗೆ ಜನಪ್ರಿಯ ದಾದಿ ಅಥವಾ ನಾನಿಯನ್ನು ನೇಮಿಸಿಕೊಂಡಿದ್ದಾರೆ. ಅವರಿಗೆ ತಿಂಗಳಿಗೆ ಮೂರು ಲಕ್ಷ ಸಂಬಳ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಾಮ್ಚರಣ್ ದಂಪತಿ ಮಗಳ ಸಮೇತ ದೇವಸ್ಥಾನಕ್ಕೆ ಹೋಗಿದ್ದರು. ಅವರ ಜತೆ ದಾದಿ ಸಾವಿತ್ರಿ ಸಹ ಇದ್ದರು. ಸಾವಿತ್ರಿ ಎಂಬವರು ಬಾಲಿವುಡ್ನಲ್ಲಿ ತುಂಬಾ ಫೇಮಸ್. 

ಅವರೇ ಬಾಲಿವುಡ್ ಸೆಲೆಬ್ರೆಟಿ ಮಕ್ಕಳನ್ನು ಬಹಳ ಮುತುವರ್ಜಿಯಿಂದ ನೋಡಿಕೊಳ್ಳೋ ಕೇರ್ ಟೇಕರ್ ಸಾವಿತ್ರಿ. ಇದೀಗ ಮೆಗಾ ಕುಟುಂಬದ ಮೊಮ್ಮಗಳ  ಆರೈಕೆಯ ಜವಾಬ್ದಾರಿ ಹೊತ್ತಿದ್ಧಾರೆ. ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಮಗ ತೈಮೂರ್ ಅಲಿಖಾನ್ ಕೇರ್ ಟೇಕರ್ ಆಗಿದ್ದರು. ಕರೀನಾ ಕಪೂರ್ ಮಗನನ್ನು ನೋಡಿಕೊಂಡ ನಂತರ ಶಾಹಿದ್ ಕಪೂರ್ ಮಗಳ ಆರೈಕೆ ಮಾಡಿದ್ದರು. ಇವರು ಒಂದೂವರೆಯಿಂದ ತೊಡಗಿ ಸುಮಾರು 3 ಲಕ್ಷದ ತನಕ ಸಂಬಳ ಪಡೆಯುತ್ತಾರೆ. ಇವರನ್ನು ನೇಮಿಸುವುದು ಮೆಗಾ ಫ್ಯಾಮಿಲಿಗೆ ದೊಡ್ಡ ವಿಷಯವೇನಲ್ಲ ಬಿಡಿ.