News Hour: ಡಿಕೆಶಿ-ಎಚ್​ಡಿಕೆ ‘ತಿಮಿಂಗಲ’ ವಾರ್

ಪೆನ್​ಡ್ರೈವ್​ ಪ್ರಕರಣದಲ್ಲಿ ನಿಲ್ಲದ ನಾಯಕರ ವಾಕ್ಸಮರ ನಿಲ್ಲುವಂತೆ ಕಾಣುತ್ತಿಲ್ಲ. ದೊಡ್ಡ ತಿಮಿಂಗಲ ಹಿಡಿದ್ರೆ ಸತ್ಯ ಗೊತ್ತಾಗುತ್ತೆ ಎಂದ ಎಚ್​ಡಿಕೆ ಹೇಳಿದ್ದಕ್ಕದೆ, ತಿಮಿಂಗಲ ಹಿಡಿದು ನುಂಗಿಕೊಳ್ಳಲಿ ಎಂದು ಡಿಕೆಶಿ ಕೌಂಟರ್ ಕೊಟ್ಟಿದ್ದಾರೆ.

First Published May 14, 2024, 10:35 PM IST | Last Updated May 14, 2024, 10:35 PM IST

ಬೆಂಗಳೂರು (ಮೇ.14): ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ಪೆನ್‌ಡ್ರೈವ್‌ ಅನ್ನು ವೈರಲ್‌ ಮಾಡಿದವರ ಬಂಧನ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾದಾಗ ಸಂಭ್ರಮಿಸಿ ಎಂದು ಜೆಡಿಎಸ್​ ಕಾರ್ಯಕರ್ತರಿಗೂ ಎಚ್‌ಡಿಕೆ ಬುದ್ದಿ ಹೇಳಿದ್ದಾರೆ.

ರಾಜ್ಯದ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣ ಕೂಡ ಆರೋಪ ಎದುರಿಸಬೇಕಾಯಿತು. ನಿನ್ನೆ ಜಾಮೀನು ಸಿಕ್ಕಿದೆ.. ನಾನು ಸಂತೋಷ ಪಡಲ್ಲ. ಪಟಾಕಿ ಸಿಡಿಸಿ ಸಂತೋಷ ಪಡುವ ಸಮಯ ಅಲ್ಲ. ಕೇಸ್​ನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾದಾಗ ಸಂಭ್ರಮಪಡಿ. ಈ ಘಟನೆ ರಾಜ್ಯವೇ ತಲೆ ತಗ್ಗಿಸುವ ಘಟನೆ ಎಂದು ಹೇಳಿದ್ದಾರೆ.

ಬಿಜೆಪಿ ಅಂದುಕೊಂಡಷ್ಟು ರಾಮಮಂದಿರ ಪರಿಣಾಮ ಬೀರಿಲ್ಲವೇ?: ಮೋದಿ ಏಕ್‌ದಂ ಅಗ್ರೆಸಿವ್ ಆಗಿದ್ದು ಏಕೆ?

ಎಸ್ ಐಟಿ ಅಧಿಕಾರಿಗಳಿಗೆ ನಾನೂ ಹೇಳ್ತೀನಿ. ನಿಮಗೂ ಅಕ್ಕತಂಗಿ, ತಂದೆತಾಯಿ ಇರ್ತಾರೆ. ಚುನಾವಣೆ ಹಿನ್ನೆಲೆ ಪೆನ್ ಡ್ರೈವ್ ಹಂಚಿದ್ರೋ? ಪೆನ್​ಡ್ರೈವ್ ಹಂಚಿದವರನ್ನ ಇಲ್ಲಿಯವರೆಗೆ ಮುಟ್ಟಿಲ್ಲ. ಘಟನೆಗೆ ಕಾರಣವಾದ ವ್ಯಕ್ತಿಯನ್ನೂ ಹಿಡಿಯಲಿಲ್ಲ. ಸರ್ಕಾರದ ಜವಾಬ್ದಾರಿ ಅದು ಎಂದು ಹೇಳಿದ್ದಾರೆ.