Asianet Suvarna News Asianet Suvarna News

Adipurush: ಯೂಟ್ಯೂಬ್‌ನಲ್ಲಿ ದಾಖಲೆ ಬರೆದ ಪ್ರಭಾಸ್ 'ಜೈ ಶ್ರೀ ರಾಮ್' ಹಾಡು

ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ 'ಜೈ ಶ್ರೀ ರಾಮ್' ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಯೂಟ್ಯೂಬ್‌ನಲ್ಲಿ ದಾಖಲೆ ಬರೆದಿದೆ.

First Published May 23, 2023, 1:11 PM IST | Last Updated May 23, 2023, 1:11 PM IST

'ಆದಿಪುರುಷ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಆದಿಪುರುಷ್ ತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಟೀಸರ್, ಟ್ರೈಲರ್ ಬಳಿಕ ಜೈ ಶ್ರೀರಾಮ್ ಅನ್ನೋ ಮೊದಲ ಹಾಡನ್ನು ರಿಲೀಸ್ ಮಾಡಲಾಗಿದೆ. ಬಿಡುಗಡೆಯಾದ 24 ಗಂಟೆಗಳೊಳಗೆ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ದಾಖಲೆ ಮಟ್ಟದಲ್ಲಿ ವೀವ್ಸ್ ಗಳಿಸಿದೆ.'ಜೈ ಶ್ರೀರಾಮ್' ಸಾಂಗ್ ಬಿಡುಗಡೆಯಾದ 24 ಗಂಟೆಗಳಲ್ಲಿ ಅತೀ ಹೆಚ್ಚು ವೀವ್ಸ್ ಪಡೆದ ಮೊದಲ ಹಾಡಾಗಿದೆ. ಈ ಹಾಡಿ ಬಿಡುಗಡೆ ಕೇವಲ 20 ಗಂಟೆಗಳಲ್ಲಿ 30.50 ಮಿಲಿಯನ್ ವೀವ್ಸ್ ಗಳಿಸಿತ್ತು. ಅದೇ 24 ಗಂಟೆಗಳಲ್ಲಿ 31 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ.