Asianet Suvarna News Asianet Suvarna News

ಆದಿಪುರುಷ್ ರಿಲೀಸ್‌ಗೆ ಕೌಂಟ್ ಡೌನ್: ಅಡ್ವಾನ್ಸ್ ಟಿಕೆಟ್ ಮಾರಾಟ ಜೋರು

ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಆದಿಪುರುಷ್ ಸಿನಿಮಾ ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗಿದ್ದು, ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. 

First Published Jun 14, 2023, 1:44 PM IST | Last Updated Jun 14, 2023, 1:44 PM IST

ಮೊದಲ ದಿನವೇ ಆದಿಪುರುಷ್ ಸಿನಿಮಾದ 39,000 ಟಿಕೆಟ್'ಗಳು ಅಡ್ವಾನ್ಸ್ ಆಗಿ ಬುಕ್ ಆಗಿವೆ. ಅದೂ ಕೇವಲ ಹಿಂದಿ ಆವೃತ್ತಿಯ 39,000 ಟಿಕೆಟ್'ಗಳು ಅಡ್ವಾನ್ಸ್ ಆಗಿ ಮಾರಾಟವಾಗಿವೆ. ಆ ಮೂಲಕ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡುವ ಸುಳಿವನ್ನು ಆದಿಪುರುಷ್ ನೀಡಿದೆ. 18,500 ಟಿಕೆಟ್'ಗಳು ಪಿವಿಆರ್'ನಲ್ಲಿ, 12,500 ಟಿಕೆಟ್'ಗಳು ಐನಾಕ್ಸ್'ನಲ್ಲಿ ಹಾಗೂ ಸುಮಾರು 8000 ಟಿಕೆಟ್'ಗಳು ಸಿನೆಪೊಲೀಸ್'ನಲ್ಲಿ ಬುಕ್ ಆಗಿವೆ. ಪಠಾಣ್ ಹಾಗೂ ಬ್ರಹ್ಮಾಸ್ತ್ರ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಅನ್ನು ಇನ್ನೊಂದು ಅಥವಾ ಎರಡು ದಿನದಲ್ಲಿ ಆದಿಪುರುಷ್ ಸಿನಿಮಾ ಮುರಿಯುವ ಸಾಧ್ಯತೆ ಇದೆ. ಹಿಂದಿ ಆವೃತ್ತಿಯ ಆದಿಪುರುಷ್'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ, ದಕ್ಷಿಣ ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಡ್ವಾನ್ಸ್ ಬುಕಿಂಗ್ ಆಗಿಲ್ಲ. ಹಾಗಿದ್ದರೂ ಸಹ ಆದಿಪುರುಷ್ ಸಿನಿಮಾ ಈ ವರ್ಷದ ಅತಿ ದೊಡ್ಡ ಓಪನಿಂಗ್ ಪಡೆಯಲಿದೆ ಎಂದು ಟ್ರೇಡ್ ವಿಶ್ಲೇಷಕರು ಅಂದಾಜು ಹಾಕಿದ್ದಾರೆ.