Asianet Suvarna News Asianet Suvarna News
breaking news image

ಲಿಪ್ ಸರ್ಜರಿ ಮಾಡಿಸಿಕೊಂಡ ಬಹುಭಾಷಾ ನಟಿ ಕೀರ್ತಿ ಸುರೇಶ್?

ನಟಿ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆಗೆ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಟಿ ಕೀರ್ತಿ ಸುರೇಶ್ ಹಲವು ವಿಚಾರಗಳಿಗೆ ಆಗಾಗ ಸುದ್ದಿ ಆಗುತ್ತಾರೆ. 

ನಟಿ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆಗೆ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಅಭಿನಯಿಸಿದ್ದು, ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಆದರೆ ಸಿನಿಮಾ ಬಿಟ್ಟು ನಟಿ ಕೀರ್ತಿ ಸುರೇಶ್ ಹಲವು ವಿಚಾರಗಳಿಗೆ ಆಗಾಗ ಸುದ್ದಿ ಆಗುತ್ತಾರೆ. ಹಲವು ಬಾರಿ ತಮ್ಮ ಲುಕ್ ಮೂಲಕವೇ ಸುದ್ದಿ ಆಗಿದ್ದಾರೆ. ಈಗ ಮತ್ತೆ ಕೀರ್ತಿ ಸುರೇಶ್ ಲುಕ್ ಬಗ್ಗೆ ಚರ್ಚೆ ಎದ್ದಿದೆ. ಕೀರ್ತಿ ಸುರೇಶ್ ಲುಕ್‌ನಲ್ಲಿ ಆದ ಬದಲಾವಣೆಯನ್ನು ಜನ ಬೆಟ್ಟು ಮಾಡಿ ತೋರಿಸುತ್ತಾ ಇದ್ದಾರೆ. 

Sarkaru Vaari Paata: ಶೂಟಿಂಗ್ ಸೆಟ್‌ನಲ್ಲಿ ಮಹೇಶ್‌ ಬಾಬು ಕೆನ್ನೆಗೆ ಹೊಡೆದ ನಟಿ?

ಹೌದು! ಈಗ ನಟಿ ಕೀರ್ತಿ ಸುರೇಶ್ ಲುಕ್ ಬಗ್ಗೆಯೇ ಮಾತು. ಟಾಲಿವುಡ್‌ನಲ್ಲಿ ಕೀರ್ತಿ ಸುರೇಶ್ ತಮ್ಮ ತುಟಿಯನ್ನು ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಾ ಇದೆ. ಹಾಗಾಗಿ ಆಕೆಯ ಮುಖ ಮೊದಲಿಗಿಂತಲೂ ಭಿನ್ನವಾಗಿ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ. 'ಸರ್ಕಾರು ವಾರಿ ಪಾಟ' ಚಿತ್ರದ ಹಲವು ದೃಶ್ಯಗಳಲ್ಲಿ ಕೀರ್ತಿ ತುಟಿಯ ಆಕಾರ ಬದಲಾಗಿರುವು ಗೊತ್ತಾಗುತ್ತೆ. ಇನ್ನು ಇತ್ತೀಚೆಗಿನ ಫೋಟೋ ಶೂಟ್ ಒಂದರಲ್ಲಿ ಆಕೆಯ ತುಟಿಯ ಆಕಾರ ಬದಲಾಗಿರುವಂತೆ ಎದ್ದು ಕಾಣುತ್ತೆ. ಇದನ್ನು ಹಳೇ ಫೋಟೊಗೆ ಹೋಲಿಸಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories