Asianet Suvarna News Asianet Suvarna News

‘ನಿನ್ನ ಕಥೆ ನನ್ನ ಜೊತೆ’: 'ಮೊಲೋಡಿ ಡ್ರಾಮಾ' ಮೆಚ್ಚಿದ ಕನ್ನಡದ ತಾರೆಯರು

‘ಮೆಲೋಡಿ ಡ್ರಾಮಾ' ಸಿನಿಮಾವು, ಪ್ರೀತಿ ಮತ್ತು ನಂಬಿಕೆಯ ನಡುವಿನ ಪಯಣದಲ್ಲಿ ಸುಂದರವಾಗಿ ಮೂಡಿಬಂದಿದ್ದು, ಸಿನಿಮಾ ನೋಡಿದ ಕನ್ನಡದ ಕಲಾವಿದರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 
 

First Published Jun 10, 2023, 12:48 PM IST | Last Updated Jun 10, 2023, 12:48 PM IST

ಕನ್ನಡ ಬೆಳ್ಳಿಪರದೆ ಮೇಲೆ ಸುಂದರ ಪ್ರೇಮ ಕತೆಯ ‘ಮೆಲೋಡಿ ಡ್ರಾಮಾ’ ಎಂಬ ಸಿನಿಮಾ ತೆರೆ ಕಂಡಿದೆ. ಇದೇ ಮೊದಲ ಬಾರಿಗೆ ನಿರ್ದೇಶಕನ ಹೊಣೆ ಹೊತ್ತಿರುವ ಮಂಜು ಕಾರ್ತಿಕ್, ಈ ಸಿನಿಮಾದಲ್ಲಿ ಮನೋಜ್ಞವಾಗಿ ಲವ್ ಸ್ಟೋರಿಯನ್ನು ಮೂಡಿಸಿದ್ದಾರೆ. 'ದ್ವಿಪಾತ್ರ' ಸಿನಿಮಾ ಖ್ಯಾತಿಯ ನಟ ಸತ್ಯ ಮತ್ತು ಸೀತಾಬಲ್ಲಭ ಮತ್ತು ಸರಸು ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ನಟಿ ಸುಪ್ರಿತಾ ಸತ್ಯನಾರಾಯಣ ಅವರು ನಾಯಕ ಮತ್ತು ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ, ಬಾಲ ರಾಜವಾಡಿ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತ ನೀಡಿರೋ ಈ ಸಿನಿಮಾದಲ್ಲಿ ಏಳು ಹಾಡುಗಳಿದ್ದು, ಮೆಲೋಡಿ ಡ್ರಾಮಾ ಸಿನಿಮಾ ನೋಡಿದ ಸ್ಯಾಂಡಲ್ವುಡ್ ಕಲಾವಿದರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.