Asianet Suvarna News Asianet Suvarna News

RRR ವಿಶ್ಯುವಲ್ಸ್ ಟ್ರೀಟ್ ಹಿಂದೆ ಹೇಗಿತ್ತು ಗೊತ್ತಾ ವಿಎಫ್ಎಕ್ಸ್ ಕೆಲಸ?

ರಾಜಮೌಳಿ ಇಡೀ ದೇಶದ ಸಿನಿ ಪ್ರೇಕ್ಷಕರಿಗೆ ಕೊಟ್ಟ ದೊಡ್ಡ ಖುಷಿ ಮತ್ತು ಥ್ರಿಲ್.  RRR ಸಿನಿಮಾ ವಿಶ್ಯುವಲ್ಸ್ ಟ್ರೀಟ್ ಕಂಡು ಎಂಥಾ ಸಿನಿಮಾ ಗುರು ಅಂದವರದೆಷ್ಟೋ. ಈ ಸಿನಿಮಾದಲ್ಲಿ ಮೈ ಜುಮ್ ಎನ್ನಿಸೋ ಹಲವು ದೃಶ್ಯಗಳು ಇದೆ. 

RRR ರಾಜಮೌಳಿ ಇಡೀ ದೇಶದ ಸಿನಿ ಪ್ರೇಕ್ಷಕರಿಗೆ ಕೊಟ್ಟ ದೊಡ್ಡ ಖುಷಿ ಮತ್ತು ಥ್ರಿಲ್.  RRR ಸಿನಿಮಾ ವಿಶ್ಯುವಲ್ಸ್ ಟ್ರೀಟ್ ಕಂಡು ಎಂಥಾ ಸಿನಿಮಾ ಗುರು ಅಂದವರದೆಷ್ಟೋ. ಈ ಸಿನಿಮಾದಲ್ಲಿ ಮೈ ಜುಮ್ ಎನ್ನಿಸೋ ಹಲವು ದೃಶ್ಯಗಳು ಇದೆ. ರಾಮ್ ಚರಣ್ ರಾಮನ ಅವತಾರದಲ್ಲಿ ಬರೋ ದೃಶ್ಯ. ಜ್ಯೂ.ಎನ್ಟಿಆರ್ ಹುಲಿ ಜೊತೆ ಸೆಣಸೋ ದೃಶ್ಯ, ಕಾಡು ಪ್ರಾಣಿಗಳ ಜೊತೆ ಬ್ರಿಟೀಷ್ ಬಂಗ್ಲೆಗೆ ನುಗ್ಗೋ ಸೀನ್ ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಆದ್ರೆ ಈ ಮಹಾದೃಶ್ಯ ಕಾವ್ಯದ ಹಿಂದೆ ವಿಎಫ್ಎಕ್ಸ್ ಅನ್ನೋ ಸಿನಿಮಾ ಟೆಕ್ನಿಕಲ್ ಕೆಲಸ ಮಾಡಿದೆ. ಆ ವಿಎಫ್ಎಕ್ಸ್ ವರ್ಕ್ ಹೇಗಿತ್ತು ಅಂತ ಮೌಳಿ ಟೀಂ ಒಂದು ವೀಡಿಯೋ ರಿವೀಲ್ ಮಾಡಿದೆ.

ಚಿತ್ರರಂಗದ ಬಹುತೇಕ ತಾರೆಯರು 'ವಿಕ್ರಾಂತ್ ರೋಣ' ವೇದಿಕೆಯಲ್ಲಿ, ಸುದೀಪ್‌ಗೆ ಸಾಥ್

ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್ಪೆನ್ಸೀವ್ ಸಿನಿಮಾ RRR ಅನ್ನೋ ಹೆಗ್ಗಳಿಕೆ ಕೂಡ ಈ ಸಿನಿಮಾಗೆ ಸಿಕ್ಕಿದೆ. ಬರೋಬ್ಬರಿ 550 ಕೋಟಿ ಬಂಡವಾಳದಲ್ಲಿ ನಿರ್ಮಾಣ ಮಾಡಿರೋ ಸಿನಿಮಾದ ವಿಶ್ಯುವಲ್ ಟ್ರೀಟ್ ಕಣ್ಣಗೆ ಅಕ್ಷರಶಃ ಹಬ್ಬದಂತೆ ಕಾಣುತ್ತೆ. ಹೀಗಾಗಿ ಈ ಸಿನಿಮಾ 1250 ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಬರೀ ವಿಎಫ್ಎಕ್ಸ್ ಕೆಲಸಕ್ಕೆ ಮಾತ್ರ ಬರೋಬ್ಬರಿ 80 ಕೋಟಿ ಕರ್ಚು ಮಾಡಿದ್ದಾರಂತೆ ಮೌಳಿ. ಭಾರತೀಯ ಚಿತ್ರರಂಗದ ಟಾಪ್ ಗ್ರಾಫಿಕ್ಸ್ ಡಿಸೈನರ್ ವಿ ಶ್ರೀನಿವಾಸ್ ಹಾಗು ಅವರ ತಂಡ RRR ಸಿನಿಮಾದ ವಿಎಫ್ಎಕ್ಸ್ ಕೆಲಸ ಮಾಡಿದ್ದಾರೆ. 
 

Video Top Stories