Asianet Suvarna News Asianet Suvarna News

ಸ್ಟಾರ್ಸ್ ನೋಡಲು ಮಾಲ್‌ಗೆ ನುಗ್ಗಿದ ಜನಸಾಗರ; ಜಾಗ ಖಾಲಿ ಮಾಡಿದ ಚಿತ್ರತಂಡ


ಸಿನಿಮಾ ಪ್ರಚಾರಕ್ಕೆಂದು ಮಾಲ್ ನಲ್ಲಿ ಕಾರ್ಯಕ್ರಮ ಫಿಕ್ಸ್ ಆಗಿತ್ತು. ಸಿನಿಮಾ ಪ್ರಚಾರ ಎಂದು ಗೊತ್ತಾಗುತ್ತಿದ್ದಂತೆ ಜನ ನುಗ್ಗಿಬಂದ್ರು. ಒಮ್ಮೆಗೆ ನುಗ್ಗಿದ ಜನ ನೋಡಿ ಸಿನಿಮಾ ತಂಡ ಮತ್ತು ಮಾಲ್ ನವರಿಗೆ ಶಾಕ್ ಆಯಿತು. 

Aug 14, 2022, 3:33 PM IST

ಸಿನಿಮಾ ಪ್ರಚಾರಕ್ಕೆಂದು ಮಾಲ್ ನಲ್ಲಿ ಕಾರ್ಯಕ್ರಮ ಫಿಕ್ಸ್ ಆಗಿತ್ತು. ಸಿನಿಮಾ ಪ್ರಚಾರ ಎಂದು ಗೊತ್ತಾಗುತ್ತಿದ್ದಂತೆ ಜನ ನುಗ್ಗಿಬಂದ್ರು. ಒಮ್ಮೆಗೆ ನುಗ್ಗಿದ ಜನ ನೋಡಿ ಸಿನಿಮಾ ತಂಡ ಮತ್ತು ಮಾಲ್ ನವರಿಗೆ ಶಾಕ್ ಆಯಿತು. ಜನ ಸಾಗರ ನೋಡಿ ಶಾಕ್ ಆದ ಸಿನಿಮಾತಂಡ ಕಾರ್ಯಕ್ರಮವನ್ನೆ ರದ್ದು ಮಾಡಿಕೊಂಡಿತು. ಸಿಕ್ಕಾಪಟ್ಟೆ ಸೇರಿದ್ದ ಜನರ ನಡುವೆ ನೂಕು ನುಗ್ಗುಸಲು ಉಂಟಾಗಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಇದನ್ನು ನೋಡಿ ಚಿತ್ರತಂಡ ಜಾಗ ಖಾಲಿ ಮಾಡಿತು. ಅಂದಹಾಗೆ ಮಲಯಾಳಂ ನಟ ಟೊವಿನೋ ಥಾಮಸ್ ಮತ್ತು ಕಲ್ಯಾಣಿ ಪ್ರಿಯದರ್ಶಿನಿ ನಟನೆಯ ಹೊಸ ಸಿನಿಮಾದ ಪ್ರಚಾರ ಕಾರ್ಯಕ್ರಮ ಫಿಕ್ಸ್ ಆಗಿತ್ತು.  ಈ ಸ್ಟಾರ್ಸ್ ಬರ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಜನಸಾಗರವೇ ಹರಿದುಬಂದಿತ್ತು. ಬಳಿಕ ಮಾಲ್ ನವರೇ ಬೆಚ್ಚಿಬಿದ್ದು ಕಾರ್ಯಕ್ರಮವನ್ನೆ ಕ್ಯಾನ್ಸಲ್ ಮಾಡಲಾಗಿದೆ.