Asianet Suvarna News Asianet Suvarna News

'ಕೆಡಿ' ಅಖಾಡದಲ್ಲಿ ಸಂಜಯ್ ದತ್: ಧ್ರುವ ಸರ್ಜಾ ಎದುರು ನಿಂತ ಅಧೀರ

ಕ್ರೇಜಿ ಸ್ಟಾರ್ ರವಿಚಂದ್ರನ್ 'ಕೆಡಿ' ಅಡ್ಡಕ್ಕೆ ಎಂಟ್ರಿಕೊಟ್ಟಿದ್ದು, ಬಹಳ ವಿಭಿನ್ನ ಗೆಟಪ್'ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅವರು ವಿಲನ್ನಾ ಅನ್ನೋದು ಡೌಟು. ಹಾಗಾದ್ರೆ ಸಂಜಯ್ ದತ್ ಏನು ಎಂಬ ಪ್ರಶ್ನೆ ಮೂಡಿದೆ. 

'ಕೆಡಿ' ಅಖಾಡದಲ್ಲಿ ಸಂಜಯ್ ದತ್ 45 ದಿನಗಳ ಕಾಲ ಬಡಿದಾಡಲಿದ್ದಾರೆ ಎನ್ನುವುದು ಇದೀಗ ಚಿತ್ರದ ಮೇಲೆ ಇನ್ನಷ್ಟು ಕುತೂಹಲ ಮೂಡಿಸಿದೆ. ಹೌದು ಕೆಡಿ ವಿಲನ್ ಸಂಜಯ್ ದತ್ 45 ದಿನ ಕಾಲ ಸಿನಿಮಾ ಶೂಟಿಂಗ್'ನಲ್ಲಿ ಇರುತ್ತಾರಂತೆ. ಹಾಗಾದ್ರೆ ಧ್ರುವ ಜೊತೆ ಭರ್ಜರಿ ಆಕ್ಷನ್ ಸನ್ನಿವೇಶಗಳು ಇಡೀ ಸಿನಿಮಾದಲ್ಲಿ ಬಾರೀ ಇರುತ್ತವೆ ಎನ್ನುವಂತಾಯಿತು. ಈಗಾಗಲೇ ಸಿನಿಮಾ ಟೀಸರ್ ಲಾಂಚ್'ಗೆ ಬಂದಿದ್ದ ಸಂಜಯ್ ದತ್ ಸಿನಿಮಾ ಮೇಲೆ ಭಾರೀ ನಿರೀಕ್ಷೆಯನ್ನೇ ಹೊತ್ತು ಬಂದಿದ್ದಾರೆ. ಎನ್ನುವುದು ಗೊತ್ತಾಗುತ್ತಿತ್ತು. ಇನ್ನು ಕೆವಿಎನ್ ಪ್ರೊಡಕ್ಷನ್ ಕೆಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಿರ್ದೇಶಕ ಪ್ರೇಮ್ ಮತ್ತೊಮ್ಮೆ ಜೋಗಿ ದಾಖಲೆಯನ್ನು ಮುರಿಯುತ್ತಾರಾ ಎಂದು ಭರವಸೆಯಿಂದ ಕಾದು ನೋಡಬೇಕಿದೆ.

ಕಾಲಿವುಡ್‌ಗೆ ರಕ್ಷಿತ್ ಶೆಟ್ಟಿ ಎಂಟ್ರಿ: ದಳಪತಿ ವಿಜಯ್ ಜೊತೆ ಸಿಂಪಲ್ ಸ್ಟಾರ್