ಯಶ್ ಶೋ ಮ್ಯಾನ್ ಎಂದಿದ್ದ ರಶ್ಮಿಕಾಗೆ ರಾಕಿಭಾಯ್ ಜೊತೆ ನಟಿಸುವ ಆಸೆ: ಫ್ಯಾನ್ಸ್ ಏನಂದ್ರು ಗೊತ್ತಾ?
ಯಶ್ ಅವರ ಜತೆಗೆ ನನಗೆ ಸಿನಿಮಾ ಮಾಡಬೇಕೆಂಬ ಆಸೆ ಇದೆ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದು, ಈ ವಿಚಾರದಲ್ಲಿ ಯಶ್ ಫ್ಯಾನ್ಸ್ ಕಾಲೆಳೆಯುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ಯಾವುದೋ ಒಂದು ಸಂದರ್ಶನದಲ್ಲಿ ಯಶ್ ಬಗ್ಗೆ ಏನು ಹೇಳುತ್ತೀರಿ ಎಂದಾಗ, ಅವರೊಬ್ಬ ಶೋ ಮ್ಯಾನ್ ಎಂದು ಯಶ್'ನ್ನು ಸಂಬೋಧಿಸಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ರಶ್ಮಿಕಾ ಸಾರಿನೂ ಕೂಡ ಕೇಳಿದ್ದರು. ಇದೀಗ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಂತೆ ಯಶ್ ಜೊತೆ ತಾವು ಆಕ್ಟ್ ಮಾಡಬೇಕು ಅನ್ನುತ್ತಿದ್ದಾರೆ ರಶ್ಮಿಕಾ. ಇತ್ತೀಚೆಗೆ ರಶ್ಮಿಕಾ ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಕನ್ನಡಿಗರು ಅವರನ್ನು ಫುಲ್ ಕಾಲೆಳೆಯುತ್ತಿದ್ದಾರೆ. ನೀವು ಎದ್ದರೆ ಒಂದು ತರ, ಬಿದ್ದರೆ ಒಂದು ತರ ಎಂದು ಟ್ರೋಲ್ ಮಾಡುತ್ತಿದ್ದಾರೆ.