Asianet Suvarna News Asianet Suvarna News

ದೇವಸ್ಥಾನಕ್ಕೆ ‘ಆನೆ’ ಉಡುಗೊರೆ ಕೊಟ್ಟ ನಟಿ ಪ್ರಿಯಾಮಣಿ!

ಆನೆಯನ್ನೆ ದೇವಲಾಯಕ್ಕೆ ಕೊಟ್ಟಿದ್ದಾರೆ ಈ ನಟಿ.. ಈ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕ ಮೂಲದ ಬಹುಭಾಷೆಯ ನಟಿ ಪ್ರಿಯಾಮಣಿ, ಕೇರಳದ ದೇವಾಲಯ ಒಂದಕ್ಕೆ ಭಾರಿ ಗಾತ್ರದ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಆನೆಯನ್ನೆ ದೇವಲಾಯಕ್ಕೆ ಕೊಟ್ಟಿದ್ದಾರೆ ಈ ನಟಿ.. ಈ ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕ ಮೂಲದ ಬಹುಭಾಷೆಯ ನಟಿ ಪ್ರಿಯಾಮಣಿ, ಕೇರಳದ ದೇವಾಲಯ ಒಂದಕ್ಕೆ ಭಾರಿ ಗಾತ್ರದ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ‘ಆನೆ’ ಉಡುಗೊರೆಯಾಗಿ ನೀಡಲು ದೊಡ್ಡ ಕಾರಣ ಇದೆ. ಕನ್ನಡ ತೆಲುಗು ತಮಿಳೂ ಮಲಯಾಳಂ ಅಲ್ಲದೆ ಬಾಲಿವುಡ್ನಲ್ಲೂ ಹಾಗೂ ವೆಬ್ ಸೀರೀಸ್ನಿಂದಲೂ ಸುದ್ದಿಯಾಗಿರುವ ನಟಿ ಪ್ರಿಯಮಣಿ. ನಟಿ ಪ್ರಿಯಾಮಣಿ ಕೇರಳದ ದೇವಸ್ಥಾನವೊಂದಕ್ಕೆ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಾಗೆಂದು ಇದು ನಿಜವಾದ ಆನೆಯಲ್ಲ, ಆದರೆ ನಿಜವಾದ ಆನೆಯ ಗಾತ್ರದಲ್ಲೇ ಇರುವ ಯಾಂತ್ರಿಕ ಆನೆ. ಪ್ರಿಯಾಮಣಿ ದೇವಸ್ಥಾನಕ್ಕೆ ಆನೆ ನೀಡಿರುವುದು ಯಾವುದೇ ಹರಕೆ ತೀರಿಸಲು ಅಥವಾ ಧಾರ್ಮಿಕ ಕಾರಣಕ್ಕೆ ಅಲ್ಲ, ಬದಲಿಗೆ ಒಂದು ಘನವಾದ ಕಾರಣಕ್ಕೆ ಈ ಯಂತ್ರದ ಆನೆಯನ್ನು ನಟಿ ಪ್ರಿಯಾಮಣಿ ದೇವಾಲಯಕ್ಕೆ ದಾನ ನೀಡಿದ್ದಾರೆ. 

ಪ್ರಿಯಾಮಣಿ ನೀಡಿರುವ ಯಾಂತ್ರಿಕ ಆನೆಯ ಹೆಸರು ಮಹದೇವನ್. ಕೇರಳದ ಕೊಚ್ಚಿಯಲ್ಲಿನ ತ್ರಿಕಾಯಿಲ್ ಮಹದೇವನ್ ದೇವಾಲಯಕ್ಕೆ ಈ ಆನೆಯನ್ನು ಪ್ರಿಯಾಮಣಿ ನೀಡಿದ್ದಾರೆ. ಕೊಚ್ಚಿಯ ತ್ರಿಕಾಯಿಲ್ ಮಹದೇವನ್ ದೇವಾಲಯವು, ಇನ್ನು ಮುಂದೆ ನಾವು ಜೀವಂತ ಆನೆಯನ್ನು ದೇವಾಲಯದ ಯಾವುದೇ ಧಾರ್ಮಿಕ ಅಥವಾ ಇನ್ಯಾವುದೇ ಕಾರ್ಯಗಳಿಗೆ ಬಳಸುವುದಿಲ್ಲ. ಜೀವಂತ ಆನೆಯನ್ನು ಹಾಗೆ ಧಾರ್ಮಿಕ ಕಾರಣಕ್ಕೆ, ಪ್ರದರ್ಶನದ ಕಾರಣಕ್ಕೆ ಬಳಸುವುದು ಕ್ರೂರತೆ ಎಂದು ನಿರ್ಧರಿಸಿದೆ. ಪೇಟಾ ಸಹ ದೇವಾಲಯದ ಈ ಕಾರ್ಯವನ್ನು ಮೆಚ್ಚಿಕೊಂಡಿದೆ. ದೇವಾಲಯದ ಈ ನಿರ್ಣಯದಿಂದ ಖುಷಿಯಾಗಿರುವ ಪ್ರಿಯಾಮಣಿ, ದೇವಾಲಯಕ್ಕೆ ಕೃತಕ ಆನೆಯನ್ನು ಉಡುಗೊರೆಯನ್ನಾಗಿ ನೀಡಿ ತಮ್ಮ ಅಭಿನಂದನೆಯನ್ನು ತಿಳಿಸಿದ್ದಾರೆ. ಪ್ರಿಯಾಮಣಿ ನೀಡಿರುವ ಕೃತಕ ಆನೆ, ನಿಜವಾದ ಆನೆಯ ಗಾತ್ರವನ್ನೇ ಹೊಂದಿದೆ. ಪ್ರಿಯಾಮಣಿ ನೀಡಿರುವ ಈ ಬೃಹತ್ ಆದ ಕೃತಕ ಆನೆ ದೇವಾಲಯದ ಮುಂದೆ ಸ್ಥಾನ ಪಡೆದುಕೊಂಡಿದೆ.

Video Top Stories