Keerthy Suresh: ಸತತ ಸೋಲಿನಿಂದ ಫ್ಲಾಪ್ ನಟಿಯರ ಸಾಲಿಗೆ ಸೇರಿದ 'ಮಹಾನಟಿ'

'ಮಹಾನಟಿ' ಚಿತ್ರದಲ್ಲಿ ತಮ್ಮ ಅದ್ಭುತ ನಟನೆ ತೋರಿಸುವ ಮೂಲಕ ಕೀರ್ತಿ ಸುರೇಶ್ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಪಟ್ಟಿಯಲ್ಲಿರುವ ಈ ಸುಂದರಿ ಇದೀಗ ಫ್ಲಾಪ್ ನಟಿಯರ ಪಟ್ಟಿ ಸೇರಿಕೊಂಡಿದ್ದಾರೆ.

First Published Feb 2, 2022, 3:56 PM IST | Last Updated Feb 2, 2022, 3:55 PM IST

'ಮಹಾನಟಿ' (Mahanati) ಚಿತ್ರದಲ್ಲಿ ತಮ್ಮ ಅದ್ಭುತ ನಟನೆ ತೋರಿಸುವ ಮೂಲಕ ಕೀರ್ತಿ ಸುರೇಶ್ (Keerthy Suresh)​ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ಸಣ್ಣ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಪಟ್ಟಿಯಲ್ಲಿರುವ ಈ ಸುಂದರಿ ಇದೀಗ ಫ್ಲಾಪ್ ನಟಿಯರ ಪಟ್ಟಿ ಸೇರಿಕೊಂಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ (Social Media) ಕೀರ್ತಿ ವೃತ್ತಿ ಜೀವನದ ಬಗ್ಗೆ ಚರ್ಚೆ ಹೆಚ್ಚಾಗಿದೆ. 'ಮಹಾನಟಿ' ಬಳಿಕ ಅವರ ನಟನೆಯ ಹಲವು ಸಿನಿಮಾಗಳು ತೆರೆಗೆ ಬಂದವು. 'ಪೆಂಗ್ವಿನ್​', 'ಮಿಸ್​ ಇಂಡಿಯಾ' ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದರು. 

RRR Release: ಹೊಸ ರಿಲೀಸ್​ ದಿನಾಂಕ ಘೋಷಣೆ ಮಾಡಿದ ರಾಜಮೌಳಿ

ಈ ಯಾವ ಸಿನಿಮಾಗಳಿಗೂ ಯಶಸ್ಸು ಸಿಕ್ಕಿಲ್ಲ. ಕೆಲ ಸಿನಿಮಾಗಳು ಗೆದ್ದಿವೆ. ಆದರೆ, ಅವರಿಗೆ ಹೇಳಿಕೊಳ್ಳುವಂತಹ ಪಾತ್ರ ಇರಲಿಲ್ಲ. ತಲೈವಾ ರಜನಿಕಾಂತ್ (Rajanikanth) ಜೊತೆ ನಟಿಸಬೇಕು ಎಂದು ಕೀರ್ತಿ, 'ಅಣ್ಣಾಥೆ' (Annaatthe) ಸಿನಿಮಾ ಒಪ್ಪಿಕೊಂಡರು. ಈ ವೇಳೆ ಹಿಟ್ ಆಗುವಂತ ಎರಡು ಸಿನಿಮಾಗಳ ಕೈ ಬಿಟ್ಟರು. ಅದರೆ 'ಅಣ್ಣಾಥೆ' ದೊಡ್ಡ ಫ್ಲಾಪ್ ಆಯ್ತು. ಮಾತ್ರವಲ್ಲದೇ ಆದಿ ಹಾಗೂ ಜಗಪತಿ ಬಾಬು (Jagapathi Babu) ಜೊತೆ 'ಗುಡ್‌ ಲಕ್ ಸಖಿ' (Good Luck Sakhi) ಎಂಬ ಚಿತ್ರದಲ್ಲಿ ಕೀರ್ತಿ ನಟಿಸಿದ್ದು, ಈ ಚಿತ್ರವು ಫ್ಲಾಪ್ ಆಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment