Asianet Suvarna News Asianet Suvarna News

Boycott ಲೆಕ್ಕಕ್ಕಿಲ್ಲ; ಟಿಕೆಟ್ ಬುಕಿಂಗ್‌ನಲ್ಲಿ ಕೋಟಿ ಬಾಚಿದ ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ'

ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಸಿನಿಮಾಗಳಲ್ಲೇ ದೊಡ್ಡ ಹೈಪ್ ಪಡೆದುಕೊಂಡಿರೋ  ಸಿನಿಮಾ ಲಾಲ್ ಸಿಂಗ್ ಚಡ್ಡಾ. ಆಗಸ್ಟ್ 11ಕ್ಕೆ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗ್ತಿದೆ. ಈ ಹಿಂದೆ ಆಮೀರ್ ಖಾನ್ ನೀಡಿದ್ದ ಹೇಳಿಕೆ ವಿರೋಧಿಸಿ ನಟ್ಟಿಗರು ಅಮೀರ್ ಖಾನ್ ಸಿನಿಮಾವನ್ನು ಬಾಯ್ಕಟ್ ಮಾಡುವಂತೆ ಒತ್ತಾಯ ಕೇಳಿಬಂದಿತ್ತು. ಆಮೀರ್ ಖಾನ್ ಸಿನಿಮಾದ ವಿರುದ್ಧ ದೊಡ್ಡ ಅಭಿಯಾನವೆ ಪ್ರಾರಂಭವಾಗಿತ್ತು. ಆದ್ರೆ ಈ ಅಭಿಯಾದ ಮಧ್ಯೆಯೂ ಲಾಲ್ ಸಿಂಗ್ ಚಡ್ಡಾ ಟಿಕೆಟ್ ಬುಕ್ಕಿಂಗ್ ನಲ್ಲಿ ಕೋಟಿ ಕೋಟಿ ಬಾಚಿಕೊಳ್ತಿದೆ. 

Aug 9, 2022, 12:12 PM IST

ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಸಿನಿಮಾಗಳಲ್ಲೇ ದೊಡ್ಡ ಹೈಪ್ ಪಡೆದುಕೊಂಡಿರೋ  ಸಿನಿಮಾ ಲಾಲ್ ಸಿಂಗ್ ಚಡ್ಡಾ. ಆಗಸ್ಟ್ 11ಕ್ಕೆ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗ್ತಿದೆ. ಈ ಹಿಂದೆ ಆಮೀರ್ ಖಾನ್ ನೀಡಿದ್ದ ಹೇಳಿಕೆ ವಿರೋಧಿಸಿ ನಟ್ಟಿಗರು ಅಮೀರ್ ಖಾನ್ ಸಿನಿಮಾವನ್ನು ಬಾಯ್ಕಟ್ ಮಾಡುವಂತೆ ಒತ್ತಾಯ ಕೇಳಿಬಂದಿತ್ತು. ಆಮೀರ್ ಖಾನ್ ಸಿನಿಮಾದ ವಿರುದ್ಧ ದೊಡ್ಡ ಅಭಿಯಾನವೆ ಪ್ರಾರಂಭವಾಗಿತ್ತು. ಆದ್ರೆ ಈ ಅಭಿಯಾದ ಮಧ್ಯೆಯೂ ಲಾಲ್ ಸಿಂಗ್ ಚಡ್ಡಾ ಟಿಕೆಟ್ ಬುಕ್ಕಿಂಗ್ ನಲ್ಲಿ ಕೋಟಿ ಕೋಟಿ ಬಾಚಿಕೊಳ್ತಿದೆ. ಇದೇ ವಾರ ತೆರೆ ಮೇಲೆ ಮೂಡಿ ಬರುತ್ತಿರೋ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೊದಲ ದಿನ ಟಿಕೆಟ್ ಬುಕ್ಕಿಂಗ್ ಓಪನ್ ಆಗುತ್ತಿದ್ದಂತೆ 24 ಗಂಟೆಯಲ್ಲಿ 1.12 ಕೋಟಿ ಗಳಿಸಿದೆ. ಅದು ಮಾತ್ರವಲ್ಲ. ಥಿಯೇಟರ್ನಲ್ಲಿ ನೇರವಾಗಿ ಸೀಟು ಬ್ಲಾಕ್ ಮಾಡುವ ಮೂಲಕ ಸುಮಾರು 30 ಲಕ್ಷ ರೂಪಾಯಿ ಗಳಿಸಿದೆ. ಬುಕಿಂಗ್ ಆರಂಭವಾದ ಮೊದಲ ದಿನವೇ ಇಷ್ಟೊಂದು ಕಲೆಕ್ಷನ್ ಮಾಡೋದು ಸಾಮಾನ್ಯ ಅಲ್ಲ. ಹೀಗಾಗಿ ಬಾಯ್ಕಾಟ್ ಟ್ರೆಂಡ್ ನಡುವೆಯೂ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಅದ್ಭುತವಾಗಿದ್ದು, 'ಲಾಲ್ ಸಿಂಗ್ ಚಡ್ಡ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿಯಾಗಿ ಗೆಲವು ದಾಖಲಿಸುವ ಮುನ್ಸೂಚನೆ ಕೊಟ್ಟಿದೆ. ಈ ಸಿನಿಮಾದಿಂದ ಬಾಲಿವುಡ್ ಬಾಕ್ಸಾಫೀಸ್ ಬಾಗಿಲು ತೆರೆಯುತ್ತೆ ಅನ್ನೋ ದೊಡ್ಡ ಆಶಾವಾದ ಬಾಲಿವುಡ್ ನಲ್ಲಿ ಮೂಡಿಸಿದೆ.

Video Top Stories