Bay Leaf Remedies: ಜ್ಯೋತಿಷಿ ಜಯ ಮದನ್ ಅವರು ಅದೃಷ್ಟ ಖುಲಾಯಿಸಬೇಕು ಅಂದ್ರೆ, ಬಿರಿಯಾನಿ ಎಲೆಯ ಮೇಲೆ ಈ ಒಂದು ಸಂಖ್ಯೆಯನ್ನು ಬರೆಯಬೇಕು ಎಂದಿದ್ದಾರೆ. ಆ ಸಂಖ್ಯೆ ಯಾವುದು? ಅದನ್ನು ಬರೆದರೆ ಯಾವೆಲ್ಲಾ ಬದಲಾವಣೆಗಳು ಉಂಟಾಗುತ್ತವೆ? ಇಲ್ಲಿದೆ ಮಾಹಿತಿ.
ಬಿರಿಯಾನಿ ಎಲೆ ಮೇಲೆ ಈ ನಂಬರ್ ಬರೆದರೆ ಅದೃಷ್ಟ
ಮನೆಯಲ್ಲಿರುವ ಸಣ್ಣಪುಟ್ಟ ವಸ್ತುಗಳನ್ನು ಬಳಸಿಕೊಂಡು ವಾಸ್ತು ಮತ್ತು ಧಾರ್ಮಿಕ ನಂಬಿಕೆಗಳಲ್ಲಿ ಹಲವು ರೀತಿಯ ಪರಿಹಾರಗಳನ್ನು ಮಾಡಲಾಗುತ್ತದೆ. ಅಂತಹ ಒಂದು ಪರಿಹಾರವೇ ತೇಜಪತ್ರೆ ಅಂದರೆ ಬೇ ಲೀಫ್ಗ ಅಂದರೆ ಬಿರಿಯಾನಿ ಎಲೆಗೆ ಸಂಬಂಧಿಸಿದ ಪರಿಗಾರ. ಸೋಶಿಯಲ್ ಮೀಡಿಯದಲ್ಲಿ ಜನಪ್ರಿಯತೆ ಗಳಿಸಿರುವ ಖ್ಯಾತ ಜ್ಯೋತಿಷಿ ಜಯ ಮದನ್ ಅವರ ಪ್ರಕಾರ, ತೇಜಪತ್ರೆಯ ಮೇಲೆ ಕೆಲವು ವಿಶೇಷ ಸಂಖ್ಯೆಗಳನ್ನು ಬರೆದು ಸುಡುವುದರಿಂದ ವ್ಯಕ್ತಿಯು ತನ್ನ ಆಸೆ ಮತ್ತು ಗುರಿಗಳನ್ನು ಮ್ಯಾನಿಫೆಸ್ಟ್ ಮಾಡಿಕೊಳ್ಳುವ ಅಭ್ಯಾಸ ಮಾಡಬಹುದು. ಅವರು ತಿಳಿಸಿರುವ ಈ ಪರಿಹಾರದಲ್ಲಿ 111ರಿಂದ 999ರವರೆಗಿನ ಏಂಜೆಲ್ ನಂಬರ್ಗಳು ಸೇರಿವೆ. ಪ್ರತಿಯೊಂದು ಸಂಖ್ಯೆಯನ್ನೂ ಜೀವನದ ವಿಭಿನ್ನ ಆಶಯ ಮತ್ತು ಉದ್ದೇಶಗಳಿಗೆ ಸಂಬಂಧಿಸಿದಂತೆ ನೋಡಲಾಗುತ್ತದೆ. ಹಾಗಾದರೆ ಜಯ ಮದನ್ ಅವರ ಪ್ರಕಾರ ಯಾವ ಸಂಖ್ಯೆಯ ಅರ್ಥವೇನು? .
ತೇಜಪತ್ರೆಯ ಮೇಲೆ 111 ಬರೆದು ಸುಟ್ಟರೆ ಏನಾಗುತ್ತದೆ?
ಜಯ ಮದನ್ ಅವರ ಪ್ರಕಾರ, ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳು ಮತ್ತು ಹೊಸ ಆರಂಭವನ್ನು ಬಯಸುತ್ತಿದ್ದರೆ ತೇಜಪತ್ರೆಯ ಮೇಲೆ 111 ಎಂದು ಬರೆಯಬಹುದು. ಅದೇ ರೀತಿ, ನಿಮ್ಮ ಪ್ರೇಮ ಜೀವನವನ್ನು ಉತ್ತಮಗೊಳಿಸಿಕೊಳ್ಳಲು ಅಥವಾ ಜೀವನದಲ್ಲಿ ಪ್ರೀತಿ ಮತ್ತು ಉತ್ತಮ ಸಂಬಂಧಗಳನ್ನು ಬಯಸುತ್ತಿದ್ದರೆ ತೇಜಪತ್ರೆಯ ಮೇಲೆ 222 ಎಂದು ಬರೆಯಿರಿ ಎನ್ನುತ್ತಾರೆ. ಜ್ಯೋತಿಷಿಯ ಪ್ರಕಾರ, ಈ ಸಂಖ್ಯೆಯನ್ನು ಪ್ರೀತಿ ಮತ್ತು ಜೀವನ ಸಂಗಾತಿಯ ಬಯಕೆಯೊಂದಿಗೆ ಸಂಬಂಧಿಸಲಾಗುತ್ತದೆ.
ಇದಲಲ್ದೇ ತೇಜಪತ್ರೆಯ ಮೇಲೆ 333 ಎಂದು ಬರೆದು ಸುಡುವುದನ್ನು ಹೊಸ ಮಾರ್ಗಗಳು ತೆರೆದುಕೊಳ್ಳುವುದು ಹಾಗೂ ವಿಶೇಷವಾಗಿ ಹೆಸರು ಮತ್ತು ಖ್ಯಾತಿಗೆ ಸಂಬಂಧಿಸಿದ ಅವಕಾಶಗಳು ಸಿಗುತ್ತದೆ. . ಇನ್ನು 444 ಸಂಖ್ಯೆಯನ್ನು ಜೀವನದಲ್ಲಿ ಶಿಸ್ತು ಮತ್ತು ಸ್ಥಿರತೆಯನ್ನು ತಂದುಕೊಳ್ಳುವ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತದೆ. ಜೀವನದಲ್ಲಿ ಸ್ಥಿರತೆ ಬೇಕು ಅಂದ್ರೆ, ನೀವು ಬಿರಿಯಾನಿ ಎಲೆ ಮೇಲೆ ಈ ಒಂದು ನಂಬರ್ ಬರೆದು ಸುಡಬಹುದು.
ಬೆಳವಣಿಗೆ ಮತ್ತು ಆಧ್ಯಾತ್ಮಿಕ ಪ್ರಗತಿಗಾಗಿ ಈ ಸಂಖ್ಯೆಗಳು
ಜ್ಯೋತಿಷಿ ತಿಳಿಸಿರುವ ಪರಿಹಾರದ ಪ್ರಕಾರ, 555 ಸಂಖ್ಯೆಯನ್ನು ತ್ವರಿತ ಬದಲಾವಣೆ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. 666 ಸಂಖ್ಯೆಯನ್ನು ಸುಖ-ಸೌಕರ್ಯಗಳು, ಬಡ್ತಿ ಮತ್ತು ಸುಂದರ ವಸ್ತುಗಳ ಪಡೆಯುವ ಸಂಕೇತವಾಗಿದೆ. ಇನ್ನು ಆಧ್ಯಾತ್ಮಿಕ ಬೆಳವಣಿಗೆ ಹೊಂದಬೇಕು ಹಾಗೂ ದೇವರಿಗೆ ಹತ್ತಿರವಾಗಬೇಕು ಎಂದು ಬಯಸುವವರಿಗೆ 777 ಸಂಖ್ಯೆಯನ್ನು ಬಿರಿಯಾನಿ ಎಲೆ ಮೇಲೆ ಬರೆದರೆ ಉತ್ತಮ. .
888 ಮತ್ತು 999 ಸಂಖ್ಯೆಗಳ ಮಹತ್ವವೇನು?
ಜಯ ಮದನ್ ಅವರ ಪ್ರಕಾರ, 888 ಸಂಖ್ಯೆಯನ್ನು ಆಸೆಗಳು ಈಡೇರುವುದು ಮತ್ತು ಜೀವನದ ಹಾದಿಯಲ್ಲಿರುವ ಅಡೆತಡೆಗಳು ದೂರವಾಗಲಿ ಎಂಬ ಬಯಕೆಯೊಂದಿಗೆ ಬರೆಯಬಹುದು. ಇನ್ನು ಕೊನೆಯದಾಗಿ 999 ಸಂಖ್ಯೆಯು ಯಾವುದಾದರೂ ಕೆಲಸವನ್ನು ಪೂರ್ಣಗೊಳಿಸುವುದು, ಅಪೂರ್ಣವಾಗಿರುವ ಕಾರ್ಯಗಳನ್ನು ಅಂತಿಮ ಹಂತಕ್ಕೆ ತಲುಪಿಸುವುದು ಹಾಗೂ ಜೀವನದಲ್ಲಿ ಒಂದು ಅಧ್ಯಾಯಕ್ಕೆ ಪೂರ್ಣವಿರಾಮ ನೀಡುವ ಸಂಕೇತವಾಗಿ ಪರಿಗಣಿಸಲಾಗುತ್ತದೆ.
ಈ ಮೇಲೆ ತಿಳಿಸಿದ ವಿಷಯಗಳಲ್ಲಿ ನೀವು ಯಾವುದರೆ ಬಗ್ಗೆ ಹೆಚ್ಚು ಒಲವು ತೋರಿಸುತ್ತೀರೋ, ಆ ಸಂಖ್ಯೆಯನ್ನು ತೇಜಪತ್ರೆಯ ಮೇಲೆ ಬರೆದು ಸುಡೋದರಿಂದ ನಿಮ್ಮ ಕನಸು ನನಸಾಗುತ್ತದೆ. ಅದೃಷ್ಟ ಖುಲಾಯಿಸುತ್ತದೆ.










