ಉತ್ತರಕನ್ನಡ: ಬರ್ತಡೇ ಪಾರ್ಟಿಗೆಂದು ತೆರಳಿದ್ದ ಯುವಕ ಕಣ್ಮರೆ: ಹಳ್ಳದಲ್ಲಿ ಕೊಚ್ಚಿ ಹೋಗಿರುವ ಶಂಕೆ
*ಬರ್ತ್ ಡೇ ಪಾರ್ಟಿಗೆಂದು ತೆರಳಿದ್ದ ಯುವಕ ಕಣ್ಮರೆ
*ಜೊಯಿಡಾದ ಅಣಶಿಯ ಕಾಪೋಯಿ ಹಳ್ಳದಲ್ಲಿ ಘಟನೆ
*ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆಂದು ತೆರಳಿದ್ದ ಯುವಕ
ಉತ್ತರಕನ್ನಡ (ಮೇ 30): ಬರ್ತಡೇ ಪಾರ್ಟಿಗೆಂದು ತೆರಳಿದ್ದ ಯುವಕ ಕಣ್ಮರೆಯಾಗಿರುವ (Missing) ಘಟನೆ ಜೊಯಿಡಾದ ಅಣಶಿಯ ಕಾಪೋಯಿ ಹಳ್ಳದಲ್ಲಿ ನಿನ್ನೆ ನಡೆದಿದೆ. ದಿಗಂಬರ ಮಡಿವಾಳ(23) ಕಾಣೆಯಾದ ದುರ್ದೈವಿ. ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆಂದು (Birthday Party) ದಿಗಂಬರ ನಿನ್ನೆ ತೆರಳಿದ್ದರು. ಅರಣ್ಯ ಇಲಾಖೆ ನೇಚರ್ ಕ್ಯಾಂಪ್ ಬಳಿ ಕಾಪೋಯಿ ಹಳ್ಳದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಅರಣ್ಯ ಇಲಾಖೆಯ ಸ್ನೇಹಿತರೊಂದಿಗೆ ಊಟ ಮಾಡಿ ಬರುತ್ತೇನೆಂದು ದಿಗಂಬರ್ ತೆರಳಿದ್ದರು. ಹಳ್ಳದಲ್ಲಿ ಈಜಲು ಇಳಿದಿದ್ದ ವೇಳೆ ನೀರಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಕೂಡಲೇ ಹಳ್ಳದ ಬಳಿ ಹುಡುಕಾಟ ನಡೆಸಿದರೂ ದಿಗಂಬರ್ ಪತ್ತೆಯಾಗಿಲ್ಲ. ಸಂಜೆ ವೇಳೆ ಮಾಹಿತಿ ತಿಳಿದು ಪೊಲೀಸರಿಗೆ ತಂದೆ ದೂರು ನೀಡಿದ್ದಾರೆ. ಮಗನನ್ನು ಹುಡುಕಿಕೊಡುವಂತೆ ದಿಗಂಬರ್ ತಂದೆ ಮನವಿ ಮಾಡಿಕೊಂಡಿದ್ದಾರೆ. ಜೋಯಿಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆಸ್ಪತ್ರೆಯಿಂದಲೇ ನವಜಾತ ಶಿಶು ನಾಪತ್ತೆ: ಮಗುವಿಗಾಗಿ ಹಂಬಲಿಸುತ್ತಿರುವ ಪೋಷಕರು!
ನಾಪತ್ತೆಯಾಗಿದ್ದ ಬಾಲಕಿ 4 ದಿನದ ಬಳಿಕ ಅರಣ್ಯದಲ್ಲಿ ಪತ್ತೆ: ಏ. 26ರಂದು ಮನೆ ಎದುರು ಆಟವಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಬಾಲಕಿ 4 ದಿನಗಳ ಬಳಿಕ ನಿತ್ರಾಣ ಸ್ಥಿತಿಯಲ್ಲಿ ಅರಣ್ಯದಲ್ಲಿ(Forest) ಪತ್ತೆಯಾಗಿದ್ದಾಳೆ. ಬೆಳಗಾವಿ(Belagavi) ಜಿಲ್ಲೆ ಖಾನಾಪುರ ತಾಲೂಕಿನ ಜಾಂಬೋಟಿ ಹೋಬಳಿ ವ್ಯಾಪ್ತಿಯ ಚಿರೇಖಾನಿ ಗ್ರಾಮದಿಂದ ಎರಡೂವರೆ ಕಿಲೋಮೀಟರ್ ಅಂತರದ ಅರಣ್ಯದಲ್ಲಿ ನಿನ್ನೆ(ಶನಿವಾರ) ಸಂಜೆ ಪತ್ತೆಯಾಗಿದ್ದಾಳೆ.
ತಾವರಗಟ್ಟಿ ಗ್ರಾಮದ ಶಿವಾಜಿ ಇಟಗೇಕರ್ ಪತ್ನಿ, ಮಗುವಿನ ಜೊತೆ ಪತ್ನಿಯ ತವರು ಮನೆ ಚಿರೇಖಾನಿ ಗ್ರಾಮಕ್ಕೆ ಆಗಮಿಸಿದ್ದರು. ಏ. 26ರಂದು ಮನೆ ಎದುರು ಆಟವಾಡುತ್ತಿದ್ದ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು(Missing). ಎರಡು ದಿನಗಳ ಕಾಲ ಹುಡುಕಾಟ ನಡೆಸಿದ್ದ ಕುಟುಂಬಸ್ಥರು ಬಾಲಕಿ ಪತ್ತೆಯಾಗದ ಹಿನ್ನೆಲೆ ಖಾನಾಪುರ ಪೊಲೀಸ್(Police) ಠಾಣೆಗೆ ದೂರು ನೀಡಿದ್ದರು.