ಕಾರವಾರ [ನ.15] : ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಇಲ್ಲಿನ ಹಲವು ಮುಖಂಡರು ಬಿಜೆಪಿಯತ್ತ ಮುಖ ಮಾಡಿದ್ದಾರೆ. 

ಕಾರವಾರ ಉತ್ತರ ಕನ್ನಡ, ಯಲ್ಲಾಪುರದ ಹಲವು ಹೆಬ್ಬಾರ್ ಬೆಂಬಲಿಗರು ಇಂದು ಯಲ್ಲಾಪುರದ ಅಡಿಕೆ ಭವನದ ಮುಂಭಾಗದಲ್ಲಿ ನಡೆದ ಕರ್ಯಕ್ರಮದಲ್ಲಿ ಕಾಂಗ್ರೆಸಿಗೆ ಕೈ ಕೊಟ್ಟು ಬಿಜೆಪಿ ಸೇರಿದರು. 

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬೆಂಬಲಿಗರು ಬಿಜೆಪಿ ಸೇರಿದ್ದು, ಉಪಚುನಾವಣೆಗೆ ಇನ್ನು 20 ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ಬಿಗ್ ಶಾಕ್ ನೀಡಿದ್ದಾರೆ. 

ಅತೃಪ್ತರಾಗಿ ರಾಜೀನಾಮೆ ನೀಡಿದ್ದ ಶಿವರಾಮ್ ಹೆಬ್ಬಾರ್ ಅವರು ಬಳಿಕ ಅನರ್ಹರಾಗಿದ್ದು, ನವೆಂಬರ್ 14 ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. ಇದೀಗ ಡಿಸೆಂಬರ್ 5 ರಂದು ನಡೆಯುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ  ಕಣಕ್ಕೆ ಇಳಿಯುತ್ತಿದ್ದು, ತಮ್ಮ ಬೆಂಬಲಿಗರನ್ನು ತಾವಿರುವ ಪಕ್ಷಕ್ಕೆ ಕರೆದೊಯ್ದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿಸೆಂಬರ್ 5 ರಂದು ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿಸೆಂಬರ್ 9 ರಂದು ಉಪಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ನವೆಂಬರ್ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: