ಮಾನಸಿಕ ಅಸ್ವಸ್ಥಗೆ ಹೊಸ ರೂಪ ನೀಡಿದ ಯುವಕರು

ಉತ್ತರ ಕರ್ನಾಟಕದಲ್ಲಿ ಮಾನಸಿಕ ಅಸ್ವಸ್ಥನೋರ್ವನಿಗೆ ಇಲ್ಲಿನ ಯುವಕರ ಗುಂಪೊಂದು ಹೊಸ ರೂಪ ನೀಡಿದೆ. 

Mentally ill person shaven head and reformed by youths in Bhatkal in Uttar Kannada

ಉತ್ತರ ಕನ್ನಡ : ಭಟ್ಕಳ ರೈಲ್ವೆ ನಿಲ್ದಾಣದಲ್ಲಿದ್ದ ಮಾನಸಿಕ ಅಸ್ವಸ್ಥ ನೋರ್ವನಿಗೆ ಇಲ್ಲಿನ ಆಟೋ ರಿಕ್ಷ ಚಾಲಕರು ಹೊಸ ರೂಪ ನೀಡಿದ್ದಾರೆ. 

ಅರೆಬೆತ್ತಲೆಯಾಗಿ ಸಂಚರಿಸುತ್ತಾ, ಜನರಲ್ಲಿ ಆತಂಕ ಮೂಡಿಸಿದ್ದ ಈ ವ್ಯಕ್ತಿಗೆ ಆಟೋ ಚಾಲಕರು ಹಾಗೂ ಸಮಾಜ ಸೇವಕ ಮಂಜುನಾಯ್ಕ, ಗಣಪತಿ ನಾಯ್ಕ, ಹನುಮಂತ ನಾಯ್ಕ, ಶೇಷಗಿರಿ ನಾಯ್ಕ, ನಾಗೇಶ ನಾಯ್ಕ, ಮಾದೇವ ನಾಯ್ಕ, ಶೇಖರ ನಾಯ್ಕ ಎಂಬುವವರು ಸೇರಿ ಆತನನ್ನು ಸ್ವಚ್ಛಗೊಳಿಸಿ ಹೊಸತನ ನೀಡಿದ್ದಾರೆ. 

ಒಂದು ತಿಂಗಳಿನಿಂದಲೂ ಕೂಡ ರೈಲ್ವೆ ನಿಲ್ದಾಣದ ಸುತ್ತಮುತ್ತ ಮರದ ಕೆಳಗೆ ವಾಸಿಸುತ್ತಿದ್ದ ವ್ಯಕ್ತಿಗೆ ಕೂದಲು ಕತ್ತರಿಸಿ, ಸ್ನಾನ ಮಾಡಿಸಿ ನೂತನ  ರೂಪ ನೀಡಿದ್ದಾರೆ.  ವಿರೂಪವಾಗಿದ್ದ ಈತನನ್ನು ಸ್ವಚ್ಛಗೊಳಿಸಿ ಸ್ವಚ್ಛ ಬಟ್ಟೆಯನ್ನು ನೀಡಿ ಊಟ ತಿಂಡಿ ನೀಡಿ ಸಲಹಿದ್ದಾರೆ. 

ಈತನ ಮೂಲದ ಬಗ್ಗೆ ವಿಚಾರಿಸಿದಾಗ  ಪುಣೆ ಮೂಲದವನೆಂದು ತಿಳಿದು ಬಂದಿದ್ದು, ತನಗೆ ಹೊಸ ರೂಪ ನೀಡಿದ ಎಲ್ಲರಿಗೂ ಈ ವ್ಯಕ್ತಿ ಧನ್ಯವಾದ ಹೇಳಿ, ರೈಲಿನಲ್ಲಿ ಪ್ರಯಾಣಿಸಿದ್ದಾನೆ. 

Latest Videos
Follow Us:
Download App:
  • android
  • ios