ಕಾರವಾರ [ನ.14]: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರಕ್ಕೆ ನಡೆಯುವ ಉಪ ಚುಣಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಭೀಮಣ್ಣ ನಾಯ್ಕ್ ನಾಮಪತ್ರ ಸಲ್ಲಿಸಿದ್ದಾರೆ. 

ಶಿವರಾಜ್ ಹೆಬ್ಬಾರ್ ಅನರ್ಹತೆಯಿಂದ ತೆರವಾಗಿದ್ದ ಯಲ್ಲಾಪುರ ಕ್ಷೇತ್ರದ ಚುನಾವಣೆಗೆ ಭೀಮಣ್ಣ ನಾಯ್ಕ್, ಶಾಸಕರಾದ ಆರ್.ವಿ.ದೇಶಪಾಂಡೆ ಜೊತೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. 

ನಾಮಪತ್ರ ಸಲ್ಲಿಕೆಗೂ ಮುನ್ನ ಬಹಿರಂಗವಾಗಿ ಭೀಮಣ್ಣ ನಾಯ್ಕ್  ಬಹಿರಂಗವಾಗಿ  ಮತ ಯಾಚನೆ ಮಾಡಿದ್ದಾರೆ. ಅಲ್ಲದೇ ಇದೇ ವೇಳೆ ಅನರ್ಹ ಶಾಸಕರ ಬಗ್ಗೆಯೂ ವಾಗ್ದಾಳಿ ನಡೆಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಶಪಾಂಡೆ ಜೊತೆಗೆ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಜನರ ಮತ ಯಾಚನೆ ಮಾಡಿದ್ದಾರೆ. 

ಕರ್ನಾಟಕ ಉಪ ಚುನಾವಣೆ : 11 ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ...

ರಾಜ್ಯದ 17 ಕ್ಷೇತ್ರಗಳು ಶಾಸಕರ ಅನರ್ಹತೆಯಿಂದ ತೆರವಾಗಿದ್ದು, 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.