Asianet Suvarna News Asianet Suvarna News

ಬೀಚ್ ಗಳಿಗೆ ಪ್ರವಾಸಕ್ಕೆ ತೆರಳುವವರಿಗೆ ಇಲ್ಲಿದೆ ಗುಡ್ ನ್ಯೂಸ್ !

ಉತ್ತರ ಕನ್ನಡ ಬೀಚ್ ಗಳತ್ತ ಪ್ರವಾಸಕ್ಕೆ ತೆರಳುವವ ಯೋಜನೆ ನಿಮಗಿದ್ಯಾ. ಇಲ್ಲಿದೆ ಗುಡ್ ನ್ಯೂಸ್

Good News For Who Want Travel Uttara Kannada Beaches
Author
Bengaluru, First Published Oct 14, 2019, 1:17 PM IST

ಕಾರವಾರ (ಅ.14): ಜಿಲ್ಲೆಯ ಕಡಲ ತೀರಕ್ಕೆ ಬರುವ ಪ್ರವಾಸಿಗರು ಹೊಟ್ಟೆ ತುಂಬಿಸಿಕೊಳ್ಳಲು, ಬಟ್ಟೆ ಬದಲಾಯಿಸಿಕೊಳ್ಳಲು ಸ್ನಾನ ಮಾಡಲು ಪರದಾಡಬೇಕಿಲ್ಲ. ಪ್ರವಾಸಿಗರ ಅನುಕೂಲಕ್ಕಾಗಿ ಇಂತಹ ಎಲ್ಲ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ದಶಕಗಳಿಂದ ಮೂಲಭೂತ ಸೌಕರ್ಯ ಒದಗಿಸುವ ಆಗ್ರಹ ಕೇಳಿ ಬರುತ್ತಿತ್ತು. ಆದರೆ ಕಾರಣಾಂತರದಿಂದ ಮೂಲ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದರು. ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲು, ಗೋಕರ್ಣದ ಮುಖ್ಯ, ಓಂ, ಕುಡ್ಲೆ, ಹೊನ್ನಾವರದ ಇಕೋ, ಕುಮಟಾದ ಹೆಡ್ ಬಂದರು, ಮುರುಡೇಶ್ವರದ ಕಡಲ ತೀರಗಳು ಪ್ರಮುಖವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಏನೇನು ಇರುತ್ತದೆ: ಪ್ರಮುಖ ಕಡಲ ತೀರದಲ್ಲಿ ಸುಲಭ ಶೌಚಾಲಯ, ರೆಸ್ಟ್ ರೂಮ್, ಬಟ್ಟೆ ಬದಲಾಯಿಸಿಕೊಳ್ಳಲು ಕೊಠಡಿ ಹಾಗೂ ಫುಡ್ ಕೋರ್ಟ್ ಇರಲಿದೆ. ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಿ ಇವುಗಳ ವ್ಯವಸ್ಥೆ ಮಾಡುವ ಬಗ್ಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಕಾಯೋ ನ್ಮುಖವಾಗಿದೆ. ಸಿಆರ್‌ಝಡ್ ನಿಯಮ ದಿಂದಾಗಿ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಸಾಧ್ಯವಿಲ್ಲದ ಕಾರಣ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. 

ಸಮುದ್ರದಲ್ಲಿ ಸ್ನಾನ ಮಾಡಿ ಬಂದ ಬಳಿಕ ಬಟ್ಟೆ ಬದಲಾಯಿಸಿಕೊಳ್ಳಲು ಹೆಚ್ಚಿನ ಕಡೆಗಳಲ್ಲಿ ಯಾವುದೇ ವ್ಯವಸ್ಥೆ  ಇಲ್ಲ. ಉಪ್ಪು ನೀರಿನಿಂದಾಗಿ ಬಟ್ಟೆ ಬದಲ ಸಿಕೊಳ್ಳುವ ಅನಿವಾರ್ಯತೆ ಇದ್ದೇ ಇರುತ್ತದೆ. ಇದಕ್ಕೆ ಸಮೀಪದ ಲಾಡ್ಜ್‌ಗಳಿಗೆ ತೆರಳಬೇಕು. ಆದರೆ ಕೆಲವು ಕ್ಷಣಕ್ಕಾಗಿ ಹಣ ನೀಡಿ ರೂಮ್ ಪಡೆಯುವುದು ಕಷ್ಟಸಾಧ್ಯ. ಕಡಲ ತೀರದಲ್ಲೂ ವ್ಯವಸ್ಥೆ ಇಲ್ಲದೇ ಪ್ರವಾಸಿಗರು ತೊಂದರೆ ಅನುಭ ವಿಸುತ್ತಿದ್ದರು. ಅದರಲ್ಲೂ ಮಹಿಳೆ ಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನಾನುಕೂಲ ಆಗುತ್ತಿತ್ತು. ಶೌಚಕ್ಕಾಗಿ ಕೂಡಾ ಅಲೆದಾಡುವ ಸ್ಥಿತಿಯಿದೆ.

ಜಲಕ್ರೀಡೆ ಆಡಿ ದಣಿದು, ಹಸಿವಾಗಿ ಬಂದವರಿಗೆ ಸ್ಥಳದಲ್ಲೇ ತಕ್ಷಣಕ್ಕೆ ಹೊಟ್ಟೆ ತುಂಬಿಸಿಕೊಳ್ಳಲು ಫುಡ್‌ಕೋರ್ಟ್ ಕೂಡಾ ತೆರೆಯಲು ಯೋಜನೆ ರೂಪಿಸ ಲಾಗಿದೆ. ಜಿಲ್ಲಾಡಳಿತದಿಂದಲೇ ಮೂಲ ಸೌಕರ್ಯ ಒದಗಿಸಿದರೆ ಪ್ರವಾಸಿಗರಿಗೆ ಅನುಕೂಲ ಆಗಲಿದೆ. ಜತೆಗೆ ಉದ್ಯೋ ಗಾವಕಶ ಕೂಡಾ ಸ್ಥಳೀಯರಿಗೆ ಸಿಗಲಿದೆ. 

ಪ್ರವಾಸಿ ತಾಣಗಳಲ್ಲಿ ಅವಶ್ಯಕ ಮೂಲ ಸೌಲಭ್ಯ ಒದಗಿಸುವುದರಿಂದ ಪ್ರವಾಸಿ ಗರ ಸಂಖ್ಯೆಯಲ್ಲಿ ಕೂಡಾ ಹೆಚ್ಚಳ ಆಗಲಿದೆ. ತನ್ಮೂಲಕ ಜಿಲ್ಲೆಯ ಜನರಿಗೆ ಆರ್ಥಿಕ ಅನುಕೂಲ ಆಗಲಿದೆ.  

Follow Us:
Download App:
  • android
  • ios