ಕಾರವಾರ [ನ.15]: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಮುಖಂಡರೋರ್ವರು ಬಂಡಾಯ ಅಭ್ಯರ್ಥಿಯಾಗಿ ಇಲ್ಲಿಂದ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. 

ಕಾಂಗ್ರೆಸ್ ಮುಖಂಡ ಲಕ್ಷ್ಮಣ ಬಾನ್ಸೋಡೆ ಬಂಡಾಯವೆದ್ದಿದ್ದು, ಈ ಬಗ್ಗೆ ಕಾರವಾರದಲ್ಲಿ ಮಾತನಾಡಿದ ಅವರು ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು, ಸಿದ್ದರಾಮಯ್ಯ, ದೇಶಪಾಂಡೆಯವರಿಗೂ ನಾನು ಈ ಬಗ್ಗೆ ಮನವಿ ಮಾಡಿದ್ದೇನೆ ಎಂದರು. 

ನಮ್ಮ ಕ್ಷೇತ್ರದಲ್ಲಿ ಇದುವರೆಗೂ ಯಾವುದೇ ಅಭ್ಯರ್ಥಿಗೆ ಬಿ ಫಾರ್ಮ್ ನೀಡಿಲ್ಲ. ಯಲ್ಲಾಪುರ, ಮುಂಡಗೋಡ, ಬನವಾಸಿಯ ಯಾವುದೇ ಮುಖಂಡಗೂ ನೀಡಿಲ್ಲ. ಯಾರಿಗೂ ನೀಡದ ಕಾರಣ ಕಾರ್ಯಕರ್ತರಿಗೆ ನೋವುಂಟಾಗಿದೆ. ಈ ನಿಟ್ಟಿನಲ್ಲಿ ನಾನು ನಾಮಪತ್ರ ಸಲ್ಲಿಸುತ್ತಿದ್ದು ಯಾವುದೇ ಕಾರಣಕ್ಕೂ ಹಿಂಪಡೆಯಲ್ಲ ಎಂದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನಗೆ ಬಿಜೆಪಿ, ಜೆಡಿಎಸ್ ಅಭಿಮಾನಿಗಳೂ ಇರುವುದರಿಂದ ಗೆಲ್ಲುವ ವಿಶ್ವಾಸ ಇದೆ.  ಅಧಿಕಾರ ದೊರೆತದಲ್ಲಿ  ಅತಿಕ್ರಮಕಾರರ ಸಮಸ್ಯೆ ನಿವಾರಿಸುತ್ತೇನೆ. ಚೆಕ್ ಡ್ಯಾಂ ಗಳನ್ನು ಹೂಳೆತ್ತುವ ಕೆಲಸ ಮಾಡುತ್ತೇನೆ. ಫ್ಯಾಕ್ಟರಿ ಕೆಲಸಗಳನ್ನು ನೀಡುವ ಪ್ರಯತ್ನ ಮಾಡುತ್ತೇನೆ. ನಾನು ಯಾರ ಬೆದರಿಕೆಗೂ ಬಗ್ಗಲ್ಲ ಎಂದರು. 

ನಾನು  ಬಂಡಾಯ ಅಭ್ಯರ್ಥಿ. ಬಿಜೆಪಿ ವಿರುದ್ಧ ಸ್ಪರ್ಧೆಗೆ ನಿಂತರೆ ಸುಮಾರು 25000 ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ. ಪಕ್ಷದ ಕೆಲವು ಮುಖಂಡರು‌ ನಮ್ಮನ್ನು‌‌ ತಿರಸ್ಕರಿಸುವ ಕೆಲಸ‌ ಮಾಡ್ತಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಹಿರಿಯ ಮುಖಂಡರಿಂದ ಈ ಸಮಸ್ಯೆಯಾಗಿದೆ ಎಂದು ಪರೋಕ್ಷವಾಗಿ ಆರ್.ವಿ.ದೇಶ್‌ಪಾಂಡೆ ಮೇಲೆ ಆರೋಪ ಹೊರಿಸಿದ್ದಾರೆ ಲಕ್ಷ್ಮಣ ಬನ್ಸೋಡೆ. 

ಡಿಸೆಂಬರ್  5 ರಂದು ಚುನಾವಣೆ ನಡೆಯುತ್ತಿದ್ದು ಡಿಸೆಂಬರ್ 9 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.