ಶಿರಸಿ [ನ.13]: ಕಾಂಗ್ರೆಸ್‌ನಿಂದ ಎರಡು ಸಲ ಶಾಸಕರಾಗಿ, ನಿಗಮದ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿ ಇದೀಗ ಹೋದವರು ಅಲ್ಲಿ ಹೇಗೆ ಸಲ್ಲುತ್ತಾರೆ ಎಂದು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಅನರ್ಹ ಶಾಸಕ ಶಿವರಾಮ ಹೆಬ್ಬಾರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದಲ್ಲಿನ ವಿಶ್ವಾಸ ದಿಕ್ಕರಿಸಿ ಅನಗತ್ಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅನುದಾನ ನೀಡಲಿಲ್ಲ ಎಂದು ಆರೋಪಿಸುತ್ತಿದ್ದಾರೆಂದು ಕಿಡಿಕಾರಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ . 2 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಕುಮಾರಸ್ವಾಮಿ ಅವರ ಅವಧಿಯಲ್ಲಿ .415 ಕೋಟಿಗೂ ಅಧಿಕ ಹಣ ನೀಡಲಾಗಿದೆ. ಇಂದಿಗೂ ಅನೇಕ ಕಾಮಗಾರಿಗಳು ಕಾಂಗ್ರೆಸ್‌ ಅಥವಾ ಮೈತ್ರಿ ಸರ್ಕಾರದ ಹಣದಿಂದಲೇ ನಡೆಯುತ್ತಿದೆ. ಈಗ ಬಿಜೆಪಿ ಸರ್ಕಾರದಲ್ಲಿ . 365 ಕೋಟಿ ಅನುದಾನ ತರಲಾಗಿದೆ ಎಂದು ಹೆಬ್ಬಾರ್‌ ಗಿಮಿಕ್‌ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕೈಯಿಂದ ಅನುದಾನ ಕೊಟ್ಟಿದ್ದರೇ ಎಂದು ಕೇಳುವ ಹೆಬ್ಬಾರ, ಈಗ ಯಡಿಯೂರಪ್ಪ ಅವರು ಕೊಟ್ಟಹಣ ಯಾವುದು ಎಂದು ಪ್ರಶ್ನಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚುನಾವಣೆ ಘೋಷಣೆಯ ಮುನ್ನಾದಿನ ಹಣ ಬಿಡುಗಡೆ ಆಗಿದೆ ಎನ್ನುತ್ತಾರೆ. ಕ್ರಿಯಾಯೋಜನೆ ಆಗಿ, ಅನುಮತಿ ಪಡೆದು, ಗುದ್ದಲಿ ಪೂಜೆಯಾಗಿ ಕಾಮಗಾರಿ ಆರಂಭ ಆಗಿದೆಯಾ? ಹೆಬ್ಬಾರರು ನೀತಿ ಸಂಹಿತೆ ಆರಂಭದ ಮೊದಲು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ನಿಂದ ಯಾರು ಪಕ್ಷ ಬಿಟ್ಟು ಹೋಗಿಲ್ಲ. ಅವರ ಒತ್ತಡಕ್ಕೆ ಹೇಳಿಕೆ ಬರೆದು ಕೊಟ್ಟು ಅಂತರಾಳದಿಂದ ಇಲ್ಲೇ ಇದ್ದಾರೆ. ಅನರ್ಹರು ಕೂಡ ಬಿಜೆಪಿಯಿಂದ ಬಂದವರು ಬಿಜೆಪಿಗೆ ಹೋಗಿದ್ದಾರೆ. ನಮ್ಮ ಧೈರ್ಯ ಕುಂದೋದಿಲ್ಲ, ತಲೆ ತಗ್ಗಿಸುವ ಕಾರ್ಯ ಏನಿಲ್ಲ. ಮುಂದೆ ಹೋಗಿ ನಾವಿದ್ದೇವೆ ಎಂದೇ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದರು.

ಯಲ್ಲಾಪುರ ವಿಧಾನಸಭೆ ಚುನಾವಣೆಗೆ ನ. 14ರಂದು ನಾಮಪತ್ರ ಸಲ್ಲಿಸುತ್ತಿದ್ದು ಅಂದು ಬೆಳಗ್ಗೆ 11.30ಕ್ಕೆ ನಾಮಪತ್ರ ಸಲ್ಲಿಸುತ್ತಿದ್ದು, ಹಿರಿಯ ನಾಯಕ ಆರ್‌.ವಿ. ದೇಶಪಾಂಡೆ ಅವರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.