ಕಾರವಾರ [ಅ.12]:  ನದಿಗೆ ಹಾರಿ ಅಂಗನವಾಡಿ ಕಾರ್ಯಕರ್ತೆಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಕಾರವಾರದ ಕಾಸರಕೋಡದ ಕಳಸನಮೋಟ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಅಂಬಿಗ ಶರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬಡ್ಡಿ ಸಾಲ ಕಿರುಕುಳಕ್ಕೆ ನಲುಗಿ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿದ್ದ ನೇತ್ರಾವತಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಂಚಾಯತ್ ಸದಸ್ಯೆ ಬಳಿ ಬಡ್ಡಿ ಸಾಲ ಪಡೆದಿದ್ದ ನೇತ್ರಾವತಿ ಸಾಲ ಹಿಂತಿರುಗಿಸದೇ ಇರುವುದರಿಂದ ಮನೆಗೆ ಬಂದು ಗ್ರಾಮ ಪಂಚಾಯತ್ ಸದಸ್ಯೆ  ಜಗಳ ಮಾಡಿದ್ದರು. ಅಲ್ಲದೇ ಅಂಗನವಾಡಿಗೂ ಬಂದು ಬೆದರಿಕೆ ಹಾಕಿದ್ದು, ಇದರಿಂದ ಮನನೊಂದು ನದಿಗೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.