Asianet Suvarna News Asianet Suvarna News

ಮಾಜಿ ಸಚಿವ ಸೊರಕೆ ಅಂಗಿ ಹರಿದದ್ದು ಯಾರು?

  •  ವಿನಯಕುಮಾರ್ ಸೊರಕೆ ಅವರ ಮೇಲೆ ಸರಕಾರಿ ಅಧಿಕಾರಿ ಹಲ್ಲೆ ಮಾಡಿದರಾ?
  • ಉಡುಪಿ ಜಿಲ್ಲೆಯ ಶಿರ್ವ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದ್ದೇನು?
  • ಆರೋಪಿತ ಅಧಿಕಾರಿ ನೀಡಿದ ಸಮಜಾಯಿಷಿ ಏನು?
Was former Minister Vinay Kumar Sorake got assaulted by Govt Officer akb
Author
Bangalore, First Published Apr 6, 2022, 5:57 PM IST

ವರದಿ  ಶಶಿಧರ ಮಾಸ್ತಿಬೈಲು , ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಏ.6): ಪ್ರತಿಭಟನಾನಿರತ ಮಾಜಿ ಸಚಿವ ವಿನಯಕುಮಾರ್ ಸೊರಕೆ ( Vinay Kumar Sorake) ಅವರ ಮೇಲೆ ಸರಕಾರಿ ಅಧಿಕಾರಿ ಹಲ್ಲೆ ನಡೆಸಿದ್ರಾ? ಮಾಜಿ ಸಚಿವರ ಅಂಗಿ ಹರಿದು ಹಾಕಿದ್ರಾ? ಉಡುಪಿ ಜಿಲ್ಲೆಯ ಶಿರ್ವ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ನಾನು ಹಲ್ಲೆ ನಡೆಸಿಲ್ಲ ಮಾಜಿ ಸಚಿವ ಸೊರಕೆಯವರೇ ನನ್ನನ್ನು ತಳ್ಳಿದ್ರು ಎಂದು ಆರೋಪಿತ ಅಧಿಕಾರಿ ಸಮಜಾಯಿಷಿ ನೀಡಿದ್ದಾರೆ. ನಿಜಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ?.

ಅಕ್ರಮ ಮನೆ ತೆರವೇ ಗಲಾಟೆಗೆ ಮೂಲ ಕಾರಣ

ಉಡುಪಿ (Udupi) ಜಿಲ್ಲೆ ಕಾಪು (Kapu) ತಾಲೂಕಿನಲ್ಲಿರುವ ಶಿರ್ವ (Shirva) ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ನಂಬರ್ 441 ರ ಸರಕಾರಿ ಜಮೀನಿನಲ್ಲಿ ಹಾವೇರಿ (Haveri) ಮೂಲದ ಪದ್ಮ ಬಾಯಿ (Padmabai)ಎಂಬವರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರು. ಇದೊಂದು ಒತ್ತುವರಿ ಪ್ರಕರಣ ಎಂಬ ಕಾರಣಕ್ಕೆ ಕಂದಾಯ ನಿರೀಕ್ಷಕರು ವರದಿ ಸಲ್ಲಿಸಿದ್ದು, ಈ ಆದೇಶದಂತೆ ಸ್ಥಳೀಯ ಗ್ರಾಮ ಪಂಚಾಯತ್ ಪಿಡಿಒ ಅನಂತಪದ್ಮನಾಭ ನಾಯಕ್ ತೆರವು ಮಾಡಿದ್ದರು. ಇದೇ ಕ್ಷೇತ್ರದಿಂದ ಶಾಸಕರಾಗಿದ್ದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಈ ಕಾರ್ಯಾಚರಣೆಯನ್ನು ಖಂಡಿಸಿ ಇಂದು ಗ್ರಾಮ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು.ಈ ವೇಳೆ ಸೊರಕೆ ಮತ್ತು ಗ್ರಾಮ ಪಂಚಾಯಿತಿ ಪಿಡಿಓ ಅನಂತಪದ್ಮನಾಭ ನಾಯಕ್ (Ananta Padmanabha Nayak)ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಸ್ಪರ ತಳ್ಳಾಟ ನಡೆದು, ಸೊರಕೆಯವರ ಅಂಗಿ ಹರಿದಿದೆ.

ಬಾಲ್ಯದ ದಿನಗಳಲ್ಲಿ ಹೀಗಿದ್ರು ಮುತ್ತಪ್ಪ ರೈ, ಚೈಲ್ಡ್‌ಹುಡ್ ಫ್ರೆಂಡ್ ಏನ್ ಹೇಳ್ತಾರೆ ಕೇಳಿ

ಮಾಜಿ ಸಚಿವರ ಅಂಗಿ ಹರಿದರಾ ಪಿಡಿಒ?

ಪ್ರತಿಭಟನೆ ನಡೆಸಲು ಮುಂದಾದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರನ್ನು ತಳ್ಳಿ, ಅವರ ಅಂಗಿ ಹರಿದುಹಾಕಿದ್ದಾಗಿ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಅಂಗಿ ಹರಿದದ್ದು ಕಾರ್ಯಕರ್ತರ ಗಮನಕ್ಕೆ ಬರುತ್ತಿದ್ದಂತೆ, ಗಲಾಟೆ ತಾರಕಕ್ಕೇರಿದೆ. ಗ್ರಾಮ್ ಪಂಚಾಯತ್ ಕಚೇರಿ ಮುಂದೆ ಹೈಡ್ರಾಮ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸಚಿವ ಸೊರಕೆ ಅವರ ಮುಂದೆ ಜೈಶ್ರೀರಾಮ್, ವಂದೇ ಮಾತರಂ ಘೋಷಣೆ ಕೂಗಿದ್ದಾರೆ. ಅಧಿಕಾರಿಯ ಮೇಲೆ ಸೊರಕೆ ಹಲ್ಲೆ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡು ಗಲಾಟಿ ತಾರಕಕ್ಕೇರಿತು.

ಮಾಜಿ ಸಚಿವ ಸೊರಕೆ ಹೇಳಿದ್ದೇನು?

ಪಿಡಿಒ ಸರ್ವಾಧಿಕಾರಿಯ ರೀತಿ ವರ್ತಿಸುತ್ತಾರೆ. ಸ್ವತಃ ಪಿಡಿಒ ಮುಂದೆ ನಿಂತು ಕಾರ್ಯಾಚರಣೆ ನಡೆಸಿ ಮನೆಯವರನ್ನು ಹೊರಗೆಳೆದು ಹಾಕಿದ್ದಾರೆ.‌ ಪರಿಶಿಷ್ಟ ಜಾತಿಗೆ ಸೇರಿದ ನೊಂದ ಕುಟುಂಬದ ಜೊತೆಗೆ ನಾವಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಪ್ರತಿಭಟನೆ ನಡೆಸಲು ಬಂದಿದ್ದೇವೆ.‌ ಈಗಲೂ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಬಡವರ ಬಗ್ಗೆ ಹೋರಾಟ ಮಾಡಿ ಹಿಂದೆಯೂ ನಾನು ಕ್ರಿಮಿನಲ್ ಕೇಸ್ ಹಾಕಿಸಿ ಕೊಂಡಿದ್ದೇನೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಒಂದೇ ಒಂದು ಬಡವರಿಗೆ ಸೈಟ್ ಕೊಟ್ಟಿಲ್ಲ. ಒಂದು ವಾರದೊಳಗಾಗಿ ಕ್ರಮಕೈಗೊಳ್ಳದಿದ್ದರೆ ತಹಶಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ. ಪಿಡಿಒ ನನ್ನ ಮೇಲೆನೇ ಬೀಳ್ತಾರೆ. ನನ್ನ ಅಂಗಿ ಯಾರು ಹರಿದರು ಅನ್ನೋದು ಮುಖ್ಯವಲ್ಲ. ಬಡವರಿಗೆ ಮನೆ ಸಿಗಬೇಕು ಅಷ್ಟೇ ಎಂದರು.

ಡಿಕೆಶಿ ಪರ ಪತ್ನಿ, ಸೊರಕೆ- ಈಶ್ವರಪ್ಪ ಪರ ಅಖಾಡಕ್ಕಿಳಿದ ಪುತ್ರಿಯರು

ಆರೋಪ ಹೊತ್ತ ಅಧಿಕಾರಿ ಹೇಳೋದೇನು?

ನಾನು ಯಾರ ಮೇಲೂ ಕೈ ಮಾಡಿಲ್ಲ. ಸೊರಕೆಯವರೇ ನನ್ನನ್ನು ತಳ್ಳಿದರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಸೇನೆಯಿಂದ ಬಂದ ವ್ಯಕ್ತಿ ನನಗೆ ಶಿಸ್ತು ಇದೆ. ಅವರು ಬೇಕಂತಲೇ ನನ್ನನ್ನು ಉದ್ದೇಶಪೂರ್ವಕ ಪುಶ್ ಮಾಡಿದರು. ಇನ್ನು ಮುಂದೆ ಯಾವ ಅಧಿಕಾರಿಯ ಮೇಲೆ ಈ ರೀತಿ ಆಗಬಾರದು ಅದು ತಪ್ಪು. ಈ ಬಗ್ಗೆ ದೂರು ನೀಡಬೇಕೆ ಬೇಡವೇ ಎನ್ನುವ ಬಗ್ಗೆ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಪಿಡಿಒ ಅನಂತಪದ್ಮನಾಭ ಹೇಳಿದರು.

ಬಿಜೆಪಿಯಿಂದ ತಕ್ಷಣದ ಹೋರಾಟದ ಎಚ್ಚರಿಕೆ

ಅಧಿಕಾರದಲ್ಲಿದ್ದಾಗಲೂ ಸೊರಕೆಯವರು ತನ್ನ ಚೇಲಾಗಳ ಮೂಲಕ ಗೂಂಡಾಗಿರಿ ಮಾಡುತ್ತಿದ್ದರು. ಈಗಲೂ ಅದೇ ಚಾಳಿ ಮುಂದುವರಿಸಿದ್ದಾರೆ. ಸರಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಅನಧಿಕೃತ ಚಟುವಟಿಕೆಗಳನ್ನು ಬೆಂಬಲಿಸಿ ಪಂಚಾಯತಿ ಕಚೇರಿ ಮುಂದೆ ನಾಟಕ ಮಾಡಿದ್ದಾರೆ. ಬಿಜೆಪಿ ಮುಖಂಡರೇ ಜೆಸಿಬಿ ಕಳಿಸಿ ಮನೆ ಒಡಿಸಿದ್ದಾರೆಎಂದು ಆರೋಪ ಮಾಡುತ್ತಾರೆ. ಸರಕಾರಿ ಅಧಿಕಾರಿಯ ಮೇಲೆ ಕೈ ಮಾಡಿದ್ದಾರೆ ಇದನ್ನು ಖಂಡಿಸಿ ತಕ್ಷಣ ಪ್ರತಿಭಟನೆ ನಡೆಸುತ್ತೇವೆ ಎಂದು ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ ನಾಯಕ್ ತಿಳಿಸಿದ್ದಾರೆ.

Follow Us:
Download App:
  • android
  • ios