ಉಡುಪಿ(ಅ.22): ಪ್ರಸ್ತುತ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸಂಕಷ್ಟದಿಂದ ಪಾರಾಗುವಂತೆ ಅವರ ಆಪ್ತರೊಬ್ಬರು ಸೋಮವಾರ ತಮ್ಮ ವೈಯಕ್ತಿಕ ಶತಚಂಡಿಕಾಯಾಗದ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರ ಧಾರ್ಮಿಕ ಮಾರ್ಗದರ್ಶಕರೆನ್ನಲಾದ, ಬೆಂಗಳೂರಿನ ವಾಸ್ತುತಜ್ಞ - ಜ್ಯೋತಿಷಿ ಆರಾಧ್ಯ ಎಂಬವರು ಪ್ರತಿ ತಿಂಗಳು ಕುಂದಾಪುರದಕೊಲ್ಲೂರಿನಲ್ಲಿ ಚಂಡಿಕಾಯಾಗ ನಡೆಸುತ್ತಾರೆ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ಅಂತೆಯೇ ಸೋಮವಾರ ಶತಚಂಡಿಕಾಯಾಗ ನಡೆಸಿದ್ದು, ಈ ಸಂದರ್ಭದಲ್ಲಿ ತಮ್ಮ ಕುಟುಂಬಸ್ಥರ ಹೆಸರುಗಳ ಜೊತೆ ಡಿ.ಕೆ.ಶಿವಕುಮಾರ್‌ ಅವರ ಹೆಸರನ್ನೂ ಹೇಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಿರಿಯ ಅರ್ಚಕ ನರಸಿಂಹ ಅಡಿಗ ನೇತೃತ್ವದಲ್ಲಿ ಬಿ.ಎಂ. ಮಂಜುನಾಥ ಅಡಿಗ ಅವರು ಈ ಯಾಗವನ್ನು ನಡೆಸಿದ್ದಾರೆ.

'ಓಟ್ ಬೇಕಾ, ರಸ್ತೆ ಸರಿ ಮಾಡಿ ಬನ್ನಿ', ಕೆಲ್ಸ ಮಾಡ್ಸೋಕೆ ಬ್ಯಾನರ್ ಹಾಕಿದ್ರು ಜನ..!