ಉಡುಪಿ(ನ.13): ಮಹಾರಾಷ್ಟ್ರದಲ್ಲಿ ಬಿಜೆಪಿ ಈಗಲೂ ಶಿವಸೇನೆಯೊಂದಿಗೆ ಸರ್ಕಾರ ರಚಿಸಲು ಸಿದ್ಧವಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಜನಾದೇಶ ಇದೆ. ಆದರೆ ಬಹುಕಾಲ ಮಿತ್ರರಾಗಿದ್ದ ಶಿವಸೇನೆಯವರು ಅಧಿಕಾರಕ್ಕಾಗಿ ಈಗ ನಾಟಕವಾಡುತ್ತಿಕದ್ದಾರೆ. ಇದು ಅವರಿಗೆ ಶೋಭೆ ತರುವಂತಹದಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದವರು ಅಭಿಪ್ರಾಯಪಟ್ಟರು. ಬಿಜೆಪಿಯ ಅರ್ಧದಷ್ಟೂ ಶಾಸಕರು ಶಿವಸೇನೆಯಲ್ಲಿಲ್ಲ, ಆದರೂ ಸುದೀರ್ಘ ಕಾಲ ಮಿತ್ರರಾಗಿದ್ದ ಶಿವಸೇವೆ ಮುಂದೆ ಬಂದರೆ ಬಿಜೆಪಿ ಸರ್ಕಾರ ರಚಿಸುತ್ತದೆ ಮತ್ತು ಶಿವಸೇನೆಗೆ ಅದೇ ಪ್ರೀತಿ ವಿಶ್ವಾಸ ನೀಡುತ್ತದೆ ಎಂದವರು ಹೇಳಿದ್ದಾರೆ.

17 ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೊಂಚ ರಿಲೀಫ್

ಮಹಾರಾಷ್ಟ್ರದ ರಾಜ್ಯಪಾಲರು ಸಹಜ ನ್ಯಾಯದಂತೆ ಮೊದಲಿಗೆ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದರು, ಬಿಜೆಪಿ ಸರ್ಕಾರ ರಚಿಸಲಿಲ್ಲ, ನಂತರ ಶಿವಸೇನೆಯನ್ನು ಕರೆದರು, ಇಂದು ಎನ್‌ಸಿಪಿಯನ್ನು ಕರೆದಿದ್ದಾರೆ, ನಾಳೆ ಕಾಂಗ್ರೆಸ್ ನವರನ್ನು ಕರೆಯುತ್ತಾರೆ. ಆದರೆ ಯಾರಿಂದಲೂ ಸರ್ಕಾರ ಮಾಡಲಿಕ್ಕಾಗುತ್ತಿಲ್ಲ. ಮುಂದೆ ರಾಷ್ಟ್ರಪತಿ ಆಳ್ವಿಕೆಯೋ ಚುನಾವಣೆಯೋ ನೋಡೋಣ ಎಂದು ಡೀವಿ ಹೇಳಿದರು.

ತೀರ್ಪಿನ ನಂತರ ನಿರ್ಣಯ:

ರಾಜ್ಯದ ಅನರ್ಹ ಶಾಸಕರ ಬಗ್ಗೆ ಇಂದು (ಬುಧವಾರ) ತೀರ್ಪು ಹೊರ ಬೀಳಲಿದೆ. ತೀರ್ಪು ಬಂದ ಮೇಲೆ ಮುಂದೇನೂ ಎನ್ನುವುದನ್ನು ನಿರ್ಣಯ ಮಾಡುತ್ತೇವೆ ಎಂದ ಸದಾನಂದ ಗೌಡ ಹೇಳಿದರು. ಒಂದು ಕಡೆ ಉಪಚುನಾವಣೆಯಲ್ಲಿ ಜನರ ತೀರ್ಪು, ಇನ್ನೊಂದು ಕಡೆ ನ್ಯಾಯಾಲಯದ ತೀರ್ಪು. ನಾವು ನ್ಯಾಯಾಲಯದ ತೀರ್ಪನ್ನು ಅಷ್ಟೇ ಗೌರವದಿಂದ ಕಾಣುತ್ತೇವೆ ಎಂದವರು ಹೇಳಿದ್ದಾರೆ.

ಮಂಗಳೂರಿಗೆ ಬಂದ ಎರಡನೇ ಪ್ರವಾಸಿ ನೌಕೆ, ಕರಾವಳಿಯ ಸೊಬಗು ಸವಿದ ವಿದೇಶಿಗರು