Karnataka bandh: ಉಡುಪಿಯಲ್ಲಿ ಅಂಗಡಿ-ಮುಂಗಟ್ಟು ಮುಚ್ಚಿದ ಮುಸ್ಲಿಂ ವ್ಯಾಪಾರಿಗಳು
ಕರ್ನಾಟಕ ಬಂದ್ ಹಿನ್ನೆಲೆ ಮುಸ್ಲಿಮರು ವ್ಯಾಪಾರ-ವಹಿವಾಟು ಸ್ಥಗಿತಗೊಳಿಸುವಂತೆ ಕರೆ ನೀಡಲಾಗಿತ್ತು. ಈ ಕಾರಣಕ್ಕೆ ಉಡುಪಿಯಲ್ಲಿ ಮುಸ್ಲಿಂ ವ್ಯಾಪಾರಿಗಳು ಅಂಗಡಿ-ಮುಂಗಟ್ಟು ಮುಚ್ಚಿದರು. ಆದರೆ ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ - ಶಶಿಧರ ಮಾಸ್ತಿಬೈಲು
ಉಡುಪಿ (ಮಾ.17): ಹಿಜಾಬ್ (Hijab) ವಿಚಾರದಲ್ಲಿ ಹೈಕೋರ್ಟ್ (Karnataka Highcourt ) ನೀಡಿರುವ ತೀರ್ಪು ನಮಗೆ ಸಮ್ಮತವಲ್ಲ ಎಂದು ವಿವಿಧ ಮುಸ್ಲಿಂ ಸಂಘಟನೆಗಳು (Muslim organization) ಹೇಳುತ್ತಿವೆ. ಈ ಅಸಮಾಧಾನವನ್ನು ಹೊರ ಹಾಕಲು ಇಂದು ರಾಜ್ಯದ ಎಲ್ಲಾ ಮುಸ್ಲಿಂ ವ್ಯಾಪಾರಿಗಳು (Muslim merchants) ತಮ್ಮ ವಹಿವಾಟು ಸ್ಥಗಿತ ಮಾಡುವಂತೆ ಮುಸ್ಲಿಂ ಮುಖಂಡರು ಕರೆ ನೀಡಿದ್ದರು. ಉಡುಪಿ (Udupi) ಜಿಲ್ಲೆಯಲ್ಲಿ ಮುಸ್ಲಿಮ್ ಒಕ್ಕೂಟ ಕರೆ ನೀಡಿದ್ದ ಬಂದ್ ಗೆ, ಸಹಜವಾಗಿಯೇ ಮುಸ್ಲಿಮರು ಪೂರಕವಾಗಿ ಸ್ಪಂದಿಸಿದ್ದಾರೆ. ಶೇಕಡ 99ರಷ್ಟು ಅಂಗಡಿ ಮುಂಗಟ್ಟುಗಳನ್ನು (shops) ಮುಚ್ಚಿದ್ದಾರೆ.
ನಗರದ ಜಾಮಿಯಾ ಮಸೀದಿ (jamia masjid) ಆವರಣದಲ್ಲಿರುವ ಎಲ್ಲಾ ಹೋಟೇಲು, ಚಪ್ಪಲಿ ಅಂಗಡಿಗಳು ಬಾಗಿಲು ಹಾಕಿತ್ತು. ಹೂವಿನ ಅಂಗಡಿಗಳನ್ನು ಕೂಡ ತೆರೆದಿಲ್ಲ. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಕಾರಣಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮುಸಲ್ಮಾನರ ಅಂಗಡಿಗಳನ್ನು ಹೊರತುಪಡಿಸಿದರೆ ಬೇರೆ ಯಾವ ಧರ್ಮೀಯರೂ ಕೂಡ ಈ ಬಂದ್ ಗೆ ಬೆಂಬಲ ವ್ಯಕ್ತಪಡಿಸಿಲ್ಲ. ದೊಡ್ಡ ದೊಡ್ಡ ಅಂಗಡಿ, ಮಳಿಗೆಗಳು ಮುಚ್ಚಿರುವುದನ್ನು ಕಂಡು, ಬೀದಿ ವ್ಯಾಪಾರಿಗಳು ಕೂಡ ಅನಿವಾರ್ಯವಾಗಿ ಬೇಸರದಿಂದಲೇ ವಹಿವಾಟು ಸ್ಥಗಿತಗೊಳಿಸಿದರು.
KARNATAKA BANDH: ಹಿಜಾಬ್‌ಗಾಗಿ ಕರ್ನಾಟಕ ಬಂದ್, ಸಿದ್ದರಾಮಯ್ಯ ಸಮರ್ಥನೆ
ಹಿಜಬ್ ವಿವಾದ (Hijab Row) ವಿಚಾರದಲ್ಲಿ ಉಡುಪಿ ಜಿಲ್ಲೆಯೇ ಕೇಂದ್ರಸ್ಥಾನವಾಗಿದೆ. ಹಾಗಾಗಿ ಸಹಜವಾಗಿಯೇ ಬಂದ್ ಗೆ ಬೆಂಬಲ ವ್ಯಕ್ತಗೊಂಡಿದೆ. ಎಲ್ಲಾ ಮುಸಲ್ಮಾನರು ಈ ದಿನ ಮನೆಯೊಳಗೇ ಇದ್ದು ತಮ್ಮ ಬೇಸರವನ್ನು ವ್ಯಕ್ತಪಡಿಸಬೇಕು ಎಂದು ಧರ್ಮಗುರುಗಳು ತಿಳಿಸಿದ್ದರು. ಇಷ್ಟಾದರೂ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ತರಗತಿಗಳಿಗೆ ಹಾಜರಾಗುವ ಮೂಲಕ ಶಿಕ್ಷಣದ ಪರ ತಮ್ಮ ನಡೆಯನ್ನು ತೋರಿಸಿದ್ದಾರೆ. ವಿವಾದ ಆರಂಭವಾದ ಸರಕಾರಿ ಪದವಿಪೂರ್ವ ಹೆಮ್ಮಕ್ಕಳ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗಳಿಗೆ ಬಂದಿದ್ದರು. ಆದರೆ ಕಾಲೇಜುಗಳಲ್ಲಿ ಎಂದಿಗಿಂತ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಇತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.
ಬಂದ್ ನಡೆಸಿರುವವರನ್ನು ಹೊರತುಪಡಿಸಿದರೆ, ಕೆಲ ಮುಸಲ್ಮಾನರ ಅಂಗಡಿಗಳು ತೆರೆದಿದ್ದವು. ಭಾರತೀಯ ಜನತಾ ಪಕ್ಷದ ಜೊತೆಗೆ ಗುರುತಿಸಿಕೊಂಡಿರುವ ಕೆಲವು ಮುಸ್ಲಿಂ ನಾಯಕರು ಎಂದಿನಂತೆ ವ್ಯಾಪಾರ-ವಹಿವಾಟು ನಡೆಸಿದರು. ಖಾಸಗಿ ಬಸ್ ನಡೆಸುವ ಮುಸ್ಲಿಂ ಮಾಲಕರಿಗೆ ಕೂಡ ಬಂದ್ ಗೆ ಬೆಂಬಲ ವ್ಯಕ್ತಪಡಿಸುವಂತೆ ಕರೆ ನೀಡಲಾಗಿತ್ತು. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಮುಸ್ಲಿಂ ಮಾಲಕತ್ವದ ಖಾಸಗಿ ಬಸ್ಸುಗಳು ಕರಾವಳಿ ಜಿಲ್ಲೆಗಳಲ್ಲಿ ಎಗ್ಗಿಲ್ಲದೆ ಓಡಾಡಿದವು. ಈ ಮೂಲಕ ಬಂದ್ ಗಿಂತಲೂ ಸಾರ್ವಜನಿಕರ ಹಿತದೃಷ್ಟಿ ಮುಖ್ಯ ಎಂದು ಸಾರಿದವು.
Karnataka Hookah Bars: ಹುಕ್ಕಾಬಾರ್ ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಸರ್ಕಾರದ ಅಸಹಾಯಕತೆ
ಮುಸ್ಲಿಂ ವ್ಯಾಪಾರಿಗಳ ಈ ನಡೆಗೆ ಹಿಂದೂ ಸಂಘಟನೆಗಳು (Hindu organization) ಆಕ್ರೋಶ ವ್ಯಕ್ತಪಡಿಸಿವೆ. ಬಹಿರಂಗ ಹೇಳಿಕೆ ನೀಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಯಾಗುತ್ತಿದೆ. ಇಂದು ಮುಚ್ಚಿರುವ ಅಂಗಡಿಗಳು ಶಾಶ್ವತವಾಗಿ ಮುಚ್ಚುವಂತೆ ನೋಡಿಕೊಳ್ಳುವುದು ಹಿಂದೂ ಗ್ರಾಹಕರ ಜವಾಬ್ದಾರಿ ಎಂದು, ಕಿಡಿಕಾರಿವೆ. ಘನ ನ್ಯಾಯಾಲಯ ನೀಡಿರುವ ತೀರ್ಪಿಗೆ ಅಗೌರವ ತೋರಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.